ಶಿವಮೊಗ್ಗ ಲೈವ್.ಕಾಂ | SHIMOGA NEWS | 21 ಆಗಸ್ಟ್ 2020
ಕರೋನ ಆತಂಕ, ನಿರ್ಬಂಧಗಳ ನಡುವೆಯು ಶಿವಮೊಗ್ಗದಲ್ಲಿ ಗಣಪತಿ ಹಬ್ಬ ಆಚರಣೆಗೆ ಸಿದ್ಧತೆ ಬಿರುಸಾಗಿದೆ. ಆದರೆ ಗಣಪತಿ ಮೂರ್ತಿ ಮಾರಾಟ ಸಂಪೂರ್ಣ ತಗ್ಗಿದೆ. ಇದು ತಯಾರಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ದೊಡ್ಡ ಮೂರ್ತಿಗಳು ಕಡಿಮೆ
ಪ್ರತಿ ಭಾರಿಯಂತೆ ಶಿವಮೊಗ್ಗದಲ್ಲಿ ಸೈನ್ಸ್ ಮೈದಾನದಲ್ಲಿ ಗಣಪತಿ ಮಾರಾಟಕ್ಕೆ ವ್ಯವಸ್ಥೆಯಾಗಿದೆ. ಈ ಬಾರಿ ವ್ಯಾಪಾರಿಗಳ ಸಂಖ್ಯೆ ಬಹಳ ಕಡಿಮೆ ಇದೆ. ಶಿವಮೊಗ್ಗ, ಹಾವೇರಿ, ದಾವಣಗೆರೆ ಜಿಲ್ಲೆಯ ಕೆಲವೆ ಕೆಲವು ವ್ಯಾಪಾರಿಗಳು ಮಾತ್ರ ಮೂರ್ತಿ ಮಾರಾಟಕ್ಕೆ ಬಂದಿದ್ದಾರೆ. ಈ ಬಾರಿ ದೊಡ್ಡ ದೊಡ್ಡ ಮೂರ್ತಿಗಳ ಸಂಖ್ಯೆ ಕಡಿಮೆ ಇದೆ. ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಗೆ ನಿಬಂಧನೆ ವಿಧಿಸಿರುವುದರಿಂದ ದೊಡ್ಡ ಗಣಪತಿ ಮೂರ್ತಿಗಳು ವಿರಳವಾಗಿವೆ.
ವ್ಯಾಪಾರ ಫುಲ್ ಡಲ್
ಬೆರಳೆಣಿಕೆಯಷ್ಟು ವ್ಯಾಪಾರಿಗಳಿದ್ದರೂ ಶಿವಮೊಗ್ಗದಲ್ಲಿ ಗಣಪತಿ ಮೂರ್ತಿ ವ್ಯಾಪಾರ ಸಂಪೂರ್ಣ ಡಲ್ ಇದೆ ಅನ್ನುತ್ತಾರೆ ವ್ಯಾಪಾರಿಗಳು. ಅರ್ಧ ದರಕ್ಕಿಂತಲೂ ಕಡಿಮೆ ರೇಟಿಗೆ ಮೂರ್ತಿಗಳನ್ನು ಕೇಳುತ್ತಿದ್ದಾರೆ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.
ಸೌಲಭ್ಯವಿಲ್ಲ, ಮೈದಾನ ಕೆಸರುಮಯ
ಸೈನ್ಸ್ ಮೈದಾದನಲ್ಲಿ ವ್ಯಾಪಾರಿಗಳಿಗೆ ಯಾವುದೆ ಸೌಲಭ್ಯ ಒದಗಿಸಿಲ್ಲ. ಮಾರಾಟಗಾರರು ಟಾರ್ಪಲ್ ಹಾಸಿಕೊಂಡು ಮಾರಾಟ ಮಾಡುತ್ತಿದ್ದಾರೆ. ಮಳೆಯಿಂದಾಗಿ ಮೈದಾನ ಕೆಸರುಮಯವಾಗಿದೆ. ಇದರಿಂದ ಗಣಪತಿ ಮೂರ್ತಿಗಳು ಹಾಳಾಗುತ್ತಿವೆ ಎಂದು ಮೂರ್ತಿ ತಯಾರಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಹೊರಗೆ ಹೇಗಿದೆ ವ್ಯಾಪಾರ?
ಸೈನ್ಸ್ ಮೈದಾನ ಹೊರತು ನಗರದ ವಿವಿಧೆಡೆ ಗಣಪತಿ ಮೂರ್ತಿ ಮಾರಾಟ ಮಾಡಲಾಗುತ್ತಿದೆ. ಆದರೆ ಇಲ್ಲಿಯೂ ಮಾರಾಟ ಡಲ್ ಇದೆ. ಗ್ರಾಹಕರು ಸಂಖ್ಯೆ ಕಡಿಮೆಯಾಗಿದೆ. ಹಬ್ಬದ ದಿನವಾದರೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ ಅನ್ನುತ್ತಾರೆ ವ್ಯಾಪಾರಿಗಳು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]