ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
(FILE PHOTO)
ಶಿವಮೊಗ್ಗ ಲೈವ್.ಕಾಂ | SHIMOGA NEWS | 11 FEBRUARY 2021
ಉಂಬ್ಳೆಬೈಲು ಅರಣ್ಯ ವ್ಯಾಪ್ತಿಯಲ್ಲಿ ಮತ್ತೆ ಕಾಡಾನೆಗಳು ಪ್ರತ್ಯಕ್ಷವಾಗಿವೆ. ತೋಟಗಳಿಗೆ ನುಗ್ಗಿ ಅಡಕೆ ಸಸಿಗಳಿಗೆ ಹಾನಿ ಮಾಡಿರುವುದು ವರದಿಯಾಗಿದೆ. ಇದರಿಂದ ಇತ್ತೀಚೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಕ್ರೆಬೈಲು ಬಿಡಾರದ ಆನೆಗಳನ್ನು ಉಪಯೋಗಿಸಿಕೊಂಡು ನಡೆಸಿದ ಕಾರ್ಯಾಚರಣೆ ಹೊಳೆಯಲ್ಲಿ ಹುಣಸೇಹಣ್ಣು ಹಿಂಡಿದಂತೆ ಆಗಿದೆ.
ಎಲ್ಲೆಲ್ಲಿ ಪ್ರತ್ಯಕ್ಷವಾಗಿವೆ ಆನೆಗಳು?
ಸೋಮವಾರ ಹಾಲ್ ಲಕ್ಕವಳ್ಳಿಯಲ್ಲಿ ಅಡಕೆ ತೋಟಕ್ಕೆ ನುಗ್ಗಿದ ಕಾಡಾನೆಗಳು ಸಸಿಗಳನ್ನು ತಿಂದಿರುವುದು ತಿಳಿದು ಬಂದಿದೆ.
ಕೈದೊಟ್ಲು ಗ್ರಾಮದ ರೈತ ಬಾಲಪ್ಪ ಅವರ ತೋಟಕ್ಕೆ ನುಗ್ಗಿರುವ ಕಾಡಾನೆಗಳು 25 ಸಸಿಗಳನ್ನು ಮುರಿದಿವೆ.
ಭದ್ರಾ ಅಭಯಾರಣದಿಂದ ಹಲವು ವರ್ಷದಿಂದ ಈ ಭಾಗಕ್ಕೆ ಬಂದಿರುವ ಆನೆಗಳು, ತೋಟ, ಗದ್ದೆಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಹಾಗಾಗಿ ಅವುಗಳನ್ನು ಮತ್ತೆ ಭದ್ರಾ ಅಭಯಾರಣಕ್ಕೆ ಓಡಿಸಲು ನಿರ್ಧರಿಸಲಾಗಿತ್ತು. ಇದೆ ಕಾರಣಕ್ಕೆ ಕಳೆದ ವಾರ ಕಾರ್ಯಾಚರಣೆ ನಡೆಸಲಾಗಿತ್ತು.
ಏನಿದು ಕಾರ್ಯಾಚರಣೆ?
ಸಕ್ರೆಬೈಲು ಬಿಡಾರದ ಅನೆಗಳನ್ನು ಉಪಯೋಗಿಸಿಕೊಂಡು, ಕಾಡಾನೆಗಳನ್ನು ಭದ್ರಾ ಅಭಯಾರಣಕ್ಕೆ ಓಡಿಸಲಾಗಿತ್ತು. ಮೂರು ದಿನ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಈ ಆಪರೇಷನ್ ಮುಗಿದು ನಾಲ್ಕು ದಿನಕ್ಕೆ ಕಾಡಾನೆಗಳು ಮತ್ತೊಮ್ಮೆ ಪ್ರತ್ಯಕ್ಷವಾಗಿವೆ. ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422