ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 3 ಅಕ್ಟೋಬರ್ 2020
ಶತಮಾನದ ಸೇತುವೆ ಕುಸಿದು ಸ್ಥಗಿತವಾಗಿದ್ದ ತೀರ್ಥಹಳ್ಳಿ ಆಗುಂಬೆ ವಾಹನ ಸಂಚಾರ ಪುನಾರಂಭವಾಗಿದೆ. ಲಾರಿ, ಬಸ್ಸುಗಳು ಸೇರಿ ಎಲ್ಲ ವಾಹನಗಳು ಸಂಚಾರ ಸರಾಗವಾಗಿದೆ.
ರಾಷ್ಟ್ರೀಯ ಹೆದ್ದಾರಿ 169ರಲ್ಲಿ ರಂಜದಕಟ್ಟೆ ಬಳಿ ಸೇತುವೆ ಕುಸಿದಿತ್ತು. ಶತಮಾನದ ಹಿಂದೆ ನಿರ್ಮಿಸಲಾಗಿದ್ದ ಸೇತುವೆ, ನಿರ್ವಹಣೆಯ ಕೊರತೆಯಿಂದಾಗಿ ಕುಸಿತ ಕಂಡಿತ್ತು. ಹಾಗಾಗಿ ವಾಹನ ಸಂಚಾರ ನಿರ್ಬಂಧಿಸಿ ಪರ್ಯಾಯ ಮಾರ್ಗ ಸೂಚಿಸಲಾಗಿತ್ತು. ಸೇತುವೆ ಕುಸಿದ ಜಾಗದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.
VIDEO REPORT
ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ಸೇತುವೆ ಮೇಲೆ ಬಸ್ಸು, ಲಾರಿ ಸೇರಿದಂತೆ ಎಲ್ಲ ಬಗೆಯ ವಾಹನಗಳು ಸಂಚರಿಸಬಹುದಾಗಿದೆ. ಹಗಲು, ರಾತ್ರಿ ಕೆಲವ ಮಾಡಿ, ಕೆಲವೆ ಗಂಟೆಯಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದೆ. ನೀರು ಸರಾಗವಾಗಿ ಹರಿದು ಹೋಗಲು ಪೈಪುಗಳನ್ನು ಅಳವಡಿಸಿ, ಮಣ್ಣು ಹಾಕಿ ಭದ್ರವಾಗಿ ಸೇತುವೆ ನಿರ್ಮಿಸಲಾಗಿದೆ.
ನ್ಯಾಷನಲ್ ಕನ್ಸ್ ಟ್ರಕ್ಷನ್ ಸಂಸ್ಥೆ ತುರ್ತಾಗಿ ತಾತ್ಕಾಲಿಕ ಸೇತುವೆ ನಿರ್ಮಿಸಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ತೀರ್ಥಹಳ್ಳಿಯಿಂದ ಆಗುಂಬೆ, ಮಣಿಪಾಲ, ಉಡುಪಿ, ಮಂಗಳೂರು ನಡುವೆ ವಾಹನ ಸಂಚಾರ ಪುನಃ ಆರಂಭವಾದಂತಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422