ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ
‘ಅಂಬೆಗಾಲು ಇಡುತ್ತಿದ್ದ ನಮಗೆ ನಡೆಯಲು ಕಲಿಸಿ, ಬೆಳೆಸಿದ ನಿಮಗೆ ಗೌರವ ನಮನ, ಹೃದಯಪೂರ್ವಕ ಧನ್ಯವಾದ..’
ಶಿವಮೊಗ್ಗ ಜಿಲ್ಲೆಯ ಮೊಟ್ಟಮೊದಲ ಪೂರ್ಣ ಪ್ರಮಾಣದ ನ್ಯೂಸ್ ವೆಬ್‍ಸೈಟ್ ಶಿವಮೊಗ್ಗ ಲೈವ್.ಕಾಂ. ಪತ್ರಿಕೆ, ಟಿವಿಯಷ್ಟೆ ಅಲ್ಲ, ನಮ್ಮೂರ ನ್ಯೂಸ್‌ಗಳನ್ನು ಡಿಜಿಟಲ್ ರೂಪದಲ್ಲಿ, ದೊಡ್ಡ ಸಂಖ್ಯೆಯ ಓದುಗರಿಗೆ ತಲುಪಿಸಬಹುದು ಅನ್ನುವುದಕ್ಕೆ ಸಾಕ್ಷಿ ಶಿವಮೊಗ್ಗ ಲೈವ್.ಕಾಂ. ಇವತ್ತು ನಮ್ಮೂರ ಮೊದಲ ನ್ಯೂಸ್ ವೆಬ್‌ಸೈಟ್‌ಗೆ ನಾಲ್ಕುನೆ ವಾರ್ಷಿಕೋತ್ಸವ.
ನಿಮಗೆ ನಮ್ಮ ಧನ್ಯವಾದಗಳು
ಓದುಗರು, ವೀಕ್ಷಕರಿಲ್ಲದೆ ಮಾಧ್ಯಮ ಉಳಿಯೋದು, ಬೆಳೆಯೋದು ಕಷ್ಟ. ಶಿವಮೊಗ್ಗ ಲೈವ್.ಕಾಂಗೆ ಓದುಗರ ಸ್ಪಂದನೆ ಉತ್ತಮವಾಗಿದೆ. ನಿಮ್ಮ ಸಹಕಾರವಿಲ್ಲದೆ ಈವರೆಗೂ ಶಿವಮೊಗ್ಗ ಲೈವ್.ಕಾಂ ಬೆಳೆಯೋಕೆ ಸಾಧ್ಯವೆ ಆಗುತ್ತಿರಲಿಲ್ಲ. ಇದೆ ಕಾರಣಕ್ಕೆ ಮೊದಲಿಗೆ ನಿಮಗೆ ನಮ್ಮ ಧನ್ಯವಾದ ಅರ್ಪಿಸುತ್ತಿದ್ದೇವೆ.
ನಾಲ್ಕು ವರ್ಷ, ನಾಲ್ಕು ಬದಲಾವಣೆ
ಬದಲಾವಣೆ 1 : ಲೋಗೋ, ಲೇಔಟ್, ಫಾಂಟ್
ಓದುಗರ ಇಚ್ಛೆಯಂತೆ ಶಿವಮೊಗ್ಗ ಲೈವ್.ಕಾಂ ವೆಬ್‌ಸೈಟ್‌ನ ಲೋಗೋ, ಲೇಔಟ್ ಮತ್ತು ಅಕ್ಷರ ವಿನ್ಯಾಸ ಬದಲಾಗಿದೆ. ನೀಲಿ, ಕೆಂಪು ಬಣ್ಣದ ಶಿವಮೊಗ್ಗ ಮ್ಯಾಪನ್ನು ಈವರೆಗೂ ಲೋಗೊವಾಗಿ ಬಳಸುತ್ತಿದ್ದೆವು. ಆದರೆ ಡೈನಾಮಿಕ್ ಲೋಗೊ ಬೇಕು ಅಂತಾ ಹಲವು ಓದುಗರು ಅಭಿಪ್ರಾಯ ತಿಳಿಸಿದ್ದರು. ಹಾಗಾಗಿ ಶಿವಮೊಗ್ಗ ಲೈವ್.ಕಾಂನ ಲೋಗೊ ಬದಲಾಗಿದೆ. ಇದು ನಮ್ಮ ಹೊಸ ಲೋಗೊ. ಶಿವಮೊಗ್ಗ ಮ್ಯಾಪ್, ಕ್ಯಾಮರಾದ ಮಾದರಿಯನ್ನು ಇರಿಸಿದ ಕೆಂಪು, ನೀಲಿ ಮಿಶ್ರಿತ ಹೊಸ ಲೋಗೊ ಇದು.
ವೆಬ್‌ಸೈಟ್‌ನ ಲೇಔಟ್‌ನಲ್ಲಿ ಹಲವು ಬದಲಾವಣೆಯಾಗಿದೆ. ಮಾಸ್ಟ್ ಹೆಡ್ ಜಾಗ ಸಂಪೂರ್ಣ ನೀಲಿ ಬಣ್ಣದಲ್ಲಿದೆ. ಅದರ ಕೆಳಗೆ ಮೆನು, ಈವರೆಗೂ ಅಪ್ ಲೋಡ್ ಆಗಿರುವ ಹತ್ತು ನ್ಯೂಸ್‌ಗಳ ಹೆಡ್‌ಲೈನ್‌ಗಳು ಸ್ಲೈಡ್ ಆಗುತ್ತಿರಲಿದೆ. ಇದು ಓದುಗರಿಗೆ ಹೆಚ್ಚು ಅನುಕೂಲ ಆಗಲಿದೆ.
ಅಕ್ಷರ ವಿನ್ಯಾಸವನ್ನು ಬದಲಾಯಿಸಿದ್ದೇವೆ. ಇದೆ ಮೊದಲ ಬಾರಿ ಸ್ಥಳೀಯ ಕನ್ನಡ ನ್ಯೂಸ್ ವೆಬ್‌ಸೈಟ್ ಒಂದರಲ್ಲಿ ವಿಭಿನ್ನ, ಆಕರ್ಷಕವಾದ HTML ಫಾಂಟ್ ಬಳಕೆಯಾಗುತ್ತಿದೆ. ಸುದ್ದಿಗಳು ಆಕರ್ಷಕವಾಗಿ, ಸ್ಪಷ್ಟವಾಗಿ ಓದುಗರಿಗೆ ತಲುಪಲು ಇದು ಅನುಕೂಲ.
ಬದಲಾವಣೆ 2 : ಸುದ್ದಿಯ ಸ್ವರೂಪ
ಸುದ್ದಿ ಅಂದರೆ ಪದಗಳ ಸಂತೆಯಲ್ಲ. ಮೊದಲ ಅಕ್ಷರದಿಂದ ಕೊನೆಯ ಫುಲ್ ಸ್ಟಾಪ್ ತನಕ ಓದುಗರು ಪೂರ್ಣವಾಗಿ ಓದುವಂತಿರಬೇಕು. ಪ್ರತಿ ವಿಷಯವು ಮನ ಮುಟ್ಟುವಂತಿರಬೇಕು. ಆ ಕಾರಣಕ್ಕಾಗಿ ಶಿವಮೊಗ್ಗ ಲೈವ್.ಕಾಂ ಸುದ್ದಿ ಸ್ವರೂಪ ಬದಲಾಗಿದೆ. ಸಾಮಾನ್ಯ ಸುದ್ದಿಯಂತೆ ಇರದೆ, ಪಾಯಿಂಟರ್‍ಗಳು, ಗ್ರಾಫಿಕ್ಸ್‍ಗಳ ಸಹಾಯದೊಂದಿಗೆ ಸುದ್ದಿ ತಲುಪಿಸಲಾಗುತ್ತದೆ. ಈ ಕೆಳಗಿರುವ ಲಿಂಕ್ ಕ್ಲಿಕ್ ಮಾಡಿದರೆ ಹೊಸ ಮಾದರಿ ಸುದ್ದಿಯ ಸ್ಪಷ್ಟತೆ ನಿಮಗೆ ಗೊತ್ತಾಗುತ್ತದೆ.
https://shivamoggalive.com/2020/11/15/corona-cases-dropped-to-2-percent/
https://shivamoggalive.com/2020/11/14/police-different-attempt-to-control-theft/
ಬದಲಾವಣೆ 3 : ಸುದ್ದಿಯಷ್ಟೆ ಅಲ್ಲ
ಇನ್ಮುಂದೆ ನಾವು ಸುದ್ದಿಗಷ್ಟೆ ಸೀಮಿತವಾಗುವುದಿಲ್ಲ. ಹೊಸ ವಿಚಾರಗಳು, ನಮ್ಮೂರ ಬಗ್ಗೆ ನಾವು ಹೆಮ್ಮೆ ಪಡುವ ಸಂತಿಗಳು, ನಮ್ಮೂರಿನವರ ಕುರಿತ ಮಾಹಿತಿ, ನಮ್ಮ ಸುತ್ತಮುತ್ತಲಿನ ವಿಭಿನ್ನ ಸಂಗತಿ ತಿಳಿದುಕೊಳ್ಳುವ ಪ್ರಯತ್ನ ಆರಂಭಿಸಲಾಗುತ್ತಿದೆ. ನಮ್ಮೂರು ಶಿವಮೊಗ್ಗ, ನಂಬರ್‍ಗಳಲ್ಲಿ ನಮ್ಮೂರು, ಎಜುಕೇಷನ್ ನ್ಯೂಸ್, ಬಿಸ್ನೆಸ್ ನ್ಯೂಸ್, ಕೃಷಿ ಸುದ್ದಿ, ದೇಗುಲ ದರ್ಶನ, ಫುಟ್ ಪಾತ್ ಬದುಕು.. ಹೀಗೆ ಹಲವು ವಿಭಿನ್ನ ಕಾಲಂಗಳು ಆರಂಭವಾಗುತ್ತಿವೆ.
ಬದಲಾವಣೆ 4 : ನೀವೆ ವರದಿಗಾರರಾಗಿ
ಮಹತ್ವಾಕಾಂಕ್ಷಿ ಯೋಜನೆ ಇದು. ಪ್ರತಿಯೊಬ್ಬರು ತಮ್ಮೂರು, ತಮ್ಮ ಸುತ್ತಮುತ್ತಲ ಸಂಗತಿಗಳ ವರದಿ ಮಾಡುವಂತಾಗಬೇಕು. ಅಂದರೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸಿಟಿಜನ್ ಜರ್ನಲಿಸಂ ಆರಂಭಿಸಬೇಕು ಅನ್ನವುದು ನಮ್ಮ ಉದ್ದೇಶ. ಆ ಕಾರಣಕ್ಕೆ ಸಿದ್ಧತೆಗಳು ಆರಂಭವಾಗಿದೆ. ಇನ್ಮುಂದೆ ನೀವೆ ನಿಮ್ಮೂರಿನ, ನಿಮ್ಮ ಸುತ್ತಮುತ್ತಲ ಸಂಗತಿಗಳ ಸುದ್ದಿ ಮಾಡಿ ಕಳುಹಿಸಬಹುದು.
ನಾಲ್ಕು ವರ್ಷದಲ್ಲಿ ಒಂದೂವರೆ ಲಕ್ಷ ಓದುಗರು ನಮ್ಮದ ಜೊತೆಯಾಗಿದ್ದೀರ. ಓದುಗರ ವಿಶ್ವಾಸ, ಓದುಗರ ಜೊತೆಗೆ ನೇರಾನೇರ ಸಂಪರ್ಕದಲ್ಲಿರುವ ಏಕೈಕ ಮಾಧ್ಯಮ ಅನ್ನುವುದು ನಮ್ಮ ಹೆಮ್ಮೆ, ಹೆಗ್ಗಳಿಕೆ. ಶಿವಮೊಗ್ಗದ ಸುದ್ದಿಗಳ ವಿಚಾರದಲ್ಲಿ ಇನ್ನಷ್ಟು ಪ್ರಯೋಗ ಮಾಡುವ ಉದ್ದೇಶವಿದೆ. ನಿಮ್ಮ ಸಲಹೆಗಳು ಅಮೂಲ್ಯ ಮತ್ತು ಅಗತ್ಯ. ತಪ್ಪಾದಾಗ ತಿದ್ದುವ ಅಧಿಕಾರವು ನಿಮಗಿದೆ.
ನಾಲ್ಕನೆ ವರ್ಷದ ಶುಭಾಶಯಗಳು
ಶಿವಮೊಗ್ಗ ಲೈವ್ ಟೀಂ
ನಮ್ಮ ವಿಳಾಸ
ಶಿವಮೊಗ್ಗ ಲೈವ್.ಕಾಂ, ಶಾಂತ ದುರ್ಗ ನಿಲಯ, 1ನೇ ಅಡ್ಡರಸ್ತೆ, ಅಚ್ಚುತರಾವ್ ಬಡಾವಣೆ, ಸಾಗರ್ ನರ್ಸಿಂಗ್ ಹೋಂ ರಸ್ತೆ, ಶಿವಮೊಗ್ಗ
ನಮ್ಮ ಸಂಪರ್ಕ ಸಂಖ್ಯೆ
ಮೊಬೈಲ್ 9964634494, ವಾಟ್ಸಪ್ ಮಾಡಲು 7411700200
ಈ ಮೇಲ್ ವಿಳಾಸ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422