ವಮೊಗ್ಗದ ಲೈವ್.ಕಾಂ | SHIMOGA NEWS | 7 ಜನವರಿ 2022
ತಮಿಳುನಾಡಿನಲ್ಲಿ ಓಂ ಶಕ್ತಿ ದರ್ಶನ ಪಡೆದು ಶಿವಮೊಗ್ಗಕ್ಕೆ ಮರಳಿರುವ ಆರು ಮಂದಿಯಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ. ಇದು ಜನರಲ್ಲಿ ಆತಂಕ ಮೂಡಿಸಿದೆ.
ಶಿವಮೊಗ್ಗ, ಭದ್ರಾವತಿಯಿಂದ ನಾಲ್ಕು ಸಾವಿರಕ್ಕೂ ಅಧಿಕ ಮಹಿಳೆಯರು, ಮಕ್ಕಳು ಓಂ ಶಕ್ತಿ ದರ್ಶನ ಪಡೆಯಲು ತಮಿಳುನಾಡಿಗೆ ತೆರಳಿದ್ದರು. ಅವರೆಲ್ಲ ಜಿಲ್ಲೆಗೆ ಮರಳುತ್ತಿದ್ದಂತೆ ಪರೀಕ್ಷೆ ನಡೆಸಲಾಗಿದೆ. ಆರು ಮಂದಿಗೆ ಕರೋನ ಸೋಂಕು ತಗುಲಿರುದು ದೃಢವಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು, ‘ಬುಧವಾರ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಗುರುವಾರ ರಾಂಡಮ್ ಟೆಸ್ಟ್ ಮಾಡಿದಾಗ ಮತ್ತೆ ನಾಲ್ವರಿಗೆ ಕರೋನ ಸೋಂಕು ತಗುಲಿರುವುದು ದೃಢವಾಗಿದೆ. ಓಂ ಶಕ್ತಿ ದರ್ಶನ ಪಡೆದು ಬಂದ ಒಟ್ಟು ಆರು ಮಂದಿಗೆ ಸೋಂಕು ತಗುಲಿದೆ’ ಎಂದು ತಿಳಿಸಿದರು.
ಇನ್ನು ಮೂರ್ನಾಲ್ಕು ದಿನ ನಿಗಾ
ಓಂ ಶಕ್ತಿ ದರ್ಶನ ಪಡೆದು ಹಿಂತಿರುಗುವವರಿಗೆ ಏಳು ದಿನ ಹೋಮ್ ಕ್ವಾರಂಟೈನ್’ಗೆ ಒಳಗಾಗುವಂತೆ ಸೂಚಿಸಲಾಗಿತ್ತು. ಅದರ ನಡುವೆ ರಾಂಡಮ್ ಟೆಸ್ಟ್ ಮಾಡಲಾಗುತ್ತಿದೆ. ಈ ವೇಳೆ ಸೋಂಕು ಕಾಣಿಸಿಕೊಳ್ಳುತ್ತಿದೆ.
‘ದರ್ಶನ ಪಡೆದು ಹಿಂತಿರುಗಿದ ದಿನವೆ ಕರೋನಾ ಟೆಸ್ಟ್ ಮಾಡಿದ್ದೇವೆ. ಆ ದಿನವೇ ಪಾಸಿಟಿವ್ ಬರಬೇಕ ಎಂದೇನಿಲ್ಲ. ಮೂರ್ನಾಲ್ಕು ದಿನದ ಬಳಿಕವು ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಇನ್ನೂ ಮೂರ್ನಾಲ್ಕು ದಿನ ಇವರ ಮೇಲೆ ನಿಗಾ ಇಡುತ್ತೇವೆ. ರಾಂಡಮ್ ಟೆಸ್ಟ್ ಮುಂದುವರೆಸುತ್ತೇವೆ’ ಎಂದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಓಂ ಶಕ್ತಿ ಯಾತ್ರಾರ್ಥಿಗಳಿಂದ ಆತಂಕ
ಮೂರನ ಅಲೆ ಕರೋನ ವ್ಯಾಪಕವಾಗಿ ಹರಡುತ್ತಿದ್ದ ಹೊತ್ತಲ್ಲೆ ಓಂ ಶಕ್ತಿ ದರ್ಶನಕ್ಕೆ ತೆರಳಲಾಗಿತ್ತು. ಶಿವಮೊಗ್ಗ, ಭದ್ರಾವತಿಯಿಂದ 80ಕ್ಕೂ ಹೆಚ್ಚು ಬಸ್ಸುಗಳಲ್ಲಿ ಮಹಿಳೆಯರು, ಮಕ್ಕಳು ಪ್ರವಾಸ ಕೈಗೊಂಡಿದ್ದರು. ವಿವಿಧ ದೇಗುಲಗಳಿಗೆ ಭೇಟಿ ನೀಡಿದ ಬಳಿಕ ಶಿವಮೊಗ್ಗಕ್ಕೆ ಹಿಂತಿರುಗಿದ್ದಾರೆ. ನಾಲ್ಕು ಸಾವಿರಕ್ಕೂ ಅಧಿಕ ಮಹಿಳೆಯರು, ಮಕ್ಕಳಿಗೆ ಹೋಮ್ ಕ್ವಾರಂಟೈನ್’ಗೆ ಸೂಚಿಸಲಾಗಿದೆ.
ಈಗ ಆರು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದು ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಓಂ ಶಕ್ತಿ ಪ್ರವಾಸವೇ ಸೂಪರ್ ಸ್ಪ್ರೆಡ್ಡರ್ ಆಗುವ ಭೀತಿಯಲ್ಲಿ ಜಿಲ್ಲಾಡಳಿತ ನಿಗಾ ವಹಿಸಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200