ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | THIRTHAHALLI CRIME NEWS | 01 FEBRUARY 2021
ಕೋಳಿ ಅಂಕ (ಕೋಳಿ ಜೂಜು) ನಡೆಯುತ್ತಿದ್ದ ಸ್ಥಳದ ಮೇಲೆ ತೀರ್ಥಹಳ್ಳಿ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಅಂಕದಲ್ಲಿ ಪಾಲ್ಗೊಂಡಿದ್ದವರ ಬೈಕುಗಳನ್ನು ವಶಕ್ಕೆ ಪಡೆದು, ಠಾಣೆಗೆ ತರುತ್ತಿದ್ದಾಗ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ನಾಲ್ಕು ಬೈಕುಗಳು ಸುಟ್ಟು ಕರಕಲಾಗಿದೆ.
ಏನಿದು ಕೋಳಿ ಅಂಕ? ಎಲ್ಲಿ ನಡೀತಿತ್ತು?
ತೀರ್ಥಹಳ್ಳಿ ತಾಲೂಕು ಕೋಣಂದೂರು ಸಮೀಪದ ಅರಳಸುರಳಿ ವ್ಯಾಪ್ತಿಯ ಅರಣ್ಯದಲ್ಲಿ ಕೋಳಿ ಅಂಕ ನಡೆಯುತ್ತಿತ್ತು. ಕೋಳಿಯ ಕಾಲಿಗೆ ಚಾಕು ಕಟ್ಟಿ, ಕಾಳಗಕ್ಕೆ ಬಿಡಲಾಗುತ್ತದೆ. ಜೂಜು ಕಟ್ಟಿ ಈ ಕಾಳಗ ನಡೆಸಲಾಗುತ್ತದೆ. ನಿಷೇಧವಿರುವ ಕೋಳಿ ಅಂಕವನ್ನು ಆಡಿಸುತ್ತಿರುವ ಖಚಿತ ಮಾಹಿತಿ ಮೇರೆಗೆ, ಪೊಲೀಸರು ದಾಳಿ ನಡೆಸಿದರು. ಅಲ್ಲಿದ್ದವರೆಲ್ಲ ಪರಾರಿಯಾದರು.
ಬೈಕ್‍ಗಳನ್ನು ವಶಕ್ಕೆ ಪಡೆದ ಪೊಲೀಸ್
ಕೋಳಿ ಅಂಕಕ್ಕೆ ಬಂದಿದ್ದವರ 20ಕ್ಕೂ ಹೆಚ್ಚು ಬೈಕುಗಳನ್ನು ಪೊಲೀಸರು ವಶಕ್ಕೆ ಪಡೆದು, ತೀರ್ಥಹಳ್ಳಿ ಠಾಣೆಗೆ ರವಾನಿಸುತ್ತಿದ್ದರು. ಲಾರಿಯೊಂದರಲ್ಲಿ ಬೈಕುಗಳನ್ನು ಸಾಗಿಸುತ್ತಿದ್ದರು. ಬೈಕುಗಳು ಬೀಳದಿರಲಿ ಎಂದು ಹಗ್ಗಿದಂದ ಕಟ್ಟಲಾಗಿತ್ತು. ಕೋಣಂದೂರು ಸಮೀಪ ಮಾರ್ಗ ಮಾಧ್ಯೆ, ಕೆಲವು ಬೈಕುಗಳು ಲಾರಿಯಿಂದ ಕೆಳಗೆ ಜಾರಿವೆ.
ರಸ್ತೆಗೆ ಉಜ್ಜಿ ಹೊತ್ತಿದ ಬೆಂಕಿ
ಹಗ್ಗದಿಂದ ಬಿಗಿದಿದ್ದರಿಂದ ಬೈಕುಗಳು ರಸ್ತೆಗೆ ಉಜ್ಜಿಕೊಂಡು ಸ್ವಲ್ಪ ದೂರದವರೆಗೂ ಬಂದಿವೆ. ಇದರಿಂದ ಬೈಕುಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಸ್ಥಳೀಯರು ಲಾರಿ ಚಾಲಕನಿಗೆ ತಿಳಿಸಿದ್ದರಿಂದ ಉಳಿದ ಬೈಕುಗಳಿಗೆ ಹಾನಿ ಆಗುವುದು ತಪ್ಪಿದೆ. ಘಟನೆಯಲ್ಲಿ ನಾಲ್ಕು ಬೈಕುಗಳು ಸಂಪೂರ್ಣ ಸುಟ್ಟು ಹೋಗಿವೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

- ₹1,00,000 ಲಂಚದ ಹಣದೊಂದಿಗೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ, ಮಧ್ಯವರ್ತಿ

About The Editor
ನಿತಿನ್ ಆರ್.ಕೈದೊಟ್ಲು






