ಶಿವಮೊಗ್ಗ ಲೈವ್.ಕಾಂ | ಸೊರಬ | 20 ಸೆಪ್ಟೆಂಬರ್ 2019

ಹೊಸ ಬೈಕ್ ಖರೀದಿಗೆ ತಾಯಿ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗಜೇಂದ್ರ (19) ಆತ್ಮಹತ್ಯೆ ಮಾಡಿಕೊಂಡಾತ. ಹೊಸ ಬೈಕ್ ಖರೀದಿಗೆ ಗಜೇಂದ್ರ ತನ್ನ ತಾಯಿ ಬಳಿ ಹಣ ಕೇಳಿದ್ದ. ಆದರೆ ತಾಯಿ ಹಣವಿಲ್ಲ ಎಂದಿದ್ದರು. ಅಲ್ಲದೆ ಸ್ವಲ್ಪ ದಿನದ ಬಳಿಕ ಹಣ ಹೊಂದಿಸಿ ಕೊಡುವುದಾಗಿ ತಿಳಿಸಿದ್ದರು. ಇದರಿಂದ ಮನನೊಂದು ಮನೆ ಹಿತ್ತಲಿನಲ್ಲಿ ಗಜೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆನವಟ್ಟಿ ಸಮೀಪದ ಜಾವಳ್ಳಿ ಹಿರೇಕೆರೂರು ಗ್ರಾಮದಲ್ಲಿ ಘಟನೆ ನಡೆದಿದೆ.
ಆನವಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
