ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 19 MARCH 2021
ರೈಲ್ವೆ ಮಾರ್ಗ ಮತ್ತು ಜಂಕ್ಷನ್‍ಗಾಗಿ ಒತ್ತಾಯಿಸಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಹಾರನಹಳ್ಳಿಯಲ್ಲಿ, ಇವತ್ತು ಬಂದ್ ಆಚರಿಸಲಾಯಿತು. ಅಂಗಡಿಗಳನ್ನು ಬಂದ್ ಮಾಡಿ, ವ್ಯಾಪಾರ ವಹಿವಾಟ ಸ್ಥಗಿತಗೊಳಿಸಲಾಗಿತ್ತು.
ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ರೈಲ್ವೆ ಮಾರ್ಗ ನಿರ್ಮಾಣವಾಗುತ್ತಿದೆ. ಹಾರನಹಳ್ಳಿಯಲ್ಲಿ ರೈಲ್ವೆ ಜಂಕ್ಷನ್ ನಿರ್ಮಿಸಬೇಕು. ಇದಕ್ಕೆ ಬಿಎಸ್‍ವೈ ಜಂಕ್ಷನ್ ಎಂದು ನಾಮಕರಣ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದರು.
ಪ್ರತಿಭಟನೆ, ಮೆರವಣಿಗೆ, ಮನವಿ
ಹಾರನಹಳ್ಳಿ ರೈಲ್ವೆ ಜಂಕ್ಷನ್ ಹೋರಾಟ ಸಮಿತಿ ವತಿಯಿಂದ ಮೆರವಣಿಗೆ ನಡೆಸಲಾಯಿತು. ಚೌಕಿ ಮಠ ಮತ್ತು ರಾಮಲಿಂಗೇಶ್ವರ ಮಠದ ಸ್ವಾಮೀಜಿಗಳ ನೇತೃತ್ವದಲ್ಲಿ , ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡರು. ನಾಡ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಅಲ್ಲಿಯೇ ಪ್ರತಿಭಟನಾ ಸಭೆ ನಡೆಸಲಾಯಿತು.
ಹಾರನಹಳ್ಳಿಯನ್ನು ಕೈಬಿಟ್ಟಿದ್ದು ಏಕೆ?
ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ರೈಲ್ವೆ ಮಾರ್ಗದಲ್ಲಿ ಕೊನವಳ್ಳಿಯಿಂದ ಸೂರಗೊಂಡನ ಕೊಪ್ಪಕ್ಕೆ ತೆರಳುವಂತೆ ಯೋಜನೆ ಸಿದ್ಧಪಡಿಸಲಾಗಿದೆ. ಕೊನವಳ್ಳಿ ಕಡೆಯಿಂದ ಸೂರಗೊಂಡನ ಕೊಪ್ಪಕ್ಕೆ 18 ಕಿ.ಮೀ ಆಗಲಿದೆ. ಆದರೆ ಹಾರನಹಳ್ಳಿಯಿಂದ ಸೂರಗೊಂಡನಕೊಪ್ಪಕ್ಕೆ ಕೇವಲ 8 ಕಿ.ಮೀ ಆಗುತ್ತದೆ. ಕಡಿಮೆ ದೂರ ಇರುವುದರಿಂದ ಹಾರನಹಳ್ಳಿ ಮೂಲಕ ರೈಲ್ವೆ ಮಾರ್ಗ ಸಿದ್ಧಪಡಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹಾರನಹಳ್ಳಿಯಲ್ಲಿ ಸುಮಾರು 10 ರಿಂದ 15 ಸಾವಿರ ಜನಸಂಖ್ಯೆ ಇದೆ. ತಾಲೂಕು ಕೇಂದ್ರವಾಗುವ ಅರ್ಹತೆಯನ್ನು ಹೊಂದಿದೆ. ಹಾಗಾಗಿ ಇಲ್ಲಿ ರೈಲ್ವೆ ಜಂಕ್ಷನ್ ನಿರ್ಮಿಸಬಹುದು. ಆದ್ದರಿಂದ ಹೊಸ ಬಿ.ಜಿ. ರೈಲ್ವೆಮಾರ್ಗವನ್ನು ಶಿವಮೊಗ್ಗ – ಹಾರನಹಳ್ಳಿ – ಸೂರಗೊಂಡನಕೊಪ್ಪ – ಶಿಕಾರಿಪುರ – ರಾಣೆಬೆನ್ನೂರು ಮಾರ್ಗ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422