| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್‌ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 02 JANUARY 2021
ಶಿವಮೊಗ್ಗದಲ್ಲಿ ಇವತ್ತು ಕರೋನ ಲಸಿಕೆ ತಾಲೀಮು (ಡ್ರೈ ರನ್) ನಡೆಯಿತು. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಡ್ರೈ ರನ್‍ಗೆ ಚಾಲನೆ ನೀಡಿದರು.
ಏನಿದು ಡ್ರೈ ರನ್?
ಕೋವಿಡ್ ಲಸಿಕೆ ಬಂದಾಗ ಅದನ್ನು ಹಾಕುವ ಕುರಿತು ಕೈಗೊಂಡಿರುವ ಸಿದ್ಧತೆ ಕಾರ್ಯಗಳ ಪರಿಶೀಲನೆಗೆ ತಾಲೀಮು ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆ, ಮೆಗ್ಗಾನ್ ಆಸ್ಪತ್ರೆಯ ಸಿಬ್ಬಂದಿಗಳನ್ನು ಇದರಲ್ಲಿ ಭಾಗಿಯಾಗಿದ್ದಾರೆ.
ಎಲ್ಲೆಲ್ಲಿ ನಡೆಯುತ್ತಿದೆ ಡ್ರೈ ರನ್
- ಶಿವಮೊಗ್ಗ ಜಿಲ್ಲೆಯ ಮೂರು ಕಡೆಯಲ್ಲಿ ಲಸಿಕೆ ತಾಲೀಮು ನಡೆಯುತ್ತಿದೆ.
- ಶಿವಮೊಗ್ಗ ಸಿಟಿಯಲ್ಲಿ ಮೆಡಿಕಲ್ ಕಾಲೇಜು ಆವರಣ
- ಶಿಕಾರಿಪುರದ ತಾಲೂಕು ಆಸ್ಪತ್ರೆ
- ಭದ್ರಾವತಿ ತಾಲೂಕು ಅಂತರಗಂಗೆ ಪ್ರಾಥಮಿಕ ಆರೋಗ್ಯ ಕೇಂದ್ರ
ಹೇಗೆ ನಡೆಯುತ್ತೆ ಡ್ರೈ ರನ್?
ಡ್ರೈ ರನ್‍ಗೆ ಪ್ರತಿ ಕೇಂದ್ರದಲ್ಲಿ 25 ಮಂದಿ ಭಾಗಿಯಾಗಿದ್ದಾರೆ. ಜಿಲ್ಲೆಯ ಮೂರು ಕೇಂದ್ರದಲ್ಲಿ 75 ಮಂದಿ ಆರೋಗ್ಯ ಇಲಾಖೆ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.
ವೈದ್ಯರು, ಸಪೋರ್ಟಿಂಗ್ ಟೀಂ ಸೇರಿ 50 ಮಂದಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆಯ 20 ಸಾವಿರ ಮಂದಿಗೆ ಮೊದಲ ಹಂತದಲ್ಲಿ ಕರೋನ ಲಸಿಕೆ, ಯಾರಿಗೆಲ್ಲ ಸಿಗುತ್ತೆ ಲಸಿಕೆ? ಪೂರೈಕೆ ಹೇಗೆ?
ಡ್ರೈ ರನ್‍ಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೂರು ಪ್ರತ್ಯೇಕ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.
ಕೊಠಡಿ 1 : ನಿರೀಕ್ಷಾಣ ರೂಂ – ಲಸಿಕೆ ಪಡೆಯಲು ಬಂದವರ ಮಾಹಿತಿ ಆನ್‍ಲೈನ್‍ಗೆ ಅಪ್‍ಲೋಡ್
ಕೊಠಡಿ 2 : ಚುಚ್ಚುಮದ್ದು ಕೊಠಡಿ – ಇಲ್ಲಿ ಫಲಾನುಭವಿಗಳಿಗೆ ಲಸಿಕೆ ನೀಡಲಾಗುತ್ತದೆ.
ಕೊಠಡಿ 3 : ಪರೀಕ್ಷಾ ಕೊಠಡಿ – ಲಸಿಕೆ ಪಡೆದ ಫಲಾನುಭವಿಗಳನ್ನು ಕೆಲ ಹೊತ್ತು ವಿಶ್ರಾಂತಿಗೆ ಸೂಚಿಸಿ, ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅಡ್ಡ ಪರಿಣಾಮಗಳು ಉಂಟಾದಲ್ಲಿ ಕೂಡಲೇ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ.
ಇದನ್ನೂ ಓದಿ | ಶಿವಮೊಗ್ಗಕ್ಕೆ ಮೊದಲು ಬರುತ್ತೆ ಕರೋನ ಲಸಿಕೆ, ಅಕ್ಕಪಕ್ಕದ ಜಿಲ್ಲೆಗೆ ಇಲ್ಲಿಂದಲೇ ಪೂರೈಕೆ, ಹೇಗಿದೆ ಗೊತ್ತಾ ಲಸಿಕೆ ಸಂಗ್ರಹಕ್ಕೆ ವ್ಯವಸ್ಥೆ?
ಮೆಗ್ಗಾನ್ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೇರಿದಂತೆ, ಆರೋಗ್ಯ ಇಲಾಖೆ, ಸಿಮ್ಸ್ ಆಡಳಿತ ಮಂಡಳಿ, ಅಧಿಕಾರಿಗಳ ತಂಡ ಡ್ರೈ ರನ್ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಡ್ರೈ ರನ್ ಕಾರ್ಯದ ಪರಿಶೀಲನೆ ನಡೆಸಿದರು.
ಇದನ್ನೂ ಓದಿ | ಶಿವಮೊಗ್ಗದ ನಾಲ್ಕು ಮಂದಿಯಲ್ಲಿ ರೂಪಾಂತರಿ ಕರೋನ ವೈರಸ್ ಪತ್ತೆ
ಇದನ್ನೂ ಓದಿ | ಶಿವಮೊಗ್ಗದಲ್ಲಿ ಬ್ರಿಟನ್ ವೈರಸ್, ಆರೋಗ್ಯ ಇಲಾಖೆ ಅಧಿಕಾರಿಗಳ ಮುಂಜಾಗ್ರತೆಯಿಂದ ತಪ್ಪಿತು ದೊಡ್ಡ ಅನಾಹುತ
ಇದನ್ನೂ ಓದಿ | ಶಿವಮೊಗ್ಗದಲ್ಲಿ ರೂಪಾಂತರಿ ವೈರಸ್, ಮನೆ ಮತ್ತೊಮ್ಮೆ ಸ್ಯಾನಿಟೈಸ್, ನಾಲ್ವರು ವಿದೇಶದಿಂದ ಬಂದಿದ್ಯಾವಾಗ?
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಕೋಟೆ ದೇವಸ್ಥಾನದಲ್ಲಿ 30 ದಿನ ಸೀತಾಕಲ್ಯಾಣ ಶತಮಾನೋತ್ಸವ, ಏನೇನೆಲ್ಲ ಕಾರ್ಯಕ್ರಮ ಇರಲಿದೆ?
- BREAKING NEWS – ಶಿವಮೊಗ್ಗದ ಖ್ಯಾತ ಡಾಕ್ಟರ್ ಮತ್ತು ಪುತ್ರ ನೇಣಿಗೆ ಶರಣು
- ಬಿಸ್ಕತ್ತು, ಕೇಕ್, ಪಿಜ್ಜಾ, ಬೇಕರಿ ಉತ್ಪನ್ನಗಳ ತಯಾರಿಕೆ ತರಬೇತಿ, ಯಾರೆಲ್ಲ ಭಾಗವಹಿಸಬಹುದು?
- ಕ್ರೆಡಿಟ್ ಕಾರ್ಡ್ನಿಂದ ಹಣ ಕಡಿತ, ಎಸ್ಬಿಐಗೆ ಬಿಸಿ ಮುಟ್ಟಿಸಿದ ಶಿವಮೊಗ್ಗ ಗ್ರಾಹಕ ನ್ಯಾಯಾಲಯ
- ಶಿಕಾರಿಪುರದಲ್ಲಿ ಎತ್ತಿನಗಾಡಿ ಏರಿ ಸರ್ಕಾರದ ವಿರುದ್ಧ ವಿಜಯೇಂದ್ರ ಗುಟುರು, ಏನೇನು ಹೇಳಿದರು?
- ಶಿವಮೊಗ್ಗ ಸಿಟಿಯಲ್ಲಿ ಕಾಲೇಜು ಬಸ್ ಅಡ್ಡಗಟ್ಟಿದ ಅಪರಿಚಿತರು, ಮುಂದೇನಾಯ್ತು?
- BREAKING NEWS – ಶಿವಮೊಗ್ಗದ ಪ್ರಯಾಣಿಕರಿಗು ತಟ್ಟಿದ ಇಂಡಿಗೋ ರದ್ದು ಬಿಸಿ
- BREAKING NEWS – ಶಿವಮೊಗ್ಗ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್ ಆದೇಶ, ಯಾಕೆ?
![]()