ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 26 MARCH 2021
ಕರೋನ ಲಾಕ್ಡೌನ್ನಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ ನಡೆಸುತ್ತಿದ್ದ ಆಕಾಂಕ್ಷಿಗಳಿಗೆ ದೊಡ್ಡ ಪೆಟ್ಟು ನೀಡಿತು. ಕೋಚಿಂಗ್ ಸೆಂಟರ್ಗಳಿರಲಿಲ್ಲ. ಅಧ್ಯಯನ ಸಾಮಗ್ರಿಗಳು ಸಿಗಲಿಲ್ಲ. ಈ ವೇಳೆ ಶಿವಮೊಗ್ಗದ ಯುವತಿಯೊಬ್ಬಳು ರೂಪಿಸಿದ ಯೋಜನೆ, ಸಾವಿರಾರು ಆಕಾಂಕ್ಷಿಗಳ ಪರೀಕ್ಷಾ ಸಿದ್ಧತೆಯ ಸ್ವರೂಪವನ್ನೇ ಬದಲಿಸಿತು.
ಯುವತಿಯ ಹೊಸ ಪ್ಲಾನ್
ಶಿವಮೊಗ್ಗದ ಐಶ್ವರ್ಯ, ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಉನ್ನತ ಹುದ್ದೆಯಲ್ಲಿದ್ದಾರೆ. ಈ ನಡುವೆ ಸ್ಪರ್ಧಾತ್ಮಕ ಪರೀಕ್ಷೆಗೂ ಸಿದ್ಧತೆ ನಡೆಸುತ್ತಿದ್ದಾರೆ. ಲಾಕ್ ಡೌನ್ನಿಂದಾಗಿ ಕೋಚಿಂಗ್ ಸೆಂಟರ್ಗಳಿಲ್ಲದೆ, ಅಧ್ಯಯನ ಸಾಮಗ್ರಿಗಳು ಸಿಗದೆ ಸಂಕಷ್ಟಕ್ಕೀಡಾದರು. ತಮ್ಮಂತೆ ಲಕ್ಷಾಂತರ ಆಕಾಂಕ್ಷಿಗಳು ಇದೇ ಸಮಸ್ಯೆ ಎದುರಿಸುತ್ತಿದ್ದು, ಎಲ್ಲರಿಗೂ ಅನುಕೂಲ ಆಗುವಂತಹ ಯೋಜನೆ ರೂಪಿಸಬೇಕು ಎಂದು ಯೋಚಿಸಿದರು. ಅದರಂತೆ ಲಾಕ್ ಡೌನ್ ಅವಧಿಯಲ್ಲೇ ವೆಬ್ಸೈಟ್ ಆರಂಭಿಸಿದರು.
ವೆಬ್ಸೈಟ್ನಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್
ವೆಬ್ಸೈಟ್ ಆರಂಭದ ಕುರಿತು ಐಶ್ವರ್ಯ ಅವರು ತಮ್ಮ ಕುಟುಂಬದವರು, ಸ್ನೇಹಿತರು, ಸಹೋದ್ಯೋಗಿಗಳ ಜೊತೆ ಚರ್ಚಿಸಿದರು. ಹಲವರು ಐಶ್ವರ್ಯ ಅವರೊಂದಿಗೆ ಕೈ ಜೋಡಿಸಿದರು. ಐಎಎಸ್ ಭವನ https://iasbhavan.com/ ಎಂಬ ವೆಬ್ಸೈಟ್ ಆರಂಭಿಸಿದರು. ಸುಮಾರು 20 ಮಂದಿ ಸ್ನೇಹಿತರು ಇದಕ್ಕೆ ಕೈ ಜೋಡಿಸಿದರು.
ಪ್ರತಿದಿನ ಮಾಹಿತಿ, ವಿಚಾರಗಳ ವಿಶ್ಲೇಷಣೆ
ಐಎಎಸ್ ಭವನ ವೆಬ್ಸೈಟ್ನಲ್ಲಿ ಪ್ರತಿದಿನ ಒಂದೊಂದು ವಿಚಾರದ ಕುರಿತು ಮಾಹಿತಿ ನೀಡಲು ಆರಂಭಿಸಿದರು. ಮೊದಲಿಗೆ ಸ್ನೇಹಿತರು, ಹಿತೈಷಿಗಳಷ್ಟೇ ಇದಕ್ಕೆ ಓದುಗರಾಗಿದ್ದರು. ಲಾಕ್ ಡೌನ್ ಅವಧಿ ವಿಸ್ತರಣೆಯಾಗುತ್ತಿದ್ದಂತೆ, ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳು ಈ ವೆಬ್ಸೈಟ್ನತ್ತ ಚಿತ್ತ ಹರಿಸಿದರು. ಐಶ್ವರ್ಯ ಮತ್ತು ಅವರ ಸ್ನೇಹಿತರು ನಿರೀಕ್ಷೆ ಮಾಡದಷ್ಟು ಓದುಗರು ಜೊತೆಯಾದರು. ಪ್ರತಿದಿನ ಒಂದೊಂದು ಸ್ಟಡಿ ಮೆಟಿರಿಯಲ್ ಬಿಡುಗಡೆ ಮಾಡಿದರು. ವಾರಕ್ಕೊಂದು ಟೆಸ್ಟ್ ಕೊಡಲು ಶುರು ಮಾಡಿದರು. ತಾವೂ ಕಲಿತು, ಇತರೆ ಆಕಾಂಕ್ಷಿಗಳ ಕಲಿಕೆಗೂ ಐಶ್ವರ್ಯ ನೆರವಾಗುತ್ತಿದ್ದಾರೆ.
ಕನ್ನಡದಲ್ಲಿ ಮೊದಲ ಪ್ರಯತ್ನ, ಎಲ್ಲವೂ ಉಚಿತ
ವೆಬ್ಸೈಟ್ನ ಕುರಿತು ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಐಶ್ವರ್ಯ, ಇಂಗ್ಲೀಷ್ ಭಾಷೆಯಲ್ಲಿ ಇಂತಹ ಹಲವು ವೆಬ್ಸೈಟ್ಗಳಿವೆ. ಅದರೆ ಕನ್ನಡದಲ್ಲಿ ಇದೆ ಮೊದಲ ಪ್ರಯತ್ನ. ಎಲ್ಲರೂ ಓದಬೇಕು ಅನ್ನುವ ಕಾರಣಕ್ಕೆ ವೆಬ್ಸೈಟ್ನಲ್ಲಿ ಎಲ್ಲಾ ಸ್ಟಡಿ ಮೆಟಿರಿಯಲ್, ಉಚಿತವಾಗಿ ಕೊಡುತ್ತಿದ್ದೇವೆ. ಟೆಸ್ಟ್ಗಳು ಕೂಡ ಉಚಿತವಾಗಿರುತ್ತದೆ’ ಅನ್ನುತ್ತಾರೆ.
ಐಶ್ವರ್ಯ ಅವರ ವೆಬ್ಸೈಟ್ ಕುರಿತು ಇಲ್ಲಿದೆ ವಿಡಿಯೋ ರಿಪೋರ್ಟ್
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422