ಕಂಠಪೂರ್ತಿ ಕುಡಿದು ಅಡಿಕೆ ಗಿಡಗಳನ್ನು ನಾಶಪಡಿಸಿದ ಕಿಡಿಗೇಡಿಗಳು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 7 SEPTEMBER 2023

HOLEHONNURU : ಮದ್ಯ ಸೇವಿಸಿ ತೋಟದಲ್ಲಿದ್ದ ಅಡಿಕೆ (Adike) ಗಿಡಗಳನ್ನು ಕಿಡಿಗೇಡಿಗಳು ನಾಶಪಡಿಸಿದ್ದಾರೆ. ಈ ಸಂಬಂಧ ತೋಟದ ಮಾಲೀಕ ಹೊಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ – ಅಡಿಕೆ ಧಾರಣೆ | 5 ಸೆಪ್ಟೆಂಬರ್‌ 2023 | ಎಲ್ಲೆಲ್ಲಿ ಎಷ್ಟಿದೆ ಇವತ್ತಿನ ಅಡಿಕೆ ರೇಟ್?

ಬಿ.ಬೀರನಹಳ್ಳಿ ಗ್ರಾಮದ ಬಿ.ಎನ್.ತಮ್ಮಯ್ಯ ಅವರು ತೋಟದಲ್ಲಿ ಮಂಗಳವಾರ ರಾತ್ರಿ ಕೆಲವರು ಮದ್ಯ ಸೇವನೆ ಮಾಡಿ ಅಡಿಕೆ (Adike) ಗಿಡಗಳನ್ನು ಹಾನಿಗೊಳಿಸಿದ್ದಾರೆ. ನಾಲ್ಕು ವರ್ಷದ ಅಡಿಕೆ ಗಿಡಗಳು ಹಾನಿಯಾಗಿದೆ. ತೋಟದ ಸಮೀಪದಲ್ಲಿ ಬಾರ್‌ ಇದೆ. ಅಲ್ಲಿ ಮದ್ಯ ಖರೀದಿಸಿ ತಮ್ಮ ತೋಟಕ್ಕೆ ತಂದು ಕುಡಿಯುತ್ತಿದ್ದಾರೆ. ತೋಟದಲ್ಲಿಯೇ ಬಾಟಲಿಗಳನ್ನು ಎಸೆದು ಹೋಗುತ್ತಿದ್ದಾರೆ. ಗಾಜಿನ ಚೂರುಗಳು ಕೂಡ ಇಲ್ಲಿ ಬಿದ್ದಿರುತ್ತವೆ ಎಂದು ಆಪಾದಿಸಿ ತಮ್ಮಯ್ಯ ಅವರು ದೂರು ನೀಡಿದ್ದಾರೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment