ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 7 DECEMBER 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
HOSANAGARA : ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ನಾಲ್ವರು ಶ್ರೀಗಂಧ (Sandalwood) ಕಳ್ಳರನ್ನು ಬಂಧಿಸಿದ್ದಾರೆ. ನಗರ ವಲಯ ಅರಣ್ಯ ಇಲಾಖೆಯ ಸಿಬ್ಬಂದಿ ಆರ್‌ಎಫ್‌ಓ ಸಂಜಯ್ ಮಾರ್ಗದರ್ಶನಲ್ಲಿ ದಾಳಿ ನಡೆಸಲಾಗಿದೆ.
ನಿವಣೆ ಪರಮೇಶ್ವರ, ಮಾನಿ ಗ್ರಾಮದ ಎಂ.ಕೆ.ಹರೀಶ್, ನಾಗರಕೊಡಿಗೆ ಚಿದಾನಂದ, ಅರುಣ್‌ಕುಮಾರ್ ಬಂಧಿತರು. ಹೊಸನಗರ ತಾಲೂಕಿನ ಹುಂಚ ಹೋಬಳಿ ತೊಗರೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧದ ಮರವನ್ನು ಕಡಿತಲೆ ಮಾಡಿ ಸಾಗಣೆಗೆ ಯತ್ನಿಸಿದ್ದರು.
ಇದನ್ನೂ ಓದಿ- ಮುಷ್ಕರ ಮುಗಿಸಿ ಮನೆಗೆ ಮರಳಿದ ಅಂಗನವಾಡಿ ಕಾರ್ಯಕರ್ತೆಗೆ ಕಾದಿತ್ತು ಶಾಕ್
ಕೃತ್ಯಕ್ಕೆ ಬಳಸಿದ್ದ ಒಂದು ಮೋಟಾರ್ ಸೈಕಲ್ ವಶಕ್ಕೆ ಪಡೆಯಲಾಗಿದೆ. ಸೊನಲೆ ಡಿಆರ್ಎಫ್‌ಒ ನರೇಂದ್ರ, ಯಡೂರು ಪ್ರವೀಣ್, ನಗರ ಅಮೃತ್ ಸುಂಕದ್, ನಿಟ್ಟೂರು ಸತೀಶ್, ಕಸಬಾ ಯುವರಾಜ್, ಹಾಲೇಶ್, ಬೀಟ್ ಫಾರೆಸ್ಟರ್‌ಗಳಾದ ಮನೋಜ್, ಮನೋಜ್ ಕುಮಾರ್, ಯೋಗೀಶ್, ಶಶಿಕುಮಾರ್, ಜೆಸ್ಸಿ, ಸುಮಾ, ಚಾಲಕ ರಾಮು ಗಾಣಿಗ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.