ವಿಮಾನದಲ್ಲಿ ಬಂದು ಶಿವಮೊಗ್ಗದಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿ ಸೇರಿ ಆರು ಮಂದಿ ಅರೆಸ್ಟ್

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

119060214 954258745054036 6933822829653446782 o.jpg? nc cat=105& nc sid=110474& nc ohc=jztG790PCawAX8gAOuD& nc ht=scontent.fixe1 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 27 ಅಕ್ಟೋಬರ್ 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ವಿಮಾನದಲ್ಲಿ ಬಂದು ಶಿವಮೊಗ್ಗದಲ್ಲಿ ಸರಗಳ್ಳತನ ಮಾಡಿದ್ದ ವ್ಯಕ್ತಿ ಸೇರಿ, ಆರು ಮಂದಿಯನ್ನು ಶಿವಮೊಗ್ಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರೆಲ್ಲರು ಉತ್ತರ ಪ್ರದೇಶ ಮೂಲದವರು.

ಯಾರಿದು ಖತರ್ನಾಕ್ ಕಳ್ಳರು?

ಶಿವಮೊಗ್ಗದಲ್ಲಿ ಕಳೆದ ತಿಂಗಳು ಸಾಲು ಸಾಲು ಸರಗಳ್ಳತನ ಪ್ರಕರಣಗಳು ವರದಿಯಾದವು. ಅದೆ ರೀತಿ ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲೂ ಸರಗಳ್ಳತನಗಳಾಗಿದ್ದವು. ಜಯನಗರ ಮತ್ತು ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣಗಳು ಸಂಭವಿಸಿದ್ದವು. ಇದರ ತನಿಖೆ ನಡೆಸಿದ ಪೊಲೀಸರು ಆರು ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಇವರೆಲ್ಲ ಉತ್ತರ ಪ್ರದೇಶದ ಮೀರತ್ ಜಿಲ್ಲೆಯವರು.

VIDEO REPORT

ಬಂಧಿತರನ್ನು ಫೈಸಲ್ (25), ಸಲ್ಮಾನ್ (24), ಆಶೀಸ್ ಕುಮಾರ್ (36), ಮೆಹತಾಬ್ (35), ಸಲ್ಮಾನ್ (22). ಮಹಮ್ಮದ್ ಚಾಂದ್ (23) ಎಂದು ಗುರುತಿಸಲಾಗಿದೆ.

122428090 983860098760567 2816976454692017560 n.jpg? nc cat=108& nc sid=8024bb& nc ohc=SiPKieh1mQMAX H6SoY& nc ht=scontent.fblr1 4

ವಿದ್ಯಾನಗರದಲ್ಲಿ ಸಿಕ್ಕಿಬಿದ್ದಿದ್ದರು

ಸುದ್ದಿಗೋಷ್ಠಿಯಲ್ಲಿ ಪ್ರಕರಣ ಸಂಬಂಧ ಮಾಹಿತಿ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು, ಸರಗಳ್ಳರ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿತ್ತು. ಈ ನಡುವೆ ದರೋಡೆಗೆ ಹೊಂಚು ಹಾಕಿದ್ದ ಮಾಹಿತಿ ಮೇರೆಗೆ ದಾಳಿ ನಡೆಸಿ, ವಿದ್ಯಾನಗರ ಸಮೀಪ ಆರೋಪಿಗಳನ್ನು ಬಂಧಿಸಲಾಯಿತು. ವಿಚಾರಣೆ ನಡೆಸಿದಾಗ ಸರಗಳ್ಳತನ ಪ್ರಕರಣಗಳು ಬಯಲಿಗೆ ಬಂದಿವೆ ಎಂದು ತಿಳಿಸಿದರು.

118888608 1213241345703950 5567030714421366457 n.jpg? nc cat=105&ccb=2& nc sid=8024bb& nc ohc=fFSyAGf4O3wAX9Wn o3& nc ht=scontent.fblr11 1

ವಿಮಾನದಲ್ಲಿ ಬಂದಿದ್ದ ಆರೋಪಿ

ಉತ್ತರ ಪ್ರದೇಶದಿಂದ ಶಿವಮೊಗ್ಗಕ್ಕೆ ಬಂದಿದ್ದ ಆರೋಪಿಗಳು ಇಲ್ಲಿನ ಲಾಡ್ಜ್‍ ಒಂದರಲ್ಲಿ ಉಳಿದುಕೊಂಡಿದ್ದರು. ಪ್ರಕರಣದ ಆರೋಪಿಗಳ ಪೈಕಿ ಒಬ್ಬಾತ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದು, ಅಲ್ಲಿಂದ ಬೈಕ್‍ನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದರು.

ಶಿವಮೊಗ್ಗದಲ್ಲಿ ಒಬ್ಬನ ಸಹಕಾರ

ಆರೋಪಿಗಳಿಗೆ ಶಿವಮೊಗ್ಗದಲ್ಲಿ ಒಬ್ಬಾತ ಸಹಕಾರ ನೀಡಿದ್ದಾನೆ. ಮೂಲತಃ ಉತ್ತರ ಪ್ರದೇಶದ ಮೀರತ್‍ನ ಮಹಮ್ಮದ್ ಚಾಂದ್‍ ಎಂಬಾತ, ಶಿವಮೊಗ್ಗದ ಜೋಸೆಫ್‍ ನಗರದಲ್ಲಿ ನೆಲೆಸಿದ್ದ. ಇಲ್ಲಿ ಬೆಡ್‍ಶೀಟ್ ವ್ಯಾಪಾರ ಮಾಡುತ್ತಿದ್ದ ಎಂದು ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜು ತಿಳಿಸಿದರು. ಈತ ಆರೋಪಿಗಳಿಗೆ ನೆರವು ನೀಡಿದ್ದ ಎಂದು ವಿಚಾರವಣೆ ವೇಳೆ ತಿಳಿದು ಬಂದಿದ್ದು, ಮಹಮ್ಮದ್ ಚಾಂದ್‍ನನ್ನು ಬಂಧಿಸಲಾಗಿದೆ.

122336553 983106055502638 6844548172344119085 n.jpg? nc cat=107& nc sid=110474& nc ohc=JrLgAWzRixQAX9XQ8JM& nc ht=scontent.fblr11 1

2 ಪಿಸ್ತೂಲು, 12 ಜೀವಂತ ಗುಂಡು

ಬಂಧಿತರ ಬಳಿ ಎರಡು ಪಿಸ್ತೂಲುಗಳು, 12 ಜೀವಂತ ಗುಂಡು, ಒಂದು ಬೈಕ್‍ ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು ಕಳ್ಳತನ ಮಾಡಿದ್ದ 9.31 ಲಕ್ಷ ಮೌಲ್ಯದ 213.20 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.

ಪೊಲೀಸರಿಗೆ ಬಹುಮಾನ

ಪ್ರಕರಣದ ತನಿಖೆ, ಆರೋಪಿಗಳ ಬಂಧನ ಮತ್ತು ವಿಚಾರಣೆಯಲ್ಲಿ ತೊಡಗಿಸಿಕೊಂಡಿದ್ದ ಪೊಲೀಸರಿಗೆ ನಗದು ಬಹುಮಾನ ಘೋಷಿಸಲಾಗಿದೆ.

122569515 985496425263601 186764312706410466 o.jpg? nc cat=109&ccb=2& nc sid=110474& nc ohc=ULbZk K2k6gAX Vx3dX& nc ht=scontent.fblr11 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment