ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ |SHIMOGA NEWS | 8 DECEMBER 2020
ಶಿವಮೊಗ್ಗದಲ್ಲಿ ನಿಷೇಧಾಜ್ಞೆಯನ್ನು ಮತ್ತೊಮ್ಮೆ ವಿಸ್ತರಣೆ ಮಾಡಲಾಗಿದೆ. ಈ ಬಾರಿ ಹೆಚ್ಚು ಅವಧಿಗೆ ವಿಸ್ತರಣೆ ಮಾಡಲಾಗಿದೆ.
ಡಿಸೆಂಬರ್ 12ರ ಬೆಳಗ್ಗೆ 10 ಗಂಟೆವರೆಗೆ ನಿಷೇಧಾಜ್ಞೆಯನ್ನು ವಿಸ್ತರಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.
ALSO READ | ಶಿವಮೊಗ್ಗ ಸಿಟಿಯ ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಿ.9ರಂದು ನಾಲ್ಕು ಗಂಟೆ ಕರ್ಫ್ಯೂ ಸಡಿಲಿಕೆ
ಮೂರನೇ ಬಾರಿ ವಿಸ್ತರಣೆ
ಬಜರಂಗದಳ ಸಹ ಸಂಚಾಲಕ ನಾಗೇಶ್ ಮೇಲಿನ ಹಲ್ಲೆ ಮತ್ತು ಆ ಬಳಿಕ ಸಂಭವಿಸಿದ ಗಲಭೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ವಿಧಿಸಲಾಗಿತ್ತು. ಆ ಬಳಿಕ ಎರಡು ಬಾರಿ ನಿಷೇಧಾಜ್ಞೆ ವಿಸ್ತರಿಸಲಾಗಿತ್ತು. ಡಿ.9ರಂದು ಬೆಳಗ್ಗೆ 10 ಗಂಟೆಗೆ ನಿಷೇಧಾಜ್ಞೆ ತೆರವಾಗಬೇಕಿತ್ತು. ಆದರೆ ಮೂರನೇ ಬಾರಿಗೆ ನಿಷೇಧಾಜ್ಞೆಯನ್ನು ವಿಸ್ತರಿಸಲಾಗಿದ್ದು, ಪೊಲೀಸ್ ಇಲಾಖೆ ಇದಕ್ಕೆ ಕಾರಣ ತಿಳಿಸಿಲ್ಲ.
ALSO READ | ಶಿವಮೊಗ್ಗದಲ್ಲಿ ಶಾಂತಿ ಸಭೆ, ಮುಂದುವರೆಯುತ್ತಾ ನಿಷೆಧಾಜ್ಞೆ, ಸಭೆಯಲ್ಲಿ ಏನೆಲ್ಲ ಅಭಿಪ್ರಾಯ ವ್ಯಕ್ತವಾಯ್ತು?
ಕರ್ಫ್ಯೂ ಸಡಿಲಿಕೆ
ದೊಡ್ಡಪೇಟೆ, ಕೋಟೆ ಮತ್ತು ತುಂಗಾ ನಗರ ಠಾಣೆ ವ್ಯಾಪ್ತಿಯ ಹಳೆ ಶಿವಮೊಗ್ಗ ಭಾಗದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಇಲ್ಲಿ ಜನರು ಮನೆ ಬಿಟ್ಟು ಹೊರಗೆ ಬರುವಂತಿಲ್ಲ. ಹಾಗಾಗಿ ಪ್ರಮುಖ ವಹಿವಾಟು ಕೇಂದ್ರ ಗಾಂಧಿ ಬಜಾರ್ ಸಂಪೂರ್ಣ ಸ್ಥಬ್ಧವಾಗಿದೆ. ಡಿ.9ರಂದು ಬೆಳಗ್ಗೆ 7 ರಿಂದ 11 ಗಂಟೆವರೆಗೆ, ನಾಲ್ಕು ಗಂಟೆಯ ಅವಧಿಗೆ ಕರ್ಫ್ಯೂ ರಿಲೀಫ್ ನೀಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

- ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

About The Editor
ನಿತಿನ್ ಆರ್.ಕೈದೊಟ್ಲು
















