ಅನಂದಪುರ ಬಳಿ ಕೆರೆಗೆ ಉರುಳಿದ ಟಿಪ್ಪರ್ ಲಾರಿ, ಅದೃಷ್ಟವಶಾತ್ ತಪ್ಪಿತು ದುರಂತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | TRUCK| 08 ಮೇ 2022

ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿಯೊಂದು ಕೆರೆಗೆ ಇಳಿದಿದೆ. ಅದೃಷ್ಟವಶಾತ್ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ.

ಆನಂದಪುರ ಸಮೀಪ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಹೊಂದಿಕೊಂಡಿರುವ ಗಾಣಿಗನ ಕೆರೆಗೆ ಶನಿವಾರ ಟಿಪ್ಪರ್ ಕೆರೆಗೆ ಇಳಿದಿದೆ. ಟಿಪ್ಪರ್ ಕೆರೆಯ ಕಡೆಗೆ ವಾಲುತ್ತಿದ್ದಂತೆ ಚಾಲಕ ಇರುವಕ್ಕಿ ಗ್ರಾಮದ ಮಣಿಕಂಠ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ.

ದಾಸಕೊಪ್ಪದಲ್ಲಿರುವ ಗ್ಯಾರೇಜ್‌ನಲ್ಲಿ ಜನರಲ್ ಸರ್ವಿಸ್ ಮಾಡಿಸಿಕೊಂಡು ಖಾಲಿ ವಾಹನವನ್ನು ಯಡೇಹಳ್ಳಿಗೆ ತರುತ್ತಿದ್ದಾಗ ಅಪಘಾತವಾಗಿದೆ. ವಾಹನದ ಮುಂಭಾಗ ಕೆರೆಯ ಕೆಸರಿನಲ್ಲಿ ಹೂತಿದ್ದು ಉಳಿದ ಭಾಗ ಕೆರೆಯ ಕಲ್ಲಿನ ಮೆಟ್ಟಿಲಿನ ಮೇಲೆ ನಿಂತಿದೆ.

Shimoga Nanjappa Hospital

ಟಿಪ್ಪರ್ ಅಪ್ಪಳಿಸಿದ ರಭಸಕ್ಕೆ ಕೆರೆಯ ಕಡೆ ವಾಹನ ಬೀಳದಂತೆ ಅಳವಡಿಸಲಾದ ಕಬ್ಬಿಣದ ಬ್ಯಾರೀಕೇಡ್ ಮುರಿದು ಹೋಗಿವೆ. ಸುದ್ದಿ ತಿಳಿಯುತ್ತಿದ್ದಂತೆ ಆನಂದಪುರ, ಯಡೇಹಳ್ಳಿ ಮತ್ತು ದಾಸಕೊಪ್ಪ ಭಾಗದ ನೂರಾರು ಜನರು ವೀಕ್ಷಿಸಲು ಆಗಮಿಸಿ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಆನಂದಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.

ಇದನ್ನೂ ಓದಿ – ಮದುವೆ ಮನೆಯಲ್ಲಿ ಊಟ ಮಾಡಿದವರಿಗೆ ವಾಂತಿ, ಭೇದಿ, ಮೆಗ್ಗಾನ್ ಆಸ್ಪತ್ರೆಗೆ ದಾಖಲು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 8, 2022

Leave a Comment