SHIVAMOGGA LIVE NEWS | 6 OCTOBER 2023
KSRTC NEWS : ಪ್ರಯಾಣಿಕರ ಅನುಕೂಲಕ್ಕೆ ಕೆಎಸ್ಆರ್ಟಿಸಿ ಸಂಸ್ಥೆ ಹೊಸ ಮಾದರಿಯ ಸ್ಲೀಪರ್ ಬಸ್ಸುಗಳನ್ನು (Sleeper Bus) ಪರಿಚಯಿಸುತ್ತಿದೆ. ಎಸಿ ರಹಿತ ಕೆಟಗರಿಯಲ್ಲಿ ಪಲ್ಲಕ್ಕಿ ಎಂಬ ಬಸ್ ರಸ್ತೆಗಿಳಿಸಲು ಸಾರಿಗೆ ಸಂಸ್ಥೆ ಮುಂದಾಗಿದೆ.
ಕೆಎಸ್ಆರ್ಟಿಸಿಯ ಪಲ್ಲಕ್ಕಿ ಬಸ್ಸಿನ ವಿಡಿಯೋ ಹೊರ ಬಿದ್ದಿದೆ. ಸಾರಿಗೆ ಸಂಸ್ಥೆಯ ಟಿಪಿಕಲ್ ಬಣ್ಣದ ಮಾದರಿ ಇದರಲ್ಲಿ ಇಲ್ಲ. ಖಾಸಗಿ ಬಸ್ಸುಗಳಿಗೆ ತೀವ್ರ ಪೈಪೋಟಿ ಒಡ್ಡುವ ಬಣ್ಣ, ಡಿಸೈನ್ ಹೊಂದಿದೆ. ಬಸ್ಸಿನ ಎರಡು ಬದಿಯಲ್ಲಿ ಪಲ್ಲಕ್ಕಿಯಲ್ಲಿ ರಾಣಿಯನ್ನು ಕರೆದೊಯ್ಯುವ ಸ್ಟಿಕರಿಂಗ್ ಇದೆ.
ಇವು ನಾನ್ ಎಸಿ ಸ್ಲೀಪರ್ ಕ್ಲಾಸ್ ಬಸ್ಸುಗಳಾಗಿವೆ. ಸದ್ಯ ಕೆಎಸ್ಆರ್ಟಿಸಿಯು ಈ ಬಸ್ಸುಗಳನ್ನು ಯಾವ ಮಾರ್ಗದಲ್ಲಿ ಓಡಿಸಲಿದೆ ಎಂಬುದು ಇನ್ನು ಪ್ರಕಟವಾಗಿಲ್ಲ. ಶಕ್ತಿ ಯೋಜನೆ ಜಾರಿ ಬೆನ್ನಿಗೆ ಕೆಎಸ್ಆರ್ಟಿಸಿಯು ಹೊಸ ಬಸ್ಸುಗಳ ಖರೀದಿಗೆ ಮುಂದಾಗಿದೆ. ಈಗ ಹೊಸ ಮಾದರಿಯ ಸ್ಲೀಪರ್ ಕ್ಲಾಸ್ ಬಸ್ಸುಗಳು ರಸ್ತೆಗಿಳಿಯಲು ಸಜ್ಜಾಗಿರುವುದು ಪ್ರಯಾಣಿಕರ ಖುಷಿಗೆ ಕಾರಣವಾಗಿದೆ.
ಇದನ್ನೂ ಓದಿ- ಮಂಗಳೂರಿನಲ್ಲಿ ಸಾಲು ಸಾಲು ಪ್ರಶಸ್ತಿ ಬಾಚಿಕೊಂಡ ಶಿವಮೊಗ್ಗದ ಕ್ರೀಡಾಪಟುಗಳು
ಸದ್ಯ ಕೆಎಸ್ಆರ್ಟಿಸಿ 40 ಪಲ್ಲಕ್ಕಿ ಸ್ಲೀಪರ್ ಬಸ್ಸುಗಳನ್ನು ರಸ್ತೆಗಿಳಿಸುತ್ತಿದೆ. 28 ಆಸನಗಳ ಸಾಮರ್ಥ್ಯ ಹೊಂದಿರುವ ಬಸ್ ಉಳಿದ ಸ್ಲೀಪರ್ ಕ್ಲಾಸ್ ಬಸ್ಗಿಂತಲೂ ಪ್ರಯಾಣಿಕ ಸ್ನೇಹಿಯಾಗಿದೆ. ಅ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಸ್ಸುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಬೆಂಗಳೂರಿನಿಂದ ಮೈಸೂರು, ಮಂಗಳೂರು, ಶಿವಮೊಗ್ಗ, ದಾವಣಗೆರೆ, ವಿಜಯಪುರ, ಹೊಸಪೇಟೆ ಮಾರ್ಗದಲ್ಲಿ ಈ ಬಸ್ ಸಂಚರಿಸಲಿದೆ ಎಂದು ತಿಳಿದು ಬಂದಿದೆ.
