ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗ ಲೈವ್.ಕಾಂ | 3 ಜನವರಿ 2019
ತೀರ್ಥಹಳ್ಳಿಯ ಅಕ್ರಮ ಮರಳು ದಂಧೆಕೋರರ ಜಿಲ್ಲಾ ಅಪರಾಧ ಪತ್ತೆ ದಳ (ಡಿಸಿಬಿ) ಚುರುಕು ಮುಟ್ಟಿಸಿದೆ. ಇವತ್ತು ಏಕಕಾಲಕ್ಕೆ ವಿವಿಧೆಡೆ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿದ ಡಿಸಿಬಿ ಪೊಲೀಸರು, ಸುಮಾರು 58 ಲೋಡ್ ಮರಳು ವಶಕ್ಕೆ ಪಡೆದಿದೆ.
ಎಲ್ಲೆಲ್ಲಿ ದಾಳಿಯಾಯ್ತು? ಎಷ್ಟೆಷ್ಟು ಮರಳು ಸಿಕ್ತು?
ದಾಳಿ 1 |
ಕುಶಾವತಿ ಹೊಳೆ ಹಾಗೂ ಮಜ್ಜಿಗೆ ಹೊಳೆ ಸೇರುವ, ಕಿತ್ತನೆಗದ್ದೆ ಗ್ರಾಮದ ಅವಿನ್ ಡಿಸೋಜ ಎಂಬುವರ ಮನೆ ಹಿಂಭಾಗದ ಹೊಳೆಪಾತ್ರದ ಮರಳು ಅಡ್ಡೆ ಮೇಲೆ ರೇಡ್ ಮಾಡಲಾಯಿತು. ಉತ್ತರ ಪ್ರದೇಶ ಮತ್ತು ಚಿತ್ರದುರ್ಗದ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಇಲ್ಲಿ ಅಕ್ರಮವಾಗಿ ಮರಳು ತೆಗೆದು ಸಾಗಣೆ ಮಾಡಲಾಗುತ್ತಿತ್ತು.

ದಾಳಿ 2 |
ಶಿರುಪತಿ ಗ್ರಾಮದ ಬಾಬು ಷಾ ಎಂಬುವವರ ಮನೆಯ ಕೋಳಿ ಪಾರಂ ಪಕ್ಕದಲ್ಲಿ, ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು ಆರು ಲೋಡ್’ನಷ್ಟು ಮರಳು ವಶಕ್ಕೆ ಪಡೆಯಲಾಯಿತು.

ದಾಳಿ 3 |
ಕುರುವಳ್ಳಿ ಗ್ರಾಮದ ಯೋಗಿಂದ್ರ ಎಂಬುವವರು ಕುಶಾವತಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು, ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದರು. ಇದರ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಮರಳು ವಶಕ್ಕೆ ಪಡೆಯಲಾಗಿದೆ.

ಯಾರೆಲ್ಲರ ಮೇಲೆ ಕೇಸ್? ಏನೇನು ಸೀಜ್?
ಶಿರುಪತಿ ಗ್ರಾಮದ ಬಾಬುಷಾ, ಅವಿನ್ ಡಿಸೋಜ, ಸೀಬಿನಕೆರೆಯ ಸುದೀಪ ಶೆಟ್ಟಿ, ಪಿಕಪ್ ಚಾಲಕ ನಂದನ್, ಟಿಪ್ಪರ್ ಚಾಲಕ ವರದರಾಜ್ ಸೇರಿದಂತೆ ಉತ್ತರಪ್ರದೇಶದ ಆರು ಮತ್ತು ಚಿತ್ರದುರ್ಗದ ಐವರು ಕೂಲಿ ಕಾರ್ಮಿಕರ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 58 ಲೋಡ್ ದಾಸ್ತಾನು ಮರಳು, ಒಂದು ಟಿಪ್ಪರ್, ಒಂದು ಪಿಕಪ್ ವಾಹನ ವಶಕ್ಕೆ ಪಡೆಯಲಾಗಿದೆ.
ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ, ಹೆಚ್ಚುವರಿ ಎಸ್ಪಿ ಮುತ್ತುರಾಜ್ ಮಾರ್ಗದರ್ಶನದಲ್ಲಿ ಡಿಸಿಬಿ ಇನ್ಸ್’ಪೆಕ್ಟರ್ ಕುಮಾರ್ ಮತ್ತು ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494
ಈ ಮೇಲ್ | shivamoggalive@gmail.com






