ಮೈಸೂರು – ತಾಳಗುಪ್ಪ ರೈಲಿಗೆ ಪೂಜೆ, ಇಂಜಿನ್‌ ಹತ್ತಿ ಸ್ಥಳೀಯರಿಂದ ಘೋಷಣೆ, ಸಂಭ್ರಮಾಚರಣೆ

Published On : ಆಗಷ್ಟ್ 25, 2023

Published By : ನಿತಿನ್‌ ಆರ್‌.ಕೈದೊಟ್ಲು 

SHIVAMOGGA LIVE NEWS | 24 AUGUST 2023

RIPPONPETE : ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ಮೊದಲ ದಿನ ಎಕ್ಸ್‌ಪ್ರೆಸ್‌ ರೈಲುಗಳು (Trains) ನಿಲುಗಡೆ ನೀಡಿವೆ. ಸ್ಥಳೀಯರು ರೈಲುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಾಚರಣೆ ಮಾಡಿದರು. ಇವೆರಡು ನಿಲ್ದಾಣಗಳಲ್ಲಿ ಎರಡು ಎಕ್ಸ್‌ಪ್ರೆಸ್‌ ರೈಲುಗಳು ನಿಲುಗಡೆಗೆ ನೈಋತ್ಯ ರೈಲ್ವೆ ಒಪ್ಪಿಗೆ ನೀಡಿದೆ.

ರೈಲಿಗೆ ಪೂಜೆ, ಇಂಜಿನ್‌ ಹತ್ತಿ ಘೋಷಣೆ

ಅರಸಾಳು ನಿಲ್ದಾಣಕ್ಕೆ ರೈಲು ಆಗಮಿಸುತ್ತಿದ್ದಂತೆ ಸ್ಥಳೀಯರು ಇಂಜಿನ್‌ಗೆ (Engine) ಹೂವು ಮುಡಿಸಿ, ಬಾಳೆ ಕಂದು ಕಟ್ಟಿ, ಪೂಜೆ ಸಲ್ಲಿಸಿದರು. ಇಂಜಿನ್‌ ಮೇಲೆ ಹತ್ತಿ ನಿಂತು ರೈಲ್ವೆ ಇಲಾಖೆ, ಸಂಸದ ಬಿ.ವೈ.ರಾಘವೇಂದ್ರ ಪರವಾಗಿ ಘೋಷಣೆ ಕೂಗಿದರು. ರೈಲಿನ ಮುಂದೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

ಐತಿಹಾಸ ನಿರ್ಧಾರ ಎಂದು ಖುಷಿ

ಅರಸಾಳು (Arasalu) ನಿಲ್ದಾಣದಲ್ಲಿ ರೈಲುಗಳ (Stations) ನಿಲುಗಡೆಗೆ ಒತ್ತಾಯಿಸಿ ಸ್ಥಳೀಯರು ಹಲವು ಬಾರಿ ಮನವಿ ಸಲ್ಲಿಸಿದ್ದರು. ಈ ಭಾಗದ ಜನರು ರೈಲು ಹತ್ತಲು ಆನಂದಪುರ ಅಥವಾ ಶಿವಮೊಗ್ಗಕ್ಕೆ ತೆರಳಬೇಕಿತ್ತು. ನಿಲ್ದಾಣವಿದ್ದರು ರೈಲುಗಳು ನಿಲ್ಲಿಸದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ರೈಲುಗಳು ನಿಲುಗಡೆಗೆ ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿದೆ. ತೀರ್ಥಹಳ್ಳಿ, ಕೋಣಂದೂರು, ಹೊಸನಗರ ತಾಲೂಕಿನ ವಿವಿಧೆಡೆಯ ಜನರು ಅರಸಾಳು ನಿಲ್ದಾಣಕ್ಕೆ ಬಂದು ರೈಲು ಹತ್ತಬಹುದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Railway-Stoppage-at-Arasalu-Station-and-locals-celebrate

ಪ್ರವಾಸಿ ತಾಣಗಳಿಗೆ ಹೋಗಲು ಅನುಕೂಲ

ಅರಸಾಳು ಗ್ರಾಮದಲ್ಲಿ ರೈಲು ನಿಲುಗಡೆ ನೀಡಿದರೆ ಪ್ರವಾಸಿ ತಾಣಗಳಿಗೆ ತೆರಳುವುದಕ್ಕೆ ಅನುಕೂಲವಾಗಲಿದೆ. ಅರಸಾಳು ನಿಲ್ದಾಣ ಮಾಲ್ಗುಡಿ ನಿಲ್ದಾಣವಾಗಿ ಪರಿವರ್ತನೆಯಾಗಿದೆ. ಇದೆ ಪ್ರವಾಸಿ ತಾಣವಾಗಿದೆ. ಇನ್ನು, ಕೊಲ್ಲೂರು, ಹುಂಚ, ಸಿಗಂದೂರು ಸೇರಿದಂತೆ ವಿವಿಧ ಪ್ರವಾಸಿ ತಾಣಕ್ಕೆ ತೆರಳುವವರಿಗೆ ಈ ನಿಲ್ದಾಣದಿಂದ ಅನುಕೂಲವಾಗಲಿದೆ ಎಂದು ಜನರು ಖುಷಿಪಟ್ಟರು.

ಇದನ್ನೂ ಓದಿ – ಶಿವಮೊಗ್ಗ – ಬೆಂಗಳೂರು ಮಧ್ಯೆ ಸಂಚರಿಸುತ್ತಾ ವಂದೇ ಭಾರತ್‌ ರೈಲು? ಸಂಸದ ರಾಘವೇಂದ್ರ ಮೀಟಿಂಗ್‌, ಏನೇನು ಚರ್ಚೆಯಾಯ್ತು?

ಕುಂಸಿಯಲ್ಲಿ ಸಿಹಿ ಹಂಚಿ ಖುಷಿ

ಕುಂಸಿ ನಿಲ್ದಾಣದಲ್ಲಿ ತಾಳಗುಪ್ಪ – ಮೈಸೂರು ರೈಲು ನಿಲುಗಡೆ ನೀಡುತ್ತಿದ್ದಂತೆ ಸ್ಥಳೀಯರು ಖುಷಿಯಿಂದ ರೈಲಿಗೆ ಬಾಳೆ ಕಂದು ಕಟ್ಟಿ, ಹೂವು ಹಾಕಿದರು. ರೈಲ್ವೆ ಸಿಬ್ಬಂದಿ ಮತ್ತು ಸ್ಥಳೀಯರಿಗೆ ಸಿಹಿ ಹಂಚಿದರು. ರೈಲು ನಿಲುಗಡೆಗೆ ಸಂತೋಷ ವ್ಯಕ್ತಪಡಿಸಿದರು. ಅಲ್ಲದೆ ಮುಂದೆ ತಾಳಗುಪ್ಪ ಬೆಂಗಳೂರು ರೈಲು ನಿಲುಗಡೆ ಮಾಡಬೇಕು. ಅದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಯಾವ್ಯಾವ ರೈಲು, ಎಷ್ಟೊತ್ತು ನಿಲ್ಲುತ್ತೆ?

  • ಮೈಸೂರು ತಾಳಗುಪ್ಪ ರೈಲು (ರೈಲು ಸಂಖ್ಯೆ 16227) – ಅರಸಾಳು ನಿಲ್ದಾಣಕ್ಕೆ ಬೆಳಿಗ್ಗೆ 5:43ಕ್ಕೆ ಆಗಮಿಸಿ 5:44 ಗಂಟೆಗೆ ನಿರ್ಗಮಿಸಲಿದೆ.
  • ತಾಳಗುಪ್ಪ ಮೈಸೂರು ರೈಲು (16228) ಅರಸಾಳು ನಿಲ್ದಾಣಕ್ಕೆ ರಾತ್ರಿ 10:03ಕ್ಕೆ ಆಗಮಿಸಿ 10:04ಕ್ಕೆ ನಿರ್ಗಮಿಸಲಿದೆ

  • ಮೈಸೂರು ತಾಳಗುಪ್ಪ ರೈಲು (16206) – ಕುಂಸಿ ನಿಲ್ದಾಣಕ್ಕೆ ಬೆಳಿಗ್ಗೆ 11:25ಕ್ಕೆ ಆಗಮಿಸಿ 11:26ಕ್ಕೆ ನಿರ್ಗಮಿಸಲಿದೆ. ಅರಸಾಳು ನಿಲ್ದಾಣಕ್ಕೆ 11:40ಕ್ಕೆ ಆಗಮಿಸಿ 11:41ಕ್ಕೆ ನಿರ್ಗಮಿಸಲಿದೆ.
  • ತಾಳಗುಪ್ಪ ಮೈಸೂರು ರೈಲು (16205) – ಅರಸಾಳು ನಿಲ್ದಾಣಕ್ಕೆ ಸಂಜೆ 4 ಗಂಟೆ ಆಗಮಿಸಿ, 4:01ಕ್ಕೆ ನಿರ್ಗಮಿಸಲಿದೆ. ಕುಂಸಿ ನಿಲ್ದಾಣಕ್ಕೆ ಸಂಜೆ 4:15ಕ್ಕೆ ತಲುಪಿ 4:16ಕ್ಕೆ ನಿರ್ಗಮಿಸಲಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಆಗಷ್ಟ್ 25, 2023

Leave a Comment