ಶಿವಮೊಗ್ಗ ಲೈವ್.ಕಾಂ | SHIMOGA | 13 ಫೆಬ್ರವರಿ 2020

ಬಂದಿದ್ದು ಉಪ ಮುಖ್ಯಮಂತ್ರಿ ಸಿ.ಎಸ್.ಅಶ್ವಥನಾರಾಯಣ್ ಅವರ ಭೇಟಿಗೆ. ಆದರೆ ಕಾರು ಇಳಿಯುತ್ತಿದ್ದಂತೆ ಕಣ್ಣೆದುರು ಸಮಸ್ಯೆ ಕಂಡು ಮೇಯರ್ ಗರಂ. ಥಟ್ ಅಂತಾ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ.
ಉಪ ಮುಖ್ಯಮಂತ್ರಿ ಸಿ.ಎಸ್.ಅಶ್ವಥನಾರಾಯಣ್ ಅವರು ಇವತ್ತು ಶಿವಮೊಗ್ಗದ ಮೀನಾಕ್ಷಿ ಭವನದಲ್ಲಿ ಉಪಹಾರಕ್ಕೆ ಆಗಮಿಸಿದ್ದರು. ಈ ವೇಳೆ ಡಿಸಿಎಂ ಭೇಟಿಗೆ ಮೇಯರ್ ಸುವರ್ಣ ಶಂಕರ್ ಅವರು ಹೊಟೇಲ್’ಗೆ ಆಮಿಸಿದ್ದರು. ಹೊಟೇಲ್ ಮುಂದೆ ಕಾರು ಇಳಿಯುತ್ತಿದ್ದಂತೆ, ಮೇಯರ್ ಕಣ್ಣಿಗೆ ಸಮಸ್ಯೆಯೊಂದರ ದರ್ಶನವಾಯ್ತು.
ಮೀನಾಕ್ಷಿ ಭವನ ಹೊಟೇಲ್ ಮುಂದೆ ಪೈಪ್ ಒಡೆದು, ರಸ್ತೆಯಲ್ಲಿ ನೀರು ಹರಿದು ಹೋಗುತ್ತಿತ್ತು. ನೀರು ಪೋಲಾಗುತ್ತಿರುವುದು ಕಣ್ಣಿಗೆ ಬೀಳುತ್ತಿದ್ದಂತೆ, ಮೇಯರ್ ಜಾಗೃತರಾದರು. ಕೂಡಲೇ ಅಧಿಕಾರಿಗಳಿಗೆ ಕರೆ ಮಾಡಿದರು. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಸಮಸ್ಯೆ ಕ್ಲಿಯರ್ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ಮಾಡಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]