ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 19 MARCH 2021
ಕರೋನ ಎರಡನೆ ಅಲೆಯ ಭೀತಿ ಮತ್ತು ಸೋಂಕು ವ್ಯಾಪಕವಾಗಿ ಹರಡದಂತೆ ತಡೆಗಟ್ಟಲು ಶಿವಮೊಗ್ಗ ಮಹಾನಗರ ಪಾಲಿಕೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ದಂಡ ವಿಧಿಸಿ, ಪ್ರಕರಣ ದಾಖಲಿಸಲಾಗುತ್ತದೆ ಎಂದು ಪಾಲಿಕೆ ಕಮಿಷನರ್ ಚಿದಾನಂದ ವಟಾರೆ ಎಚ್ಚರಿಸಿದ್ದಾರೆ.
ಹೊಸ ಮಾರ್ಗಸೂಚಿ ಏನು?
ಸಾಮಾಜಿಕ ಆಚರಣೆಗಳು, ಸಮಾರಂಭಗಳಲ್ಲಿ ಪ್ರತಿ ವ್ಯಕ್ತಿಯ ನಡುವೆ 3.25 ಮೀಟರ್ ಅಂತರವಿರಬೇಕು.
ಮದುವೆ – ತೆರೆದ ಪ್ರದೇಶವಾದರೆ 500 ಮಂದಿ ಮೀರಬಾರದು. ಸಭಾಂಗಣ, ಹಾಲ್ ಸೇರಿ ಮುಚ್ಚಿದ ಪ್ರದೇಶದಲ್ಲದಾರೆ 200 ಮಂದಿ ಮೀರಬಾರದು.
ಜನ್ಮದಿನ ಮತ್ತು ಇತರೆ ಆಚರಣೆಗಳು – ತೆರೆದ ಪ್ರದೇಶವಾದರೆ 100 ಮಂದಿ, ಸಭಾಂಗಣ, ಹಾಲ್ ಇತ್ಯಾದಿಗಳಲ್ಲಿ 50 ಮಂದಿ ಮೀರಬಾರದು.
ನಿಧನ / ಶವ ಸಂಸ್ಕಾರ – ತೆರೆದ ಪ್ರದೇಶವಾದರೆ 100, ಸಭಾಂಗಣ, ಹಾಲ್ ಇತ್ಯಾದಿಗಳಲ್ಲಿ 50 ಮಂದಿ ಮೀರಬಾರದು.
ಅಂತ್ಯ ಕ್ರಿಯೆ – 50 ಮಂದಿ ಮೀರಬಾರದು.
ಇತರೆ ಸಮಾರಂಭಗಳು – 100 ಮಂದಿ ಮೀರಬಾರದು
ರಾಜಕೀಯ, ಧಾರ್ಮಿಕ ಆಚರಣೆಗಳು ಅಥವಾ ಸಮಾರಂಭಗಳು – ತೆರೆದ ಪ್ರದೇಶಗಳಲ್ಲಿ ನಡೆಸಬೇಕು ಮತ್ತು 500 ಮಂದಿ ಮೀರಬಾರದು.
ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ
ಸಾಮಾಜಿಕ ಅಂತರ ಪಾಲನೆ ಮಾಡಬೇಕು ಮತ್ತು ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಈ ಹಿಂದಿನಂತೆ ದಂಡ ವಿಧಿಸಲಾಗುತ್ತದೆ. ಅಲ್ಲದೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಮಹಾನಗರ ಪಾಲಿಕೆ ಕಮಿಷನರ್ ಚಿದಾನಂದ ವಟಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422