ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 21 JULY 2023
SHIMOGA : ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಳವಾದಂತೆ ತುಂಗಾ ಜಲಾಶಯದ (Dam) ಒಳ ಹರಿವು ಏರಿಕೆಯಾಗುತ್ತಿದೆ. ಪ್ರಸ್ತುತ ಜಲಾಶಯದಿಂದ 18,402 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಅಷ್ಟೇ ಪ್ರಮಾಣದ ಒಳ ಹರಿವು ಇದೆ ಎಂದು ತಿಳಿದು ಬಂದಿದೆ.
ಸದ್ಯ ತುಂಗಾ ಜಲಾಶಯದ 8 ಗೇಟ್ಗಳ ಮೂಲಕ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಸಂಜೆ ಹೊತ್ತಿಗೆ ಮಳೆ ಹೆಚ್ಚಳವಾಗುತ್ತಿದ್ದು ಜಲಾಶಯಕ್ಕೆ (Dam) ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆ ಸಂಜೆ ವೇಳೆಗೆ ಹೆಚ್ಚಿನ ಗೇಟ್ಗಳನ್ನು ತೆಗೆದು ನೀರನ್ನು ಹೊಳೆಗೆ ಹರಿಸುವ ಸಾಧ್ಯತೆ ಇದೆ.
ಎಲ್ಲಾ ಗೇಟ್ ಓಪನ್ ಮಾಡಲಾಗಿತ್ತು
ಗುರುವಾರ ಸಂಜೆ ವೇಳೆಗೆ ಜಲಾಶಯಕ್ಕೆ ಒಳ ಹರಿವು ಏರಿಕೆಯಾಗಿತ್ತು. ಈ ಹಿನ್ನೆಲೆ ಜಲಾಶಯದ ಎಲ್ಲ 16 ಗೇಟ್ಗಳನ್ನು ಮೇಲೆತ್ತಲಾಗಿತ್ತು. ಈ ಮಳೆಗಾಲದಲ್ಲಿ ಇದೇ ಮೊದಲ ಬಾರಿ ಎಲ್ಲಾ ಗೇಟ್ಗಳನ್ನು ಮೇಲೆತ್ತಿ ನೀರನ್ನು ಹೊರಬಿಡಲಾಗಿದೆ. ಗುರುವಾರ ಬೆಳಗ್ಗೆವರೆಗೆ 27 ಸಾವಿರ ಕ್ಯೂಸೆಕ್ ಒಳ ಹರಿವು ಇತ್ತು. ಮಧ್ಯಾಹ್ನದ ಹೊತ್ತಿಗೆ ಒಳ ಹರಿವು 33 ಸಾವಿರ ಕ್ಯೂಸೆಕ್ಗೆ ಏರಿಕೆಯಾಗಿತ್ತು. ಈ ಅವಧಿಯಲ್ಲಿ ಇದೆ ಗರಿಷ್ಠ ಒಳ ಹರಿವು.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಕಳೆಗಟ್ಟಿದ ಮಳೆ, ಅಲ್ಲಲ್ಲಿ ಮರಗಳು ಧರೆಗೆ, ಕೆಲವೆಡೆ ಗೋಡೆ ಕುಸಿತ, ಛಾವಣಿಗೆ ಹಾನಿ
ಶಿವಮೊಗ್ಗದಲ್ಲಿ ಹೆಚ್ಚಿದ ನೀರಿನ ಮಟ್ಟ
ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊಳೆಗೆ ಹರಿಸಿದ್ದರಿಂದ ಶಿವಮೊಗ್ಗದಲ್ಲಿ ತುಂಗಾ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಬೈಪಾಸ್ ರಸ್ತೆ ಮತ್ತು ವಿದ್ಯಾನಗರ ಸಮೀಪದ ತುಂಗಾ ಸೇತುವೆಗಳ ಮೇಲೆ ನಿಂತು ಜನರು ಕುತೂಹಲದಿಂದ ನೀರಿನ ಹರಿವು ವೀಕ್ಷಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422