ಶಿವಮೊಗ್ಗ ಲೈವ್.ಕಾಂ | SHIMOGA NEWS | 23 MARCH 2021
ಜಿಲ್ಲೆಯ ಮೊದಲ ನ್ಯೂಸ್ ವೆಬ್ಸೈಟ್, ಶಿವಮೊಗ್ಗ ಲೈವ್.ಕಾಂ, ಈಗ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ. ಪ್ರತಿ ಹಳ್ಳಿಯಲ್ಲಿನ ಬೆಳವಣಿಗೆಯು ಸುದ್ದಿಯಾಗಬೇಕು, ಪ್ರತಿ ಹಳ್ಳಿಯ ಸುದ್ದಿಗೂ ಮಹತ್ವ ಸಿಗಬೇಕು. ಇದೇ ಕಾರಣಕ್ಕೆ ನಮ್ಮೂರ ನ್ಯೂಸ್ ಅನ್ನುವ ವಿಭಿನ್ನ ಕಾನ್ಸೆಪ್ಟ್ ಲಾಂಚ್ ಮಾಡಲಾಗುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಏನಿದು ನಮ್ಮೂರ ನ್ಯೂಸ್?
ನಮ್ಮೂರ ನ್ಯೂಸ್..! ಹೆಸರೆ ಹೇಳುವಂತೆ ನಮ್ಮ ಊರಿನ ಸುದ್ದಿಗಳು. ನಮ್ಮೂರಿನ ಜಾತ್ರೆ, ನಮ್ಮೂರಿನ ಕ್ರೀಡಾಕೂಟಗಳು, ನಮ್ಮೂರಿನ ವಿಶೇಷ ಸಂಗತಿಗಳು, ನಮ್ಮೂರಿನವರ ಸಾಧನೆ, ನಮ್ಮೂರಿನ ಶಾಲೆಯ ಕಾರ್ಯಕ್ರಮಗಳು, ನಮ್ಮೂರಿನ ಗ್ರಾಮ ಪಂಚಾಯಿತಿ ಸಭೆಗಳು, ನಮ್ಮೂರಿನ ಸಮಸ್ಯೆಗಳು ಸೇರಿದಂತೆ ನಮ್ಮೂರಿನ ಪ್ರತಿ ವಿಚಾರವು ಸುದ್ದಿಯಾಗಬೇಕು. ಇದೆ ಕಾರಣಕ್ಕೆ ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ಆರಂಭಿಸಿದೆ.
ಗಂಡ ಹೆಂಡತಿ ಜಗಳ, ಸಹೋದರರ ಕಲಹ,ಆಸ್ತಿ ವ್ಯಾಜ್ಯ ಸೇರಿದಂತೆ ವೈಯಕ್ತಿಕ ವಿಚಾರಗಳನ್ನು ನಾವು ಪ್ರಕಟಿಸುವುದಿಲ್ಲ.
ನಿಮ್ಮೂರ ಸುದ್ದಿಗೆ ನೀವೇ ರಿಪೋರ್ಟರ್ಗಳು
ನಿಮ್ಮೂರಿನ ಸುದ್ದಿಗಳಿಗೆ ನೀವೆ ವರದಿಗಾರರು. ಸುದ್ದಿಗೆ ಸಂಬಂಧಿಸಿದ ಫೋಟೊ, ವಿಡಿಯೋಗಳನ್ನು ವೆಬ್ಸೈಟ್ನಲ್ಲಿ ಮೇಲೆ ಕಾಣಿಸುವ ನಮ್ಮೂರ ನ್ಯೂಸ್ ಫೋಟೊದ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಓಪನ್ ಆಗುವ ವಾಟ್ಸಪ್ ಲಿಂಕ್ ಮೂಲಕ ಕಳುಹಿಸಿ. ನಿಮ್ಮ ಮೆಸೇಜು ತಲುಪುತ್ತಿದ್ದಂತೆ ಶಿವಮೊಗ್ಗ ಲೈವ್.ಕಾಂ ಕಡೆಯಿಂದ ಮೆಸೇಜ್ ಬರಲಿದೆ.
ಫೋಟೊ, ವಿಡಿಯೋ, ಮಾಹಿತಿ
ಸುದ್ದಿಗಳನ್ನು ಕಳುಹಿಸುವಾಗ ಫೋಟೊ ಕಳುಹಿಸುವುದು ಕಡ್ಡಾಯ. ವಿಡಿಯೋ ಇದ್ದರೆ ಅದನ್ನು ಕೂಡ ಕಳುಹಿಸಬಹುದಾಗಿದೆ.
ಅಪಘಾತಗಳು, ಅಪರಾಧದ ಮಾಹಿತಿ ನೀಡುವಾಗ ಆತುರ ಬೇಡ. ಗಾಯಾಳುಗಳು, ನೊಂದವರ ರಕ್ಷಣೆ ಕಾರ್ಯ ಮೊದಲು ನಡೆಯಲಿದೆ. ಪೊಲೀಸರಿಗೆ ಘಟನೆಯ ಮಾಹಿತಿ ನೀಡಿ, ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಿ. ಆ ಬಳಿಕ ಸುದ್ದಿ ಕಳುಹಿಸಿ. ಸುದ್ದಿಗಿಂತಲೂ ಪ್ರಾಣ ಮುಖ್ಯ. ಅದು ನಮ್ಮ ಅದ್ಯತೆ.
ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡುವಾಗ ಸ್ಕ್ರೀನ್ 16:9 ರೀತಿಯಲ್ಲಿ ಇರಲಿ. ಅಂದರೆ ಮೊಬೈಲನ್ನು ಅಡ್ಡ ಹಿಡಿದು ರೆಕಾರ್ಡ್ ಮಾಡಿ.
ಕಾರ್ಯಕ್ರಮದ ಮಾಹಿತಿ ನೀಡುವಾಗ ಸಾದ್ಯವಾದರೆ ಆಮಂತ್ರಣ ಪತ್ರಿಕೆಯ ಫೋಟೊ ಇರಲಿ. ಕಾರ್ಯಕ್ರಮದ ಕುರಿತು ಸಣ್ಣದೊಂದು ಟಿಪ್ಪಣಿ ಕಳುಹಿಸಿ.
ಎಲ್ಲಕ್ಕಿಂತ ಮುಖ್ಯವಾಗಿ ಮಾಹಿತಿಯ ಜೊತೆಗೆ ನಿಮ್ಮ ಹೆಸರು, ಊರಿನ ಹೆಸರು ಕಳುಹಿಸುವುದು ಮರೆಯಬೇಡಿ. ಸುದ್ದಿ ಜೊತೆಗೆ ನಿಮ್ಮ ಹೆಸರು, ಊರು ಪ್ರಕಟಿಸುತ್ತೇವೆ. ಅಗತ್ಯವಿದ್ದರೆ ಮಾಹಿತಿದಾರರ ಗೌಪ್ಯತೆ ಕಾಪಾಡುತ್ತೇವೆ.
ಇನ್ನೇಕೆ ತಡ. ನಿಮ್ಮೂರ ಸುದ್ದಿ ಜಗತ್ತಿಗೆ ತಲುಪಿಸಲು ಸಜ್ಜಾಗಿ.