KSRTC ನೌಕರರ ಮುಷ್ಕರ, ಶಿವಮೊಗ್ಗದಲ್ಲಿ ಹೇಗಿದೆ ಪರಿಸ್ಥಿತಿ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ ಲೈವ್.ಕಾಂ | SHIMOGA NEWS | 6 APRIL 2021

ಆರನೆ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿ, ಕೆಎಸ್‌ಆರ್‌ಟಿಸಿ ನೌಕರರು ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ನಡುವೆ ಇವತ್ತಿಂದಲೇ ಮುಷ್ಕರದ ಬಿಸಿ ತಟ್ಟಲು ಆರಂಭವಾಗಿದೆ.

ಮುಷ್ಕರದ ಮುನ್ನಾ ದಿನವೇ ಶಿವಮೊಗ್ಗದಲ್ಲಿ ಶೇ.50ರಷ್ಟು ಬಸ್ ಸಂಚಾರ ಕಡಿತವಾಗಿದೆ ಶಿವಮೊಗ್ಗ ವಿಭಾಗದ ನಾಲ್ಕು ಘಟಕಗಳಿಂದ 205 ಬಸ್ಸುಗಳ ಪೈಕಿ  ಈತನಕ 107 ಬಸ್ಸುಗಳು ಮಾತ್ರ ಹೊರ ಊರುಗಳಿಗೆ ಸಂಚರಿಸಿವೆ ಎಂದು ಹೇಳಲಾಗುತ್ತಿದೆ. ವಿವಿಧೆಡೆಯಿಂದ ಜಿಲ್ಲೆಗೆ ಬರುವ ಬಸ್ಸುಗಳ ಸಂಖ್ಯೆಯಲ್ಲೂ ಕಡಿತವಾಗಿದೆ.

ಪ್ರಯಾಣಿಕರ ಪರದಾಟ ಶುರು

ದೂರದ ಊರುಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿರುವ ಪ್ರಯಾಣಿಕರು  ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಸ್ಸುಗಳಿಗೆ ಕಾಯುವವರ ಸಂಖ್ಯೆ ಹೆಚ್ಚುತ್ತಿದೆ.

ಶಿವಮೊಗ್ಗ ಜಿಲ್ಲೆಯೊಳಗೆ ತಟ್ಟುವುದಿಲ್ಲ ಬಿಸಿ

ಸಾರಿಗೆ ನೌಕರರು ಮುಷ್ಕರ ನಡೆಸಿದರೂ ಜಿಲ್ಲೆಯೊಳಗೆ ಪ್ರಯಾಣಿಕರಿಗೆ ಅದರ ಬಿಸಿ ತಟ್ಟುವುದಿಲ್ಲ. ಜಿಲ್ಲೆಯ ಬಹುತೇಕ ರೂಟ್‍ಗಳಲ್ಲಿ ಖಾಸಗಿ ಬಸ್‍ಗಳೇ ಸಂಚರಿಸುತ್ತಿವೆ. ಹಾಗಾಗಿ ಬಹುತೇಕ ಪ್ರಯಾಣಿಕರು ಖಾಸಗಿ ಬಸ್‍ಗಳ ಮೇಲೆ ಅವಲಂಬಿತವಾಗಿದ್ದಾರೆ. ಶಿವಮೊಗ್ಗ ಭದ್ರಾವತಿ, ಶಿವಮೊಗ್ಗ ಹೊನ್ನಾಳಿ ರೂಟ್‍ಗಳಲ್ಲಿ ಮಾತ್ರ ಸರ್ಕಾರಿ ಬಸ್ಸುಗಳು ಸಂಚರಿಸುತ್ತಿವೆ. ಈ ಮಾರ್ಗದಲ್ಲಿ ಪರ್ಯಾಯ ವ್ಯವಸ್ಥೆಗೆ ಜಿಲ್ಲಾಡಳಿತ ಯೋಜಿಸಿದೆ.

ಜಿಲ್ಲಾಡಳಿತಕ್ಕೆ ವರದಿ ಸಲ್ಲಿಕೆ

ಪ್ರಯಾಣಿಕರಿಗೆ ಅನಾನುಕೂಲ ಆಗದಂತೆ ತಡೆಯಲು ಖಾಸಗಿ ಬಸ್‍ಗಳ ಸಂಚಾರಕ್ಕೆ ಜಿಲ್ಲಾಡಳಿತ ಚಿಂತಿಸಿದೆ. ಈ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿಯಿಂದ ಜಿಲ್ಲಾಡಳಿತ ವರದಿ ಪಡೆದುಕೊಂಡಿದೆ. ಶಿವಮೊಗ್ಗ ವಿಭಾಗದಿಂದ ಎಷ್ಟು ಬಸ್ಸುಗಳು ಸಂಚಾರ ಮಾಡುತ್ತವೆ, ಯಾವೆಲ್ಲ ಮಾರ್ಗಗಳಲ್ಲಿ ಸರ್ಕಾರಿ ಬಸ್ಸುಗಳು ಸಂಚರಿಸುತ್ತಿವೆ ಅನ್ನುವದರ ಮಾಹಿತಿ ಪಡೆಯಲಾಗಿದೆ. ಬುಧವಾರ ಬೆಳಗ್ಗೆಯಿಂದ ಅನಿವಾರ್ಯತೆ ಉಂಟಾದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಯೋಜಿಸಲಾಗಿದೆ.

166748678 1361708747523875 6448313924263251505 n.jpg? nc cat=101&ccb=1 3& nc sid=730e14& nc ohc=nvUmBlrv0dsAX eBwU2& nc oc=AQnec0eOXTJ7x5OQLWrXg6FY3L9faddt6HWzpZs1cL9NqHk J3NqgwclkA8PhoFKz2lqJ8Si Ue4Fi8ilgzhAqxN& nc ht=scontent.fblr20 1

167540949 1361708760857207 5666147878515284314 n.jpg? nc cat=107&ccb=1 3& nc sid=730e14& nc ohc= 5n3f6Ytho8AX 9 pSZ& nc ht=scontent.fblr20 1

168797719 1361708677523882 6619267166959440197 n.jpg? nc cat=105&ccb=1 3& nc sid=730e14& nc ohc=29dBYMbAl84AX8Ez51 & nc ht=scontent.fblr20 1

167132318 1361708694190547 4993123862286701925 n.jpg? nc cat=101&ccb=1 3& nc sid=730e14& nc ohc=Q6QH32uh2EUAX9tTqjT& nc ht=scontent.fblr20 1

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment