ಶಿವಮೊಗ್ಗ ಲೈವ್.ಕಾಂ | SHIMOGA NEWS | 4 DECEMBER 2020
ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ರೈಲು ಸಂಚಾರ ನಿಧಾನಕ್ಕೆ ಪುನಾರಂಭವಾಗುತ್ತಿದೆ. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ನೈಋತ್ಯ ರೈಲ್ವೆ ಇಲಾಖೆ, ಶಿವಮೊಗ್ಗದ ತಾಳಗುಪ್ಪದಿಂದ ಮೈಸೂರು, ಬೆಂಗಳೂರಿಗೆ ಎರಡು ರೈಲು ಸೇವೆಯನ್ನು ಪುನಾರಂಭ ಮಾಡುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾವೆಲ್ಲ ರೈಲುಗಳು ಪುನಾರಂಭವಾಗುತ್ತೆ?
- ರೈಲು ಸಂಖ್ಯೆ 06227 – ಮೈಸೂರಿನಿಂದ ತಾಳಗುಪ್ಪ – ಡಿಸೆಂಬರ್ 9ರಿಂದ ಡಿಸೆಂಬರ್ 18ರವರೆಗೆ ಪ್ರತಿದಿನ ಸಂಚರಿಸಲಿದೆ.
- ರೈಲು ಸಂಖ್ಯೆ 06228 – ತಾಳಗುಪ್ಪದಿಂದ ಮೈಸೂರಿಗೆ – ಡಿಸೆಂಬರ್ 10 ರಿಂದ ಡಿಸೆಂಬರ್ 19ರವರೆಗೆ ಪ್ರತಿದಿನ ಸಂಚರಿಸಲಿದೆ.
- ರೈಲು ಸಂಖ್ಯೆ 06529 – ಬೆಂಗಳೂರಿನಿಂದ ತಾಳಗುಪ್ಪ – ಡಿಸೆಂಬರ್ 7ರಿಂದ ಡಿಸೆಂಬರ್ 16ರವರೆಗೆ ಪ್ರತಿದಿನ ಸಂಚಾರ.
- ರೈಲು ಸಂಖ್ಯೆ 06530 – ತಾಳಗುಪ್ಪದಿಂದ ಬೆಂಗಳೂರಿಗೆ – ಡಿಸೆಂಬರ್ 8ರಿಂದ ಡಿಸೆಂಬರ್ 17ರವರೆಗೆ ಪ್ರತಿದಿನ ಸಂಚಾರ.
ಸೀಟುಗಳು ರಿಜರ್ವ್ ಮಾಡಿಕೊಳ್ಳಬೇಕು
ಕೋವಿಡ್ ಸೋಂಕು ವ್ಯಾಪಕವಾಗಿ ಹಬ್ಬುವ ಆತಂಕದಲ್ಲಿ ಮಾರ್ಚ್ 25ರಂದು ರೈಲು ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಯಿತು. ಆಗ ಈ ರೈಲುಗಳನ್ನು ನಿಲ್ಲಿಸಲಾಗಿತ್ತು. ಈಗ ರೈಲು ಸಂಚಾರ ಆರಂಭವಾಗುತ್ತಿದೆ. ಆದರೆ ಟಿಕೆಟ್ಗಳನ್ನು ರಿಜರ್ವ್ ಮಾಡಿಸಿದ ಪ್ರಯಾಣಿಕರಿಗಷ್ಟೆ ರೈಲು ಹತ್ತಲು ಅವಕಾಶವಿದೆ. ಇನ್ನು, ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]