ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 8 MARCH 2021
ರೈಲ್ವೆ ನಿಲ್ದಾಣದ ಬಳಿ, ಹೊನ್ನಾಳಿ ರಸ್ತೆಯಲ್ಲಿರುವ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೊನ್ನಾಳಿ ಕಡೆಯಿಂದ ಬರುವ ಬಸ್ಸು, ಲಾರಿ, ಕಾರು ಸೇರಿದಂತೆ ಎಲ್ಲ ಬಗೆಯ ವಾಹನಗಳು ಸೇತುವೆ ಮೇಲೆ ಬಿಡಲಾಗುತ್ತಿದೆ. ಆದರೆ ಶಿವಮೊಗ್ಗದ ಕಡೆಯಿಂದ ತೆರಳುವ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸೇತುವೆ ಮುಂಭಾಗ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆದು, ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸುತ್ತಿದ್ದಾರೆ.
ಸೇತುವೆ ಮೇಲೆ ಸಮಸ್ಯೆ ಏನು?
ಸೇತುವೆ ಮೇಲೆ ಜಾಯಿಂಟ್‌ಗಳಿರುವ ಕಡೆಯಲ್ಲಿ ಕಬ್ಬಿಣ್ಣದ ರಾಡ್‌ಗಳು ಮೇಲೆದಿವೆ. ಇದರಿಂದ ವಾಹನ ಸವಾರರು ತೀವ್ರ ಸಮಸ್ಯೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಜಾಯಿಂಟ್‍ಗಳಿರುವ ಕಡೆಯಲ್ಲಿ ಕಾಂಕ್ರಿಟ್ ಹಾಕಿ, ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ಇನ್ನೂ 25 ದಿನ ನಡೆಯುತ್ತೆ ಕೆಲಸ
ಸೇತುವೆ ಮೇಲೆ ಇವತ್ತಿನಿಂದ ಕಾಮಗಾರಿ ಆರಂಭವಾಗಿದೆ. ಸುಮಾರು 25 ದಿನ ಕಾಮಗಾರಿ ನಡೆಯಲಿದೆ ಎಂದು ಲೋಕೋಪಯೋಗಿ ಇಲಾಖೆ ಇಇ ಸಂಪತ್ ಕುಮಾರ್ ತಿಳಿಸಿದ್ದಾರೆ. ಕಾಂಕ್ರಿಟ್ ಹಾಕಿ ಜಾಯಿಂಟ್‍ಗಳನ್ನು ಬಂದ್ ಮಾಡಲಾಗುತ್ತದೆ. ಹಾಗಾಗಿ ಇಷ್ಟು ಸಮಯ ಹಿಡಿಯುವ ಸಾಧ್ಯತೆ ಇದೆ.
ಆ ಕಡೆಯಿಂದ ಬರುಬಹುದು
ಹೊನ್ನಾಳಿ, ರಾಗಿಗುಡ್ಡ ಕಡೆಯಿಂದ ಬರುವ ವಾಹನಗಳು ಸೇತುವೆ ಮೇಲಿಂದ ಶಿವಮೊಗ್ಗ ನಗರದ ಕಡೆಗೆ ಬರಬಹುದು. ಆದರೆ ಶಿವಮೊಗ್ಗ ಸಿಟಿಯ ಕಡೆಯಿಂದ ರಾಗಿಗುಡ್ಡ, ಹೊನ್ನಾಳಿ ಕಡೆಗೆ ತೆರಳುವ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ದ್ವಿಚಕ್ರ ವಾಹನಗಳನ್ನು ಮಾತ್ರ ಸೇತುವೆ ಮೇಲೆ ಬಿಡಲಾಗುತ್ತಿದೆ. ಇನ್ನು, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಸವಳಂಗ ರಸ್ತೆಯಲ್ಲಿ ಜೆಎನ್‍ಎನ್‍ಸಿ ಕಾಲೇಜು ಬಳಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಬಹುದಾಗಿದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]