ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ |SHIMOGA NEWS | 14 NOVEMBER 2020
ತೀವ್ರ ಕುತೂಹಲ ಕೆರಳಿಸಿದ್ದ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ, ಪ್ರಭಾರ ಅಧ್ಯಕ್ಷ ಚನ್ನವೀರಪ್ಪ ಗೆಲುವು ಸಾಧಿಸಿದ್ದಾರೆ. ಚುನಾವಣೆ ನಡೆದರೂ ಚನ್ನವೀರಪ್ಪ ಅವರು ಅವಿರೋಧ ಆಯ್ಕೆಯಾಗಿದ್ದಾರೆ.
ಇಬ್ಬರು ಅಭ್ಯರ್ಥಿಗಳು, 14 ಮತ
ಅಧ್ಯಕ್ಷ ಸ್ಥಾನಕ್ಕೆ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಚುನಾವಣೆ ನಡೆಯಿತು. ಕಣದಲ್ಲಿದ್ದ ಮೂವರು ಅಭ್ಯರ್ಥಿಗಳ ಪೈಕಿ ನಿರ್ದೇಶಕ ಷಡಾಕ್ಷರಿ ಅವರು ತಮ್ಮ ನಾಮಪತ್ರ ಹಿಂಪಡೆದರು. ಆದರೆ ಚನ್ನವೀರಪ್ಪ ಮತ್ತು ಯೋಗೇಶ್ ಅವರು ಕಣದಲ್ಲಿದ್ದರು. ಮತದಾನದಲ್ಲಿ ಚನ್ನವೀರಪ್ಪ ಅವರಿಗೆ 14 ಮತಗಳು ಚಲಾವಣೆಯಾಗಿತ್ತು. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
‘ನಮ್ಮ ಉದ್ದೇಶ ಅದೇ ಆಗಿತ್ತು’
ಚುನಾವಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ಚನ್ನವೀರಪ್ಪ, ಅವಿರೋಧ ಆಯ್ಕೆ ನಮ್ಮ ಉದ್ದೇಶವಾಗಿತ್ತು. ಆದರೆ ತಾಂತ್ರಿಕ ಕಾರಣದಿಂದಾಗಿ ಚುನಾವಣೆ ನಡೆಸಬೇಕಾಯಿತು. ಕೊನೆಗೆ 14 ಮತಗಳು ತಮಗೆ ಬಂದಿವೆ. ಈ ಮೂಲಕ ಅವಿರೋಧ ಆಯ್ಕೆಯೆ ನಡೆದಂತೆ ಆಗಿದೆ ಎಂದರು.
ತನಿಖೆ, ಸಾಲ ವಸೂಲಿ
ಶಿವಮೊಗ್ಗ ಡಿಸಿಸಿ ಬ್ಯಾಂಕ್‍ನಲ್ಲಿ ನಡೆದಿರುವ ಹಗರಣಗಳು, ವಸೂಲಿ ಆಗದ ಸಾಲದ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ನೂತನ ಅಧ್ಯಕ್ಷ ಚನ್ನವೀರಪ್ಪ ತಿಳಿಸಿದ್ದಾರೆ. ರೈತರ ಬ್ಯಾಂಕ್‍ನಲ್ಲಿ ರೈತರಿಗೆ ಅನುಕೂಲ ಅಗುವಂತೆ ಸಾಲ ಸೌಲಭ್ಯ ಒದಗಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಯಡಿಯೂರಪ್ಪ ನಿಕಟವರ್ತಿ
ನೂತನ ಅಧ್ಯಕ್ಷ ಚನ್ನವೀರಪ್ಪ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿಕಟವರ್ತಿ. ಡಿಸಿಸಿ ಬ್ಯಾಂಕ್‍ಗೆ ಬಿಜೆಪಿ ಬೆಂಬಲಿತ ನಿರ್ದೇಶಕರ ಪೈಕಿ ಇವರು ಒಬ್ಬರು. ಇವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಬ್ಯಾಂಕ್‍ನ ಹಿತದೃಷ್ಟಿಯಿಂದ ಒಳಿತು ಎಂಬ ಕಾರಣಕ್ಕೆ ಅವಿರೋಧ ಆಯ್ಕೆಯ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ
ಈವರೆಗೂ ಚನ್ನವೀರಪ್ಪ ಅವರು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿದ್ದರು. ಆರ್.ಎಂ.ಮಂಜುನಾಥಗೌಡ ಅವರ ಸದಸ್ಯತ್ವ ವಜಾಗೊಂಡ ಹಿನ್ನೆಲೆ, ಅಧ್ಯಕ್ಷ ಸ್ಥಾನ ತೆರವಾಯಿತು. ಹಾಗಾಗಿ ಚನ್ನವೀರಪ್ಪ ಅವರು ಪ್ರಭಾರಿ ಅಧ್ಯಕ್ಷರಾಗಿದ್ದರು. ಈಗ ಚನ್ನವೀರಪ್ಪ ಅವರು ಪೂರ್ಣಾವಧಿ ಅಧ್ಯಕ್ಷರಾಗಿದ್ದಾರೆ. ಹಾಗಾಗಿ ಉಪಾಧ್ಯಕ್ಷ ಸ್ಥಾನ ತೆರವಾಗಿದೆ. ಸದ್ಯದಲ್ಲೇ ಈ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ನೂತನ ಅಧ್ಯಕ್ಷರು ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422