ಶಿವಮೊಗ್ಗ ಲೈವ್.ಕಾಂ | 14 ಡಿಸೆಂಬರ್ 2018
ಹಣ ದುರುಪಯೋಗ ಮಾಡಿರುವ ಆರೋಪದ ಹಿನ್ನೆಲೆ ಪಿಡಿಓ ಒಬ್ಬರನ್ನು ಅಮಾನತು ಮಾಡಲಾಗಿದೆ. ಈ ಸಂಬಂಧ ಜಿಲ್ಲಾ ಪಂಚಾಯಿತಿ ಸಿಇಓ ಶಿವರಾಮೇಗೌಡ ಆದೇಶ ಹೊರಡಿಸಿದ್ದಾರೆ.
ಕೋಣಂದೂರು ಗ್ರಾಮ ಪಂಚಾಯಿತಿಯ ಪಿಡಿಓ ಕೆ.ಎಸ್.ಕುಮಾರ್ ಅಮಾನತುಗೊಂಡವರು. ಮುಖ್ಯ ಲೆಕ್ಕಾಧಿಕಾರಿ ನೀಡಿದ ವರದಿ ಅನುಸಾರ ಕೆ.ಸಿ.ಎಸ್ (ಸಿಸಿಎ) ನಿಯಮ 10ರ ಅಡಿಯಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ.
ಪಿಡಿಓ ಅಮಾನತಿಗೆ ಕಾರಣಗಳೇನು?
ಪಿಡಿಓ ಕೆ.ಎಸ್.ಕುಮಾರ್, ಹಿಂದಿನ ಪಿಡಿಓ ಸಹಿ ಫೋರ್ಜರಿ ಮಾಡಿ, ಬಹಳಷ್ಟು ಬಿಲ್’ಗಳನ್ನು ಡ್ರಾ ಮಾಡಿಕೊಂಡಿದ್ದಾರೆ. ಇದಿಷ್ಟೇ ಅಲ್ಲ. ಮನೆ, ನೀರಿನ ಕಂದಾಯದ ಹಣವನ್ನು ಬ್ಯಾಂಕ್’ಗೆ ಪಾವತಿ ಮಾಡಿಲ್ಲ. ಖಾತೆ ಬದಲಾವಣೆ, ನರೇಗಾ ಯೋಜನೆಯಡಿ ಫಲಾನುಭವಿಗಳಿಗೆ ನೀಡಬೇಕಾದ ಲಕ್ಷಾಂತರ ರೂಪಾಯಿ ಹಣ ಪವಾತಿಸದೇ ದುರುಪಯೋಗ ಪಡಿಸಿಕೊಂಡಿದ್ದಕ್ಕೆ ಅಮಾನತು ಮಾಡಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494
ಈ ಮೇಲ್ | [email protected]