ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 2 JANUARY 2025
ತೀರ್ಥಹಳ್ಳಿ : ತುಂಗಾ ನದಿ ದಂಡೆ ಮೇಲೆ ಎಳ್ಳಮವಾಸ್ಯೆಯ ತೆಪ್ಪೋತ್ಸವ (Teppotsava) ವಿಜೃಂಭಣೆಯಿಂದ ನೆರವೇರಿತು. ತೆಪ್ಪೋತ್ಸವ ಸಂದರ್ಭ ಬಾನಂಗಳದಲ್ಲಿ ಸಿಡಿಮದ್ದುಗಳ ಆಕರ್ಷಕ ಚಿತ್ತಾರ ಜನರ ಕಣ್ಮನ ಸೆಳೆಯಿತು.
ತುಂಗಾ ನದಿಯಲ್ಲಿ ಶ್ರೀರಾಮೇಶ್ವರ ದೇವರ ಉತ್ಸವಮೂರ್ತಿಯ ಆಕರ್ಷಕ ತೆಪ್ಪೋತ್ಸವ ನಡೆಯಿತು. ದೇವರ ತೆಪ್ಪವನ್ನು ವಿಭಿನ್ನವಾಗಿ ಅಲಂಕರಿಸಲಾಗಿತ್ತು. ತೆಪ್ಪೋತ್ಸವ ಆರಂಭಾಗುತ್ತಿದ್ದಂತೆ ಜನರು ಭಕ್ತಿಯಿಂದ ದೇವರಿಗೆ ನಮಿಸಿದರು.
ರಾಮ ದೇವರಿಗೆ ತೆಪ್ಪೋತ್ಸವದ ದೀಪ ಬೆಳಗುತ್ತಿದ್ದಂತೆ ಸಿಡಿಮದ್ದು ಪ್ರದರ್ಶನ ಆರಂಭವಾಯಿತು. ಬಹು ಹೊತ್ತು ಸಿಡಿಮದ್ದುಗಳು ಆಗಸದಲ್ಲಿ ಬಣ್ಣ ಬಣ್ಣದ ಚಿತ್ತಾರ ಬಿಡಿಸಿದವು. ಜನ ಈ ವೈಭವನ್ನು ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿದು ಸಂಭ್ರಮಿಸಿದರು.ತುಂಗೆಯ ದಡದಲ್ಲಿ ಸಿಡಿಮದ್ದು ಪ್ರದರ್ಶನ
ಎಲ್ಲೆಲ್ಲೂ ಜನವೋ ಜನ
ಶ್ರೀರಾಮೇಶ್ವರ ದೇವರ ಜಾತ್ರೆಯ ಪ್ರಮುಖ ಆಕರ್ಷಣೆ ತೆಪ್ಪೋತ್ಸವ ಮತ್ತು ಸಿಡಿಮದ್ದು ಪ್ರದರ್ಶನ. ಇದನ್ನು ಕಣ್ತುಂಬಿಕೊಳ್ಳಲು ಭಾರಿ ಸಂಖ್ಯೆಯ ಜನರು ತುಂಗಾ ನದಿಯ ದಂಡೆ ಮೇಲೆ ಸೇರಿದ್ದರು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ಜನರು ಆಗಮಿಸಿದ್ದರು. ಪಟಾಕಿ ಸಿಡಿದಾಗ ಜನರು ಸಂಭ್ರಮಿಸುತ್ತಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಇನ್ನು, ಶೋಕಾಚರಣೆ ಹಿನ್ನೆಲೆ ಈ ಬಾರಿ ವೇದಿಕೆ ಕಾರ್ಯಕ್ರಮ ರದ್ದು ಮಾಡಲಾಗಿತ್ತು.
ಶಾಸಕ ಆರಗ ಜ್ಞಾನೇಂದ್ರ, ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ, ಜಾತ್ರಾ ಸಮಿತಿ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ, ಮುಖ್ಯಾಧಿಕಾರಿ ಡಿ.ನಾಗರಾಜ ಸೇರಿ ಹಲವರು ಇದ್ದರು.
ಇದನ್ನೂ ಓದಿ » ವರ್ಷದ ಮೊದಲ ದಿನವೇ 1 ಲಕ್ಷ ರೂ. ಲಂಚ ಪಡೆಯುತ್ತಿದ್ದ ಅಧಿಕಾರಿ ಅರೆಸ್ಟ್, ಸಿಕ್ಕಿಬಿದ್ದಿದ್ದು ಹೇಗೆ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422