ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS |1 JANUARY 2023
ತೀರ್ಥಹಳ್ಳಿ : ತಾಲೂಕಿನಲ್ಲಿ ಕಾಡಾನೆ (wild elephant) ಪುನಃ ಪ್ರತ್ಯಕ್ಷವಾಗಿದೆ. ಮಧ್ಯರಾತ್ರಿ ಕಾಣಿಸಿಕೊಂಡಿರುವ ಆನೆ ತೋಟದ ಬೇಲಿ ಮುರಿದಿದೆ. ಅಲ್ಲಿಂದ ಎಂಪಿಎಂ ಪ್ಲಾಂಟೇಷನ್ ಕಡೆಗೆ ಹೋಗಿರುವ ಸಾದ್ಯತೆ ಇದೆ. ವಿಚಾರ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ರಾತ್ರಿ 2 ಗಂಟೆ ಹೊತ್ತಿಗೆ ತೀರ್ಥಹಳ್ಳಿಯ ಮೇಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಳುವೆ ಗ್ರಾಮದಲ್ಲಿ ಕಾಡಾನೆ (wild elephant) ಕಾಣಿಸಿಕೊಂಡಿದೆ. ತೋಟಗಳಿಗೆ ಹಾಕಿದ್ದ ಬೇಲಿ ಹಾನಿ ಮಾಡಿದೆ. ಮನೆಯೊಂದರ ಬೇಲಿಯನ್ನು ಕಿತ್ತು ಹಾಕಿದೆ. ಆದರೆ ತೋಟಗಳಿಗೆ ಹಾನಿ ಮಾಡಿಲ್ಲ. ಬಳಿಕ ಕಾಡಾನೆಯು ಎಂಪಿಎಂ ಅರಣ್ಯಕ್ಕೆ ಹೋಗಿರುವ ಸಾದ್ಯತೆ ಇದೆ.
ಅರಣ್ಯಾಧಿಕಾರಿಗಳು ದೌಡು
ತೀರ್ಥಹಳ್ಳಿ ಪಟ್ಟಣಕ್ಕೆ ಸಮೀಪದಲ್ಲೆ ತಳುವೆ ಗ್ರಾಮವಿದೆ. ಕಾಡಾನೆ ಕಾಣಿಸಿಕೊಂಡ ವಿಚಾರ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆನೆ ಓಡಾಡಿದ ಜಾಗದಲ್ಲಿ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದರು. ಸ್ಥಳೀಯರು ಕೂಡ ಆನೆಯ ಶೋಧ ಕಾರ್ಯಕ್ಕೆ ನೆರವಾಗಿದ್ದಾರೆ.
ಕುರುವಳ್ಳಿಯಲ್ಲಿ ಕಾಣಿಸಿತ್ತು
ಶನಿವಾರ ಬೆಳಗಿನ ಜಾವ ತೀರ್ಥಹಳ್ಳಿ ಪಟ್ಟಣ ಸಮೀಪದ ಕುರುವಳ್ಳಿಯಲ್ಲಿ ಕಾಡಾನೆ ಪ್ರತ್ಯಕ್ಷವಾಗಿತ್ತು. ವಿವಿಧೆಡೆ ಓಡಾಡಿದ್ದ ಕಾಡಾನೆ, ಕಾಂಪೌಂಡ್, ಅಂಗಡಿಯ ಬೋರ್ಡ್ ಹಾನಿಗೊಳಿಸಿತ್ತು. ಪಟ್ಟಣ ಸಮೀಪ ಆನೆ ಕಾಣಿಸಿಕೊಂಡ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳೀಯರು ಆತಂಕಕ್ಕೀಡಾಗಿದ್ದರು. ತುಂಗಾ ನದಿ ತೀರದಲ್ಲಿ ಆನೆಯ ಹೆಜ್ಜೆ ಗುರುತು ಪತ್ತೆಯಾಗಿತ್ತು. ಹಾಗಾಗಿ ಆನೆ ಹೊಳೆ ದಾಟಿ ಹೋಗಿರಬಹುದು ಎಂದು ಜನ ಭಾವಿಸಿದ್ದರು.
ಹೋಂ ಮಿನಿಸ್ಟರ್ ಸೂಚನೆ
ಆನೆ ಕಾಣಿಸಿಕೊಂಡ ವಿಚಾರ ತಿಳಿಯುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅರಣ್ಯ ಇಲಾಖೆ ಅಧಿಕಾರಿಗಳನ್ನ ಸಂಪರ್ಕಿಸಿದ್ದಾರೆ. ಜನವಸತಿ ಪ್ರದೇಶಕ್ಕೆ ಆನೆ ಪ್ರವೇಶಿಸದಂತೆ ಎಚ್ಚರ ವಹಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ಜನ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಸಿಸಿಎಫ್ ಸ್ಥಳಕ್ಕೆ ದೌಡು
ಕಾಡಾನೆ ಪಟ್ಟಣಕ್ಕೆ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಸಿಸಿಎಫ್ ಹನುಮಂತಪ್ಪ ಅವರು ತೀರ್ಥಹಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳು, ಸಾರ್ವಜನಿಕರ ಜೊತೆಗೆ ಚರ್ಚೆ ನಡೆಸಿದರು. ಆನೆಯ ಚಲನವಲನದ ಮೇಲೆ ನಿಗಾ ವಹಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ – ಬೆಳ್ಳಂಬೆಳಗ್ಗೆ ತೀರ್ಥಹಳ್ಳಿ ಪಟ್ಟಣದಲ್ಲಿ ಕಾಡಾನೆ ಪ್ರತ್ಯಕ್ಷ, ಸ್ಥಳೀಯರಿಗೆ ಢವಢವ, ಅರಣ್ಯಾಧಿಕಾರಿಗಳಿಂದ ಶೋಧ
ಆನೆಯ ಚಲನವಲನ ಗಮನಿಸಲು ಡ್ರೋಣ್ ಕ್ಯಾಮರಾ, ಮುನ್ನೆಚ್ಚರಿಕೆ ಕ್ರಮವಾಗಿ ಔಷಧ, ಆನೆಯನ್ನು ಕಾಡಿಗೆ ಅಟ್ಟಲು ಅನುಕೂಲವಾಗುಂತೆ ಸಾಕಾನೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು. ಅಲ್ಲದೆ ಆನೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅನಾವಶ್ಯಕವಾಗಿ ಜನರು ಮನೆಯಿಂದ ಹೊರ ಬಾರದಂತೆ ತಿಳಿಸಲಾಗುತ್ತಿದೆ. ಆನೆಗೆ ಗಾಬರಿಯಾಗದಂತೆ ನೋಡಿಕೊಳ್ಳಬೇಕಿದೆ. ಹಾಗೆಯೆ ಅದನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಬೇಕಿದೆ ಎಂದು ತಿಳಿಸಿದರು.
ವಲಯ ಅರಣ್ಯಾಧಿಕಾರಿಗಳು ಸೇರಿದಂತೆ ದೊಡ್ಡ ಸಂಖ್ಯೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422