ಶಿವಮೊಗ್ಗ ಲೈವ್.ಕಾಂ | SHIMOGA NEWS | 25 JANUARY 2021
ಹುಣಸೋಡು ಕಲ್ಲು ಗಣಿ ಸ್ಪೋಟ ಪ್ರಕರಣ ಸಂಬಂಧ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ. ಇವರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೂರ್ವ ವಲಯ ಐಜಿಪಿ ಎಸ್.ರವಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಜಿಪಿ ರವಿ ಅವರು, ಜಾಗ ಲೀಸ್ಗೆ ಪಡೆದಿದ್ದ ರವೀಂದ್ರನಗರ ನಿವಾಸಿ ಬಿ.ವಿ.ಸುಧಾಕರ್ (57), ಸೂಪರ್ವೈಸರ್ ವಿನೋಬನಗರದ ನರಸಿಂಹ (39), ಚಾಲುಕ್ಯ ನಗರದ ಮುಮ್ತಾಜ್ ಅಹಮದ್ (50) ಮತ್ತು ಭದ್ರಾವತಿ ಜಂಬರಘಟ್ಟದ ರಶೀದ್ (44) ಎಂಬುವವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ತೆಲಂಗಾಣದಿಂದ ಸ್ಪೋಟಕ ತರಿಸುತ್ತಿದ್ದರು
ಭದ್ರಾವತಿಯ ಪ್ರವೀಣ್ ಇಲ್ಲಿನ ಕ್ವಾರಿಗಳಿಗೆ ಸ್ಪೋಟಕ ಪೂರೈಸುತ್ತಿದ್ದ ಏಜೆಂಟ್. ತೆಲಂಗಾಣದ ಅನಂತಪುರದಿಂದ ಸ್ಪೋಟಕಗಳನ್ನು ಪೂರೈಕೆ ಮಾಡುತ್ತಿದ್ದ. ಅವತ್ತು ಸ್ಪೋಟಕ ಪೂರೈಕೆ ಮಾಡುತ್ತಿದ್ದಾಗ ಘಟನೆ ಸಂಭವಿಸಿದೆ. ಸ್ಪೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ತೆಲಂಗಾಣದ ಅನಂತಪುರ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೂ ಈ ಕುರಿತು ಚರ್ಚಿಸಲಾಗಿದೆ. ಸ್ಪೂಟಕ ಸರಬರಾಜು ಕುರಿತು ತನಿಖೆ ನಡೆಯುತ್ತಿದೆ ಎಂದು ಐಜಿಪಿ ರವಿ ತಿಳಿಸಿದರು.
ವಾಹನಗಳ ಬಗ್ಗೆಯು ತನಿಖೆ
ಯಾವೆಲ್ಲ ವಾಹನಗಳು ಸ್ಪೋಟಗೊಂಡಿವೆ ಅನ್ನುವ ಕುರಿತು ತಜ್ಞರ ತಂಡ ಪರಿಶೀಲನೆ ಬಳಿಕ ತಿಳಿಯಲಿದೆ. ಈಗ ಪರಿಶೀಲನಾ ಕಾರ್ಯ ನಡೆಯುತ್ತಿದೆ ಎಂದು ಐಜಿಪಿ ರವಿ ಸ್ಪಷ್ಟಪಡಿಸಿದರು.
ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ಸುದ್ದಿಗೋಷ್ಠಿಯಲ್ಲಿ ಇದ್ದರು.
ಸುದ್ದಿಗೋಷ್ಠಿಯ ವಿಡಿಯೋ ರಿಪೋರ್ಟ್ ಇಲ್ಲಿದೆ
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200