ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 24 FEBRUARY 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನಟ ನೀನಾಸಂ ಸತೀಶ್ ಅವರು ಇವತ್ತು ಮುತ್ತಲ ಗ್ರಾಮಕ್ಕೆ ಭೇಟಿ ನೀಡಿದ್ದರು. ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು. ಅಲ್ಲದೆ, ಇಲ್ಲಿ ಕೆರೆಗಳ ಪುನಶ್ಚೇತನ ಕಾರ್ಯವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಸನಗರ ತಾಲೂಕಿನ ಮುತ್ತಲ ಗ್ರಾಮಕ್ಕೆ ನಟ ನೀನಾಸಂ ಸತೀಶ್ ಭೇಟಿ ನೀಡಿದರು. ಇಲ್ಲಿನ ಶಾಲೆ, ಗ್ರಾಮದ ವಿವಿಧೆಡೆ ಸತೀಶ್ ಅವರು ಭೇಟಿ ನೀಡಿ, ಹಿರಿಯರು, ಯುವಕರನ್ನು ಭೇಟಿಯಾದರು.
ಕೆರೆಗಳ ಪುನಶ್ಚೇತನಕ್ಕೆ ಮೆಚ್ಚುಗೆ
ಸಾರಾ ಸಂಸ್ಥೆಯು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಮುತ್ತಲ ಗ್ರಾಮಸ್ಥರ ನೆರವಿನಿಂದ ವಿವಿಧ ಕೆರೆಗಳ ಪುನಶ್ಚೇತನ ಮಾಡಿದೆ. ಈ ಕೆರೆಗಳನ್ನು ವೀಕ್ಷಿಸಿದ ನಟ ನೀನಾಸಂ ಸತೀಶ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಕಾರ್ಯಗಳು ಅಕ್ಕಪಕ್ಕದ ಊರುಗಳಿಗೆ, ರಾಜ್ಯದ ಇತರೆ ಗ್ರಾಮಗಳಿಗೂ ಮಾದರಿಯಾಗಬೇಕು ಎಂದರು.
ಮುತ್ತಲ ಗ್ರಾಮದಲ್ಲಿ ಕೆರೆಗಳ ಪುನಶ್ಚೇತನ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಅದೆ ರೀತಿ ಇಲ್ಲಿ ಗ್ರಾಮಸ್ಥರು ಒಗ್ಗಟ್ಟಿನಿಂದ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ. ಕೆರೆಗಳ ಪುನಶ್ಚೇತನದಿಂದ ಇಲ್ಲಿನ ನೂರಾರು ಎಕರೆಗೆ ನೀರು ಸಿಗುತ್ತಿದೆ. ಬಾವಿಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸಿದೆ. ಇದು ಮಾದರಿ ಕಾರ್ಯ ಎಂದು ನೀನಾಸಂ ಸತೀಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಡಿಯೋ ರಿಪೋರ್ಟ್
ನಟ, ರಂಗಕರ್ಮಿ ಏಸುಪ್ರಕಾಶ್, ನಟ ಶ್ರೀಕಾಂತ್, ನೀನಾಸಂ ರಂಗಶಿಕ್ಷಣ ಸಂಸ್ಥೆ ಮಾಜಿ ಪ್ರಾಂಶುಪಾಲರಾದ ಗಣೇಶ್, ಮುತ್ತಲದ ಸ್ವ ಗ್ರಾಮ ಸಮಿತಿ ಅಧ್ಯಕ್ಷ ಗುರುಮೂರ್ತಿ, ಕಾರ್ಯದರ್ಶಿ ಸತೀಶ್ ಹಂಜಾ, ಸಂಚಾಲಕರ ರಮೇಶ್, ವರ್ತೆಕೆರೆ ಅಧ್ಯಕ್ಷ ಕೃಷ್ಣಪ್ಪ, ಮಾಕೋಡು ಕೆರೆ ಅಧ್ಯಕ್ಷ ಗೋಪಾಲ, ಶಿಕ್ಷಣ ಸಮಿತಿ ಅಧ್ಯಕ್ಷ ಯೋಗೇಂದ್ರ, ಮುತ್ತಲ ಶಾಲೆ ಮುಕ್ಯೋಪಾಧ್ಯಾಯ ಚಂದ್ರಕಲಾ ಶೇಟ್, ಪ್ರಮುಖರಾದ ರೇವಪ್ಪ, ರಾಜಶೇಖರ್, ಷಣ್ಮುಖ, ಪಾಲಕ್ಷ, ರೇಣುಕಪ್ಪ, ಎಂ.ಡಿ.ಮಂಜುನಾಥ್ , ಎಂ.ವೈ.ಮಂಜುನಾಥ್, ಮಲ್ಲೇಶಪ್ಪ, ಸತೀಶ್, ಮೋಹನ್, ಚಂದ್ರಕಲಾ ಪ್ರಕಾಶ್, ಲತಾ, ಶಶಿಕಲಾ, ರೇಣುಕಾ, ಶಾರದಾ, ಲೋಲಾಕ್ಷಿ, ಲಲಿತಾ, ಚಂದ್ರಕಲಾ ಸೇರಿದಂತೆ ಗ್ರಾಮಸ್ಥರು ಈ ಸಂದರ್ಭ ಇದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]