ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | 03 ಫೆಬ್ರವರಿ 2021
ಮನುಷ್ಯನ ಪಾಲಿಗೆ ಅತ್ಯಂತ ಕರಾಳ ವರ್ಷಗಳಲ್ಲಿ ಒಂದು 2020. ಕರೋನ ವೈರಸ್‍ನ ಕಾರಣದಿಂದಾಗಿ ಇಡೀ ಜಗತ್ತು ಸ್ಥಬ್ಧವಾಗಿತ್ತು. ಎಲ್ಲೆಲ್ಲೂ ಲಾಕ್‍ಡೌನ್. ಮುಕ್ಕಾಲು ವರ್ಷ ಜನರು ಮನೆ ಬಿಟ್ಟು ಹೊರ ಬಾರದ ಸ್ಥಿತಿ. ಶಿವಮೊಗ್ಗದಲ್ಲಿ ಚಿತ್ರಣ ಭಿನ್ನವಾಗಿರಲಿಲ್ಲ. ಆದರೂ ಜಿಲ್ಲೆಯ ಸುದ್ದಿಗಳನ್ನು ನಿರಂತರವಾಗಿ ಪ್ರಕಟಿಸುತ್ತ, ಕರೋನ ಕುರಿತು ಜಾಗೃತಿ ಮೂಡಿಸುತ್ತ ಹಳ್ಳಿ ಹಳ್ಳಿಯನ್ನು ತಲುಪಿದೆ ನಿಮ್ಮ ಶಿವಮೊಗ್ಗ ಲೈವ್.
2020ನೇ ವರ್ಷದಲ್ಲಿ ಶಿವಮೊಗ್ಗ ಲೈವ್.ಕಾಂ ವೆಬ್‍ಸೈಟ್ 7 ಲಕ್ಷ ಓದುಗರನ್ನು ತಲುಪಿದೆ. ಈ ವರ್ಷ ಲಕ್ಷ ಲಕ್ಷ ಜನರನ್ನು ತಲುಪಿದ ಜಿಲ್ಲೆಯ ಏಕೈಕ ಮಾಧ್ಯಮ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.
ಜಿಲ್ಲೆಯ ಯಂಗ್ ಮಾಧ‍್ಯಮ
ಶಿವಮೊಗ್ಗ ಲೈವ್.ಕಾಂ ಜಿಲ್ಲೆಯ ಅತಿ ಹೆಚ್ಚು ಯುವ ಓದುಗರನ್ನು ತಲುಪುತ್ತಿದೆ. ಗೂಗಲ್ ಸಂಸ್ಥೆಯ ಅನಾಲಿಟಿಕ್ಸ್ ಪ್ರಕಾರ, 25 – 34ರ ವಯಸ್ಸಿನ 2.23 ಲಕ್ಷ ಓದುಗರನ್ನು ತಲುಪಿದ್ದೇವೆ. ಶಿವಮೊಗ್ಗ ಲೈವ್‍ಗೆ 18 ರಿಂದ 44 ವರ್ಷದೊಳಗಿನವರೆ ಅತಿ ಹೆಚ್ಚು ಓದುಗರು.
ಹೆಚ್ಚುತ್ತಿದ್ದಾರೆ ಮಹಿಳಾ ಓದುಗರು
ಏಳು ಲಕ್ಷ ಓದುಗರ ಪೈಕಿ ಅತಿ ಹೆಚ್ಚು ಪುರುಷರಿದ್ದಾರೆ. ಮಹಿಳಾ ಓದುಗರ ಸಂಖ್ಯೆಯು ಹೆಚ್ಚಳವಾಗುತ್ತಿದೆ. ಶಿವಮೊಗ್ಗ ಲೈವ್‍ಗೆ 5 ಲಕ್ಷ ಪುರುಷ ಓದುಗರು, 2 ಲಕ್ಷ ಮಹಿಳಾ ಓದುಗರಿದ್ದಾರೆ.
ವಿದೇಶದಲ್ಲೂ ಶಿವಮೊಗ್ಗದ ಹವಾ
ಜಗತ್ತಿನ ಯಾವುದೆ ಮೂಲೆಯಲ್ಲಿ ಕುಳಿತು, ಇಂಟರ್‍ನೆಟ್ ಆನ್ ಮಾಡಿದರೂ ಶಿವಮೊಗ್ಗದ ಸುದ್ದಿ ಓದಬಹುದು. ಶಿವಮೊಗ್ಗ ಲೈವ್‍ಗೆ ಶೇ.96.69ರಷ್ಟು ಓದುಗರು ಭಾರತದಲ್ಲಿದ್ದಾರೆ. ಉಳಿದಂತೆ ಸುಮಾರು ಶೇ.4ರಷ್ಟು ಓದುಗರು ವಿದೇಶದಲ್ಲಿದ್ದಾರೆ. ಅಮೆರಿಕದಲ್ಲಿ ಶೇ.1.68, ಸೌದಿ ಅರೇಬಿಯಾದಲ್ಲಿ ಶೇ.0.28, ಯುನೈಟೆಡ್ ಅರಬ್ ಎಮಿರೇಟ್ಸ್‍ನಲ್ಲಿ ಶೇ.0.25, ಕುವೈತ್‍ನಲ್ಲಿ ಶೇ.0.7, ಒಮನ್ ಶೇ.0.06, ಜರ್ಮನಿ ಶೇ.0.05, ಇಂಗ್ಲೆಂಡ್ ಶೇ.0.05, ಜಪಾನ್ ಶೇ.0.05 ಸೇರಿದಂತೆ ಸುಮಾರು 30 ದೇಶದಲ್ಲಿ ಓದುಗರಿದ್ದಾರೆ.
ಹೇಗೆ ಸಿಗುತ್ತೆ ಈ ಲೆಕ್ಕ?
ಸುದ್ದಿ ಪತ್ರಿಕೆಗಳ ಮುದ್ರಣ, ಮಾರಾಟದ ಆಧಾರದ ಮೇಲೆ ಓದುಗರ ಸಂಖ್ಯೆ ಲೆಕ್ಕ ಹಾಕಲಾಗುತ್ತದೆ. ಟಿವಿ ಚಾನೆಲ್‍ಗಳಿಗೆ ಬಾರ್ಕ್ ಸಂಸ್ಥೆ ನೀಡಿವ ರೇಟಿಂಗ್ಸ್ (ಟಿಆರ್‍ಪಿ) ಮಾನದಂಡವಾಗಿದೆ. ಅದೆ ರೀತಿ ವೆಬ್‍ಸೈಟ್‍ಗಳು, ಗೂಗಲ್ ಸಂಸ್ಥೆ ನೀಡುವ ಅನಾಲಿಟಿಕ್ಸ್ ಮೂಲಕ ಓದುಗರನ್ನು ತಿಳಿಯಬಹುದಾಗಿದೆ. ಗೂಗಲ್ ಅನಾಲಿಟಿಕ್ಸ್ ಅತ್ಯಂತ ನಿಖರವಾಗಿ ಓದುಗರ ಸಂಖ್ಯೆ ನೀಡಲಿದೆ.
ಒಮ್ಮೆ ಒಬ್ಬ ಓದುಗರು ವೆಬ್‍ಸೈಟ್‍ನಲ್ಲಿ ಸುದ್ದಿ ಓದಿದರೆ ಮುಗಿಯಿತು. ಅವರ ಮೊಬೈಲ್ ಅಥವಾ ಜೀ ಮೇಲ್ ಅನ್ನು ಇಂಟರ್‍ನೆಟ್ ಮೂಲಕ ಗೂಗಲ್ ಸಂಸ್ಥೆ ರಿಜಿಸ್ಟರ್ ಮಾಡಿಕೊಳ್ಳುತ್ತದೆ. ಇಡೀ ವರ್ಷದಲ್ಲಿ ಆ ಜೀ ಮೇಲ್ ಹೊಂದಿರುವ ವ್ಯಕ್ತಿ ಎಷ್ಟು ಬಾರಿ ವೆಬ್‍ಸೈಟ್ ತೆರೆದರೂ ಓದುಗರ ಸಂಖ್ಯೆಯನ್ನು 1 ಎಂದೇ ಪರಿಗಣಿಸಲಾಗುತ್ತದೆ.
ಇಲ್ಲಿ ಎಲ್ಲವು ಡಿಜಿಟಲ್ ರೂಪದಲ್ಲಿ ಸಂಗ್ರಹವಾಗಲಿದೆ. ನೀವು ಕೂಡ ಗೂಗಲ್ ಅನಾಲಿಟಿಕ್ಸ್ ಕುರಿತು ಗೂಗಲ್ ಮೂಲಕವೆ ತಿಳಿಯಬಹುದಾಗಿದೆ.
ಅತ್ಯಂತ ಕಡಿಮೆ ಅವಧಿಯಲ್ಲಿ, ಇಷ್ಟು ದೊಡ್ಡ ಸಂಖ್ಯೆಯ ಓದುಗರು, ಶಿವಮೊಗ್ಗ ಲೈವ್.ಕಾಂ ಮೇಲೆ ಭರವಸೆ ಇರಿಸಿದ್ದಾರೆ. ಇನ್ನಷ್ಟು ಸುದ್ದಿ, ಮತ್ತಷ್ಟು ವಿಶೇಷತೆ ಜೊತೆ ಶಿವಮೊಗ್ಗ ಲೈವ್ ನಿಮ್ಮ ಮುಂದೆ ಬರಲಿದೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಸದ್ಯದಲ್ಲೇ ನಿರೀಕ್ಷಿಸಿ, ಮತ್ತಷ್ಟು ಹೊಸತನ.
ನೀವು ನಿಮ್ಮ ಅಭಿಪ್ರಾಯ ತಿಳಿಸಿ..
ಶಿವಮೊಗ್ಗ ಲೈವ್ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ನಿರೀಕ್ಷೆಗಳನ್ನು ಬರೆಯಿರಿ. ನಿಮ್ಮ ಮೊಬೈಲ್ ನಂಬರ್ ಎಂಟ್ರಿ ಮಾಡುವುದು ಕಡ್ಡಾಯ. ನಾವು ನಿಮ್ಮನ್ನು ಸಂಪರ್ಕಿಸಲು ಇದು ಅನುಕೂಲ.
ನಮ್ಮ ವೆಬ್‍ಸೈಟ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422