SHIVAMOGGA LIVE NEWS | 6 OCTOBER 2023
SAGARA : ಗಣಪತಿ ಕೆರೆಯಲ್ಲಿ ಯುವಕನೊಬ್ಬನ (Youth) ಮೃತದೇಹ ಪತ್ತೆಯಾಗಿದೆ. ಆತನ ಗುರುತು ಪತ್ತೆಯಾಗಿಲ್ಲ.
ಯುವಕನಿಗೆ (Youth) 25 ವರ್ಷ ಎಂದು ಅಂದಾಜಿಸಲಾಗಿದೆ. ಒಂದು ದಿನ ಮೊದಲು ಆತ ಸಾಗರದ ಗಣಪತಿ ಕೆರೆಯಲ್ಲಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮೃತದೇಹವನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ- ರಾತ್ರಿ ಕುಡಿದ ಮತ್ತಿನಲ್ಲಿ ಟ್ಯಾಂಕ್ ಏರಿದ ಭೂಪ, ಕೆಳಗಿಳಿಯಲಾಗದೆ ಪರದಾಟ, ಮುಂದೇನಾಯ್ತು?
