ಶಿವಮೊಗ್ಗ ಲೈವ್.ಕಾಂ | SHIMOGA | 9 ಏಪ್ರಿಲ್ 2020
ಮಂಗನ ಕಾಯಿಲೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಮಹತ್ವದ ತೀರ್ಮಾನ ಕೈಗೊಂಡಿದೆ. ಅತಿಹೆಚ್ಚು ಕೆಎಫ್’ಡಿ ಪ್ರಕರಣಗಳು ಕಂಡು ಬಂದಿರುವ ಪ್ರದೇಶಗಳನ್ನು ಸೂಕ್ಷ್ಮ ಪ್ರದೇಶ ಎಂದ ಗುರುತಿಸಲಾಗಿದೆ. ಆ ಭಾಗದಲ್ಲಿ ಜನರು ಕಾಡಿಗೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
31 ಪ್ರದೇಶಗಳಲ್ಲಿ ನಿರ್ಬಂಧ
ತೀರ್ಥಹಳ್ಳಿ ಮತ್ತು ಸಾಗರ ತಾಲೂಕಿನ ಕೆಲವು ಕಡೆ ಕೆಎಫ್’ಡಿ ಪ್ರಕರಣಗಳು ಕಂಡು ಬಂದಿವೆ. ಇಂತಹ 31 ಪ್ರದೇಶಗಳನ್ನು ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ‘ಮಲೆನಾಡಿನಲ್ಲಿ ಜನರು ದರಗು ತರಲು ಕಾಡಿಗೆ ತೆರಳುತ್ತಾರೆ. ಈ ವೇಳೆ ಕೆಎಫ್’ಡಿ ವೈರಾಣು ವಾಹಕ ಉಣುಗು ಕಚ್ಚುತ್ತದೆ. ಹಾಗಾಗಿ ಅನೇಕರು ಕೆಎಫ್’ಡಿ ಸೋಂಕಿತರಾಗುತ್ತಿದ್ದಾರೆ. ಆದ್ದರಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ದರಗು ಸಂಗ್ರಹ ಮಾಡದಂತೆ ಜನರಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.
ಯಾವೆಲ್ಲ ಪ್ರದೇಶಗಳಲ್ಲಿ ಕಾಡಿಗೆ ಹೋಗೋದು ನಿರ್ಬಂಧ?
ತೀರ್ಥಹಳ್ಳಿ ತಾಲೂಕಿನ ಹಳ್ಳಿಗಳು
ಮಂಡಗದ್ದೆ PHC ವ್ಯಾಪ್ತಿಯಲ್ಲಿ | 23 ಕೆಎಫ್’ಡಿ ಪ್ರಕರಣಗಳು
ಗ್ರಾಮಗಳು | ಸಿಂಧುವಾಡಿ, ಮೂವಳ್ಳಿ, ಅಡ್ಡಗುಡ್ಡೆ
ಕನ್ನಂಗಿ PHC ವ್ಯಾಪ್ತಿಯಲ್ಲಿ | 28 ಕೆಎಫ್’ಡಿ ಪ್ರಕರಣಗಳು
ಗ್ರಾಮಗಳು | ಕುಡುವಳ್ಳಿ, ಹಿರೇಬೈಲು, ಹೊರಬೈಲು, ಯಡವತ್ತಿ, ಸಿರಿಬೈಲು, ಬಸ್ತಿಕೊಪ್ಪ, ಸಿರಿಬೈಲು
ಬೆಟ್ಟಬಸವಾನಿ PHC ವ್ಯಾಪ್ತಿಯಲ್ಲಿ | 30 ಕೆಎಫ್’ಡಿ ಪ್ರಕರಣಗಳು
ಗ್ರಾಮಗಳು | ಗುಂಡಗದ್ದೆ, ಹೊಸಗದ್ದೆ, ನೇರಳೆ, ತನಿಕಲ್, ಕಾನಕೊಪ್ಪ, ಸರವಿನಕೊಪ್ಪ, ಹುಲ್ಲತ್ತಿ, ಬಾಳಗಾರು, ಅಕ್ಲಾಪುರ, ಕೇಶ್ವಾಪುರ,
ಕೋಣಂದೂರು PHC ವ್ಯಾಪ್ತಿಯಲ್ಲಿ | 24 ಕೆಎಫ್’ಡಿ ಪ್ರಕರಣಗಳು
ಗ್ರಾಮಗಳು | ಹುಲ್ಲತ್ತಿ, ಬಾಳಗಾರು, ದೇಮ್ಲಾಪುರ, ಕನ್ಕಳ್ಳಿ, ಕಲ್ಕಾಪುರ, ಕೇಶವಾಪುರ, ಅಗಸರಕೊಪ್ಪ
ಕುಕ್ಕೆ ಗ್ರಾ.ಪಂ ವ್ಯಾಪ್ತಿಯ | ತನಿಕಲ್, ಸರವಿನಕೊಪ್ಪ, ಮೇಲಿನ ಹೊಸಬೀಡು
ದೇಮ್ಲಾಪುರ ಗ್ರಾ.ಪಂ ವ್ಯಾಪ್ತಿಯ | ದೇಮ್ಲಾಪುರ, ಕಂಕಳ್ಳಿ
ಸಾಗರ ತಾಲೂಕಿನ ಹಳ್ಳಿಗಳು
ಅರಳಗೋಡು PHC ವ್ಯಾಪ್ತಿಯಲ್ಲಿ | 10 ಪ್ರಕರಣಗಳು
ಗ್ರಾಮಗಳು | ಮಂಡವಳ್ಳಿ, ಮುಪ್ಪಾನೆ
ಕಾರ್ಗಲ್ PHC ವ್ಯಾಪ್ತಿಯಲ್ಲಿ | 6 ಪ್ರಕರಣಗಳು
ಗ್ರಾಮಗಳು | ಹೆನ್ನಿ, ಮರಾಟಿಕೇರಿ, ಬಾನುಕುಳಿ, ಕಾನೂರು
ತುಮರಿ PHC ವ್ಯಾಪ್ತಿಯಲ್ಲಿ | 8 ಪ್ರಕರಣಗಳು
ಗ್ರಾಮಗಳು | ಮಾರಳಗೋಡು, ಸೀಗೆಮಕ್ಕಿ, ಕರೂರು
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]