ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಸೆಪ್ಟಂಬರ್ 2020
ಸೊರಬ ಮತ್ತು ಹೊಸನಗರ ತಾಲೂಕು ರಿಪ್ಪನ್ಪೇಟೆಯಲ್ಲಿ ಪೊಲೀಸರು ದಾಳಿ ನಡೆಸಿ ಜಮೀನಿನಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸೊರಬ ರಿಪೋರ್ಟ್
ಹೆಚ್ಚೆ ಗ್ರಾಮದಲ್ಲಿ ಜಯಪ್ಪ ಎಂಬಾತ ಶುಂಠಿ ಬೆಳೆಯ ನಡುವೆ ಗಾಂಜಾ ಬೆಳೆದಿರುವ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ದಾಳಿ ನಡೆಸಿ 20 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಜಯಪ್ಪ ಪರಾರಿಯಾಗಿದ್ದು, ಈತನ ಪತ್ತೆ ಕಾರ್ಯ ನಡೆಯುತ್ತಿದೆ.
ಎಎಸ್ಪಿ ಶ್ರೀನಿವಾಸಲು, ಸಿಪಿಐ ಮರುಳಸಿದ್ದಪ್ಪ, ಪಿಎಸ್ಐ ಟಿ.ಬಿ.ಪ್ರಶಾಂತ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಎಎಸ್ಐ ಜಯಪ್ಪ, ಹೆಡ್ ಕಾನ್ಸ್ಟೇಬಲ್ ನೀಲೇಂದ್ರ ನಾಯ್ಕ್, ಸಿಬ್ಬಂದಿಗಳಾದ ದಿನೇಶ್, ಸಂದೀಪ್ ಕುಮಾರ್, ಸಲ್ಮಾನ್ ಖಾನ್ ಹಾಜಿ, ಸಿದ್ದನಗೌಡ ಬಣಕಾರ್, ಕೆ.ಎಸ್.ಶಶಿಧರ್, ಸುಧಾಕರ್ ದಾಳಿಯಲ್ಲಿ ಭಾಗವಹಿಸಿದ್ದರು.
ರಿಪ್ಪನ್ಪೇಟೆ ರಿಪೋರ್ಟ್
ರಿಪ್ಪನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ದೊಂಬರಹಳ್ಳ ಬೆಳ್ಳೂರು ಗ್ರಾಮದ ಲೋಕೇಶ್ ಎಂಬಾತ ತನ್ನ ಜಮೀನಿನಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 55 ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಲೋಕೇಶ್ (47) ಎಂಬಾತನನ್ನು ಬಂಧಿಸಲಾಗಿದೆ.
ತೀರ್ಥಹಳ್ಳಿ ಡಿವೈಎಸ್ಪಿ ಡಾ.ಸಂತೋಷ್, ಹೊಸನಗರ ಸಿಪಿಐ ಮಧುಸೂದನ್, ರಿಪ್ಪನ್ಪೇಟೆ ಪಿಎಸ್ಐ ಪಾರ್ವತಿ ಬಾಯಿ ನೇತೃತ್ವದಲ್ಲಿ ಪೊಲೀಸರು ಸಿಬ್ಬಂದಿಗಳು ದಾಳಿ ನಡೆಸಿದ್ದರು.
ಮಾಹಿತಿ ಗೌಪ್ಯವಾಗಿ ಇಡುತ್ತೇವೆ
ಜಿಲ್ಲೆಯ ಯಾವುದೇ ಭಾಗದಲ್ಲಿ ಗಾಂಜಾ ಬೆಳೆದಿರುವುದು, ಮಾರಾಟ ಮಾಡುವುದು ಕಂಡು ಬಂದಲ್ಲಿ ಮಾಹಿತಿ ನೀಡಬಹುದು ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇರಿಸಲಾಗುತ್ತದೆ ಎಂದು ಪೊಲೀಸ್ ವರಿಷ್ಟಾಧಿಕಾರಿ ತಿಳಿಸಿದ್ದು, ತಮ್ಮ ಮೊಬೈಲ್ ನಂಬರ್ 9480803301ಗೆ ಗಾಂಜಾ ಕುರಿತು ಮಾಹಿತಿ ನೀಡಿಬಹುದು ಎಂದು ರಕ್ಷಣಾಧಿಕಾರಿ ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]