ಶಿವಮೊಗ್ಗ ಲೈವ್.ಕಾಂ | SAGARA NEWS | 24 MARCH 2021
ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗರು ಸಿಗಂದೂರು ಲಾಂಚ್ ಸಿಬ್ಬಂದಿಗಳ ಮೇಲೆ ಹೊಳೆಬಾಗಿಲಿನಲ್ಲಿ ಹಲ್ಲೆ ನಡೆಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತುಮರಿ ಗ್ರಾಮ ಪಂಚಾಯಿತಿ ಹಂಗಾಮಿ ನೌಕರರಾದ ರಾಜೇಶ್ ಮತ್ತು ಶ್ರವಣ್ ಕುಮಾರ್ ಮೇಲೆ ಹಲ್ಲೆ ನಡೆಸಲಾಗಿದೆ.
ಹಲ್ಲೆಗೆ ಕಾರಣವೇನು?
ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ಗೋವಿಂದ ಕೃಷ್ಣ ಮತ್ತು ರಾಜು ಎಂಬುವವರು ಕ್ಷುಲಕ ಕಾರಣಕ್ಕೆ ಗೇಟ್ ಸಿಬ್ಬಂದಿ ಜೊತೆ ಜಗಳವಾಡಿದ್ದಾರೆ. ಬೆಂಗಳೂರಿನಿಂದ ಬಂದಿದ್ದ ತಮ್ಮ ಟಿಟಿ ವಾಹನವನ್ನು ಲಾಂಚ್ಗೆ ಬಿಡಲಿಲ್ಲ ಎಂಬ ಕಾರಣಕ್ಕೆ ಜಗಳವಾಡಿದ್ದಾರೆ. ಕೈ ಕೈ ಮಿಲಾಯಿಸಿ ಗೇಟ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.
ಸ್ಥಳೀಯರು ಜಗಳ ಬಿಡಿಸಿದ್ದು, ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗರನ್ನು ಬ್ಯಾಕೋಡು ಉಪ ಠಾಣೆಗೆ ಕರೆದೊಯ್ದಿದ್ದರು. ಬಳಿಕ ರಾಜಿ ಮಾಡಿ, ಮುಚ್ಚಳಿಕೆ ಬರೆದು ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಗೇಟ್ ಸಿಬ್ಬಂದಿಯೇ ಟಾರ್ಗೆಟ್
ಸಿಗಂದೂರಿಗೆ ಬರುವ ಪ್ರವಾಸಿಗರು ಲಾಂಚ್ನಲ್ಲಿ ತಮ್ಮ ವಾಹನ ಬಿಡುವಂತೆ ಆಗಾಗ ಕಿರಿಕ್ ಮಾಡುತ್ತಾರೆ. ಗೇಟ್ ಸಿಬ್ಬಂದಿ ಮೇಲೆ ಹಲವು ಭಾರಿ ಹಲ್ಲೆ ನಡೆಸಿದ್ದಾರೆ. ಜನರ ಸಂಖ್ಯೆ ಹೆಚ್ಚಿದ್ದಾಗ ಮತ್ತು ಸ್ಥಳೀಯರ ವಾಹನಗಳಿಗೆ ಮೊದಲ ಅದ್ಯತೆ ನೀಡಬೇಕಿರುವ ಹಿನ್ನೆಲೆ ಪ್ರವಾಸಿಗರ ವಾಹನಗಳನ್ನು ಲಾಂಚ್ಗೆ ಬಿಡುವುದಿಲ್ಲ. ಇದರಿಂದ ಜಗಳವಾಗುತ್ತದೆ. ಗೇಟ್ ಸಿಬ್ಬಂದಿಗಳ ಮೇಲೆ ಪ್ರವಾಸಿಗರು ಹಲ್ಲೆ ನಡೆಸುತ್ತಿದ್ದಾರೆ.
ಪ್ರವಾಸಿಗರ ಕಿರಿಕ್ನಿಂದ ಬೇಸತ್ತಿರುವ ಗೇಟ್ ಸಿಬ್ಬಂದಿ ಇತ್ತೀಚೆಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಸಂಬಂಧ ತಾಲೂಕು ಪಂಚಾಯಿತಿ ಇಒ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಇದಾಗಿ ಕೆಲವೇ ದಿನದಲ್ಲಿ ಕಿರಿಕ್ ಆಗಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]