SHIMOGA | ಜನ ಶತಾಬ್ದಿ ರೈಲಿನ ಸಮಯ ಬದಲು, ಹಳೆ ಟೈಮ್ಗೆ ಬಂದು ಗೊಂದಲಕ್ಕೀಡಾದ ಪ್ರಯಾಣಿಕರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 01 FEBRUARY 2021

ಶಿವಮೊಗ್ಗ – ಬೆಂಗಳೂರು ಜನ ಶತಾಬ್ದ ರೈಲಿನ ಸಮಯ ಬದಲಾಗಿದೆ. ಎರಡು ದಿನದಿಂದ ಬದಲಾದ ಸಮಯದಲ್ಲಿ ರೈಲು ಸಂಚರಿಸುತ್ತಿದೆ. ಇದರ ಮಾಹಿತಿ ಇಲ್ಲದೆ ಪ್ರಯಾಣಿಕರು ಹಿಂದಿನ ಸಮಯಕ್ಕೆ ಅನುಗುಣವಾಗಿ ನಿಲ್ದಾಣಕ್ಕೆ ಬರುತ್ತಿದ್ದಾರೆ.

ಬದಲಾದ ಸಮಯ ಯಾವುದು?

ಜನ ಶತಾಬ್ದಿ ರೈಲು ಬೆಳಗ್ಗೆ 5.30ರ ಬದಲು 5.15ಕ್ಕೆ ಶಿವಮೊಗ್ಗದಿಂದ ಹೊರಡುತ್ತಿದೆ. ಹದಿನೈದು ನಿಮಿಷ ಮೊದಲು ರೈಲು ಸಂಚಾರ ಆರಂಭಿಸುತ್ತಿದೆ. ಈ ಮೊದಲು ಜನ ಶತಾಬ್ದ ರೈಲು ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದವರೆಗೆ ಮಾತ್ರ ತೆರಳುತ್ತಿತ್ತು. ಆದರೆ ಈಗ ಮೆಜಸ್ಟಿಕ್‍ ರೈಲ್ವೆ ನಿಲ್ದಾಣದವರೆಗೆ ತಲುಪುತ್ತಿದೆ.

ಸಂಜೆ 5.30ರ ಬದಲು 5.15ಕ್ಕೆ ಬೆಂಗಳೂರಿನಿಂದ ಹೊರಡಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಬೆಂಗಳೂರಿನ ಮೆಜಸ್ಟಿಕ್‍ನಿಂದ ಶಿವಮೊಗ್ಗಕ್ಕೆ ಬರಲಿದೆ.

ಸಮಯ ಗೊತ್ತಾಗದೆ ಗೊಂದಲ

ರೈಲಿನ ಸಮಯ ಬದಲಾವಣೆ ಆಗಿರುವ ಕುರಿತು ರೈಲ್ವೆ ಇಲಾಖೆ ಈ ಮೊದಲೆ ಪ್ರಕಟಣೆ ಹೊರಡಿಸಿತ್ತು. ಆದರೆ ಆನ್‍ಲೈನ್‍ನಲ್ಲಿ ಟಿಕೆಟ್ ಖರೀದಿಸಿದ ಹಲವು ಪ್ರಯಾಣಿಕರಿಗೆ ರೈಲಿನ ಸಮಯ ಬದಲಾವಣೆಯ ಮಾಹಿತಿ ಇಲ್ಲದೆ ತಡವಾಗಿ ನಿಲ್ದಾಣಕ್ಕೆ ಬಂದು, ಗೊಂದಲಕ್ಕೀಡಾಗಿದ್ದಾರೆ. ತಡವಾಗಿ ರೈಲ್ವೆ ನಿಲ್ದಾಣಕ್ಕೆ ಬಂದ ಪ್ರಯಾಣಿಕರಿಗೆ ಇಲಾಖೆ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸಿದರು. ಜನವರಿ 31ರಿಂದ  ಬದಲಾದ ಸಮಯದಲ್ಲಿ ರೈಲು ಸಂಚರಿಸುತ್ತಿದೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment