ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ |SHIMOGA CRIME NEWS | 11 DECEMBER 2020
ಶಿವಮೊಗ್ಗದಲ್ಲಿ ನಡೆದ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬಳಕೆಯಾಗಿದ್ದ ಕಾರು ಆರೋಪಿಗಳದ್ದಲ್ಲ. ಮೂರನೇ ಆರೋಪಿ ಸುಳ್ಳು ಹೇಳಿ ಸ್ನೇಹಿತನೊಬ್ಬನಿಂದ ಪಡೆದುಕೊಂಡು ಬಂದಿದ್ದ ಎಂದು ತಿಳಿದು ಬಂದಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತಾಯಿ ಅನಾರೋಗ್ಯದ ಕಥೆ ಕಟ್ಟಿದ್ದ
ಪ್ರಕರಣದ ಮೂರನೇ ಆರೋಪಿ ವಿನಯ್, ತಾಯಿಗೆ ಅನಾರೋಗ್ಯವಿದ್ದು, ಆಸ್ಪತ್ರೆಗೆ ಕರೆದೊಯ್ಯಬೇಕಿದೆ ಎಂದು ನೆಪ ಹೇಳಿ, ಸ್ನೇಹಿತನ ಕಾರನ್ನು ಪಡೆದುಕೊಂಡಿದ್ದ. ಸಾಮೂಹಿಕ ಅತ್ಯಾಚಾರದ ಬಳಿಕ ರಾತ್ರಿಯೇ ಕಾರನ್ನು ಕೊಂಡೊಯ್ದು ಸ್ನೇಹಿತನ ಮನೆ ಬಳಿ ನಿಲ್ಲಿಸಿ ಬಂದಿದ್ದ. ಬೆಳಗ್ಗೆ ಬೇರೆ ಕಡೆ ಹೋಗಬೇಕಿದೆ. ಹಾಗಾಗಿ ಕಾರನ್ನು ಬೇಗ ಬಿಟ್ಟು ಹೋಗುತ್ತಿರುವುದಾಗಿ ತಿಳಿಸಿದ್ದ.
RELATED NEWS | ಶಿವಮೊಗ್ಗದಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ, ಊಟ ಕೊಡಿಸುವ ನೆಪದಲ್ಲಿ ಸಾಗರ ರಸ್ತೆಗೆ ಕರೆದೊಯ್ದು ಕೃತ್ಯ
ಪೊಲೀಸ್ ಬಂದಾಗಲೇ ವಿಚಾರ ಬಹಿರಂಗ
ಶಿವಮೊಗ್ಗ ತಾಲೂಕು ಕಡೇಕಲ್ ಗ್ರಾಮದಲ್ಲಿರುವ ವಿನಯ್ ಸ್ನೇಹಿತನಿಗೆ ಕಾರು ಸೇರಿತ್ತು. ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಕಡೇಕಲ್ ಗ್ರಾಮಕ್ಕೆ ತೆರಳಿ ಕಾರನ್ನು ವಶಕ್ಕೆ ಪಡೆದಿದ್ದಾರೆ. ಆಗಲೇ ಆ ಸ್ನೇಹಿತನಿಗೆ, ತನ್ನ ಕಾರಿನಲ್ಲೆ ಅತ್ಯಾಚಾರವಾಗಿದ್ದು ಎಂದು ಗೊತ್ತಾಗಿ, ಶಾಕ್ ಆಗಿದ್ದಾರೆ.
RELATED NEWS | ಸಾಮೂಹಿಕ ಅತ್ಯಾಚಾರ ಪ್ರಕರಣ, ನಾಲ್ವರು ಆರೋಪಿಗಳು ಆರೆಸ್ಟ್, ಯಾರನ್ನೆಲ್ಲ ಬಂಧಿಸಲಾಗಿದೆ? ವಿಡಿಯೋ ರಿಪೋರ್ಟ್
ತಾಯಿ ಅನಾರೋಗ್ಯದ ನೆಪ ಹೇಳಿದ್ದರಿಂದ ಸ್ನೇಹಿತ ಕಾರಿನ ಕೀ ಕೊಟ್ಟಿದ್ದ. ಆದರೆ ಸ್ನೇಹಿತನ ವಿಶ್ವಾಸವನ್ನು ದುರ್ಬಳಕೆ ಮಾಡಿಕೊಂಡು, ಆತನ ಕಾರನ್ನೇ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಬಳಕೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]