ಶಿವಮೊಗ್ಗ ಲೈವ್.ಕಾಂ | SHIMOGA | 13 ಫೆಬ್ರವರಿ 2020

ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಕೋರ್ಟ್ಗೆ ಅಲೆಯುವಂತೆ ಮಾಡಿದ್ದ ವಕೀಲ ವಿನೋದ್ ಅವರ ವಿರುದ್ದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಯೊಬ್ಬರ ಮೇಲೆ ಮಾನಭಂಗಕ್ಕೆ ಯತ್ನಿಸಿರುವುದಾಗಿ ಆರೋಪಿಸಿ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಜ್ಯುವೆಲರಿ ಅಂಗಡಿಯೊಂದರಲ್ಲಿ 8-9 ತಿಂಗಳ ಹಿಂದೆ 3.69 ಲಕ್ಷ ರೂ. ಮೌಲ್ಯದ ಚಿನ್ನದ ನೆಕ್ಲಸ್ ಖರೀದಿಸಿದ್ದಾರೆ.
ಒಡವೆಯ ಬಾಬ್ತು 40 ಸಾವಿರ ರೂ. ಕೊಟ್ಟಿದ್ದು ಉಳಿದ ಮೊತ್ತವನ್ನು ಕೇಳಲು ಜ್ಯುವೆಲರಿ ಅಂಗಡಿಯ ಮಾಲೀಕನ ಪತ್ನಿ ತನ್ನ ಮಗನೊಂದಿಗೆ ವಿನೋದ್ ಅವರ ಮನೆಗೆ ಹೋದಾಗ ಮಾನಭಂಗಕ್ಕೆ ಯತ್ನಿಸಿದ್ದಾರೆಂದು ಆರೋಪಿಸಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಠಾಣೆ ಪೊಲೀಸರು ಐಪಿಸಿ 504, 341, 354(ಎ), 354 (ಬಿ), 506, 34 ಅಡಿ ಪ್ರಕರಣ ದಾಖಲಿಸಿದ್ದಾರೆ.
ಸಿಸಿಟಿವಿ ವಿಡಿಯೋ ಬಹಿರಂಗ
ಈ ನಡುವೆ ದುರುದಾರ ಮಹಿಳೆ ಭೇಟಿ ನೀಡಿದ್ದ ಸಮಯದ ಸಿಸಿಟಿವಿ ವಿಡಿಯೋಗಳನ್ನು ವಕೀಲ ವಿನೋದ್ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಮಹಿಳೆ ಮತ್ತು ಆಕೆಯ ಪುತ್ರ, ವಕೀಲ ವಿನೋದ್ ಅವರ ಮನೆಗೆ ಭೇಟಿ ನೀಡುವುದು, ಕಚೇರಿಯಲ್ಲಿ ಕೂರುವುದು ಮತ್ತು ಕೆಲ ನಿಮಿಷದ ಬಳಿಕ ಅಲ್ಲಿಂದ ಹಿಂತಿರುಗುವ ದೃಶ್ಯವಿದೆ.
ದೊಡ್ಡಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]