ಶಿವಮೊಗ್ಗ ಲೈವ್.ಕಾಂ | SHANKARAGHATTA NEWS | 22 ಅಕ್ಟೋಬರ್ 2020
ಉನ್ನತ ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆ ಕೈಗೊಳ್ಳುವ ಸಂಸ್ಥೆಗಳ ಪೈಕಿ ಕುವೆಂಪು ವಿಶ್ವವಿದ್ಯಾಲಯಕ್ಕೆ ದೇಶದಲ್ಲಿ 39ನೇ ಸ್ಥಾನ ಲಭಿಸಿದೆ. ರಾಜದಲ್ಲಿ ಕುವೆಂಪು ವಿವಿಗೆ ಮೂರನೆ ಸ್ಥಾನ ಲಭಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜಾಗತಿಕ ರಾಂಕಿಂಗ್‍ನಲ್ಲಿ 774ನೇ ಸ್ಥಾನ
ಪ್ರತಿಷ್ಠಿತ ಸೈಮ್ಯಾಗೋ ಸಂಸ್ಥೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಜಾಗತಿಕ ರಾಂಕಿಂಗ್‍ನಲ್ಲಿ ಕುವೆಂಪು ವಿವಿ 774ನೇ ಸ್ಥಾನ. ಏಷ್ಯಾ ವಲಯದ 2,093 ಸಂಸ್ಥೆಗಳ ಪಟ್ಟಿಯಲ್ಲಿ 289ನೇ ಸ್ಥಾನ ಗಳಿಸಿದೆ. ಭಾರತದಲ್ಲಿ ಕುವೆಂಪು ವಿವಿಗೆ 39ನೇ ಸ್ಥಾನ ಗಳಿಸಿದೆ. ವರ್ಷದಿಂದ ವರ್ಷಕ್ಕೆ ವಿವಿಯ ಗುಣಮಟ್ಟ ಉತ್ಕೃಷ್ಟವಾಗುತ್ತಿದೆ. 2018ರಲ್ಲಿ ಕುವೆಂಪು ವಿವಿ 45ನೇ ಸ್ಥಾನ, 2019ರಲ್ಲಿ 43ನೇ ಸ್ಥಾನದಲ್ಲಿತ್ತು.
ರಾಂಕಿಂಗ್‍ನ ಮಾನದಂಡಗಳೇನು?
ಸೈಮ್ಯಾಗೋ ರಾಂಕಿಂಗ್‍ಗೆ ಹಲವು ಮಾನದಂಡಗಳಿವೆ. ಕುವೆಂಪು ವಿಶ್ವವಿದ್ಯಾಲಯವು ಇವುಗಳನ್ನು ಪಾಲನೆ ಮಾಡಿ, ಗುಣಮಟ್ಟದ ಸಂಶೋಧನೆ ನಡೆಸುತ್ತಿದೆ. ಸಂಶೋಧನಾ ಲೇಖನಾ ಪ್ರಕಟಣೆ, ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳೊಂದಿಗೆ ಸಹಭಾಗಿತ್ವ, ಸಂಶೋಧನಾ ಮುಂದಾಳತ್ವ, ವಿವಿಧ ಸಂಶೋಧನಾ ಯೋಜನೆಗಳ ಕೈಗೊಳ್ಳುವುದು ಪ್ರಮುಖವಾದವು. ಆವಿಷ್ಕಾರಗಳ ವಿಭಾಗದಲ್ಲಿ ಸಂಶೋಧನಾಧಾರಿತ ಜ್ಞಾನಸೃಷ್ಟಿ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಪೇಟೆಂಟ್ ಹೊಂದುವಿಕೆ. ಸಾಮಾಜಿಕ ಪ್ರಭಾವ ವಿಭಾಗದಲ್ಲಿ ಸಂಶೋಧನಾ ಜ್ಞಾನ ಮತ್ತು ಚಟುವಟಿಕೆಗಳ ಸಾಮಾಜಿಕ ಬಳಕೆ, ಪ್ರಭಾವದ ಆಧಾರದ ಮೇಲೆ ವಿವಿಗೆ ರಾಂಕಿಂಗ್ ನಿರ್ಧರಿಸಲಾಗಿದೆ.
ಟಾಪ್ 3 ಸ್ಥಾನದಲ್ಲಿ ಕುವೆಂಪು ವಿವಿ
ಈ ರಾಂಕಿಂಗ್ ಪಟ್ಟಿಯಲ್ಲಿ ಕುವೆಂಪು ವಿಶ್ವವಿದ್ಯಾಲವು ರಾಜ್ಯಮಟ್ಟದಲ್ಲಿ ಟಾಪ್ 3 ಸ್ಥಾನದಲ್ಲಿದೆ. ಮಣಿಪಾಲ ವಿಶ್ವವಿದ್ಯಾಲಯು 8ನೇ ಸ್ಥಾನ, ಬೆಂಗಳೂರು ವಿವಿ 32ನೇ ಸ್ಥಾನದಲ್ಲಿದೆ. ಕುವೆಂಪು ವಿವಿ 32ನೇ ಸ್ಥಾನದಲ್ಲಿದ್ದು ರಾಜ್ಯದಲ್ಲಿ ಟಾಪ್ ಮೂರನೇ ಸ್ಥಾನ ಭದ್ರಪಡಿಸಿಕೊಂಡಿದೆ. ಮೈಸೂರು ವಿವಿಯು 48ನೇ ಸ್ಥಾನ ಪಡೆದಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]