ಶಿವಮೊಗ್ಗ ಲೈವ್.ಕಾಂ | SHIMOGA | 10 ಮಾರ್ಚ್ 2020
ತರಕಾರಿ ಬೆಲೆಯಲ್ಲಿ ಭಾರೀ ಕುಸಿತ ಕಂಡಿದೆ. ಇದು ರೈತರು ಮತ್ತು ಮಾರಾಟಗಾರರಿಗೆ ಸಂಕಷ್ಟ ತಂದೊಡ್ಡಿದೆ. ಹಾಗಾಗಿ ನೂರಾರು ಕೆ.ಜಿ.ತರಕಾರಿ ಬೀದಿ ಪಾಲಾಗುತ್ತಿದೆ.
ಶಿವಮೊಗ್ಗ ಆರ್’ಎಂಸಿ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರವಾಗುತ್ತಿಲ್ಲ. ಇದೇ ಕಾರಣಕ್ಕೆ ವ್ಯಾಪಾರಿಗಳು ತರಕಾರಿಯನ್ನು ರಸ್ತೆಗೆ ಸುರಿಯುತ್ತಿದ್ದಾರೆ. ಎರಡು ತಿಂಗಳ ಹಿಂದೆ ಇದ್ದ ಬೆಲೆಗಿಂತಲೂ ಮೂರ್ನಾಲ್ಕು ಪಟ್ಟು ಬೆಲೆ ಕುಸಿತ ಕಂಡಿದೆ. ಕೆಲವು ತರಕಾರಿಯ ಬೆಲೆ ಪ್ರತಿ ಕೆಜಿಗೆ ಹತ್ತು ರುಪಾಯಿಗಿಂತಲೂ ಕಡಿಮೆ ಇದೆ.
ಇವತ್ತು ಎಷ್ಟಿದೆ ತರಕಾರಿ ರೇಟ್?

ಇದು ಆರ್’ಎಂಸಿ ಮಾರುಕಟ್ಟೆಯಲ್ಲಿನ ಹೋಲ್ ಸೇಲ್ ದರ. ರೀಟಲ್ ದರವು ಇದಕ್ಕಿಂತಲೂ ಹೊರತಾಗಿಲ್ಲ.
ತರಕಾರಿ ಬೆಲೆ ಕುಸಿತಕ್ಕೆ ಕಾರಣವೇನು?
ಮಾರುಕಟ್ಟೆಗೆ ಹೆಚ್ಚನ ಪ್ರಮಾಣದಲ್ಲಿ ತರಕಾರಿ ಬರುತ್ತಿದೆ. ಆದರೆ ಕೊಳ್ಳುವವರ ಸಂಖ್ಯೆ ಹೆಚ್ಚಳವಾಗಿಲ್ಲ. ಇನ್ನು ಹೊರ ರಾಜ್ಯಕ್ಕೆ ತರಕಾರಿ ಮಾರಾಟವಾಗುತ್ತಿಲ್ಲ. ಇದರ ಪರಿಣಾಮ ದರ ಕುಸಿದಿದೆ ಅನ್ನುತ್ತಾರೆ ವ್ಯಾಪಾರಿ ರಂಗನಾಥ್.
ಜಮೀನಿನಲ್ಲಿ ಬೆಳೆದ ಬೆಳೆಯನ್ನು ಮಾರುಕಟ್ಟಗೆ ತರುವಾಗ ವಾಹನದ ಬಾಡಿಗೆಗೆ ತಗಲುವ ಖರ್ಚು ನಿಭಾಯಿಸಲು ಆಗುತ್ತಿಲ್ಲ. ತರಕಾರಿ ದರ ಅಷ್ಟೊಂದು ಕುಸಿತ ಕಂಡಿದೆ ಎಂದು ನೋವು ತೋಡಿಕೊಳ್ಳುತ್ತಾರೆ ರೈತ ಇಮ್ತಿಯಾಜ್.
ಮಾರಾಟವಾಗದೆ ಉಳಿಯುತ್ತಿರುವ ತರಕಾರಿಯನ್ನು ವ್ಯಾಪಾರಿಗಳು ರಸ್ತೆಗೆ ಹಾಕುತ್ತಿದ್ದಾರೆ. ಇದು ದನಕರುಗಳ ಪಾಲಾಗುತ್ತಿದೆ. ದರ ಕುಸಿತದಿಂದ ರೈತರು ಮತ್ತು ವ್ಯಾಪಾರಿಗಳು ಕಂಗಾಲಾಗಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]