ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಜುಲೈ 2020
ಶಿವಮೊಗ್ಗ ಜಿಲ್ಲೆಯಾದ್ಯಂತ ಇವತ್ತು ಮಧ್ಯಾಹ್ನದಿಂದ ಹೊಸ ಲಾಕ್ ಡೌನ್ ನಿಯಮ ಜಾರಿಗೆ ಬರಲಿದೆ. ಮುಂದಿನ ಆದೇಶ ಬರುವವರೆಗೆ ಇನ್ಮುಂದೆ ಪ್ರತಿದಿನ ಬೆಳಗ್ಗೆ 5 ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ವ್ಯಾಪಾರ, ವಹಿವಾಟಿಗೆ ಅವಕಾಶ ನೀಡಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಈ ಮಧ್ಯೆ ಕೆಲವು ಅಗತ್ಯ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕಾರ್ಮಿಕರು ಕೈಗಾರಿಕೆಗಳಿಗೆ ತೆರಳಬಹುದು. ಕೃಷಿ ಚಟುವಟಿಕೆ ಮೇಲೆ ಯಾವುದೇ ನಿರ್ಬಂಧ ಇರುವುದಿಲ್ಲ.
ಏನಿರುತ್ತೆ? ಏನಿರಲ್ಲ?
ಹಾಲು | ಅಗತ್ಯ ಸೇವೆ ವ್ಯಾಪ್ತಿಗೆ ಬರಲಿದೆ. ಹಾಗಾಗಿ ಎಂದಿನಂತೆ ಬೆಳಗ್ಗೆಯಿಂದ ರಾತ್ರಿವರೆಗೆ ಹಾಲು ಲಭ್ಯ
ವೈದ್ಯಕೀಯ ಸೇವೆ | ಆಸ್ಪತ್ರೆಗಳು ಬಂದ್ ಆಗುವುದಿಲ್ಲ. 24 ಗಂಟೆಯೂ ಸೇವೆ ಲಭ್ಯ
ಎಟಿಎಂ | ಅಗತ್ಯ ಸೇವೆ ವ್ಯಾಪ್ತಿಗೆ ಒಳಪಡಲಿದ್ದು, 24 ಗಂಟೆಯೂ ಸೇವೆ ಲಭ್ಯ
ಕೈಗಾರಿಕೆಗಳು | ಎರಡು ಪಾಳಿಯಲ್ಲಿ ಕೆಲಸ ನಡೆಯಲಿದೆ. ಪಾಸ್ ಇರುವ ಕಾರ್ಮಿಕರ ಓಡಾಟಕ್ಕೆ ಅವಕಾಶವಿದೆ. ಪಾಸ್ ಒದಗಿಸುವ ಜವಾಬ್ದಾರಿ ಕೈಗಾರಿಕೆಯ ಆಡಳಿತ ಮಂಡಳಿಗೆ ಬಿಟ್ಟಿದ್ದು.
ಬ್ಯಾಂಕು, ಸರ್ಕಾರಿ ನೌಕರರಿಗೆ ಪಾಸ್
ಬ್ಯಾಂಕುಗಳು ಕೂಡ ಮಧ್ಯಾಹ್ನ 2 ಗಂಟೆಗೆ ಮುಚ್ಚಲಿದೆ. ಸಿಬ್ಬಂದಿಗಳು ಪಾಸ್ ಪಡೆದುಕೊಳ್ಳಬೇಕು. ಸರ್ಕಾರಿ ಕಚೇರಿ ಸಿಬ್ಬಂದಿಗಳು ಕೂಡ ಪಾಸ್ ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಅನಿರ್ದಿಷ್ಠಾವಧಿವರೆಗೆ ಭಾಗಶಃ ಲಾಕ್ ಡವನ್ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಯಲ್ಲಿರಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಮದ್ಯ ಲಭ್ಯ | ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆವರೆಗೆ ವೈನ್ ಶಾಪ್‍ಗಳು ತೆರೆಯಲಿವೆ.
ಮೀನು, ಮಾಂಸ, ಮೊಟ್ಟೆ | ಮಾರಾಟಕ್ಕೆ ಅನುಮತಿ ಇದೆ. ಆದರೆ ಶುಚಿತ್ವ ಮಾರ್ಗದರ್ಶಿಯನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.
ಆಟೋಗಳು | ಮಧ್ಯಾಹ್ನ 2 ಗಂಟೆ ಬಳಿಕ ಆಟೋ ಸೇವೆ ಇರುವುದಿಲ್ಲ
ಖಾಸಗಿ ಬಸ್ | ಲಾಕ್ ಡೌನ್‍ಗೆ ಖಾಸಗಿ ಬಸ್ ಮಾಲೀಕರ ಸಂಘದ ಬೆಂಬಲವಿದ್ದು, ಮಧ್ಯಾಹ್ನ 2 ಗಂಟೆ ಬಳಿಕ ಬಸ್ ಸೇವೆ ಬಂದ್
ಲಾರಿಗಳು ಸ್ಟಾಪ್ | ಲಾರಿ ಸಂಚಾರವು ಬಂದ್ ಆಗಲಿದೆ. ಲಾರಿ ಮಾಲೀಕರ ಸಂಘವು ಲಾಕ್ ಡೌನ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.