ಹೊಳೆಬೆನವಳ್ಳಿ ಬಳಿ ದಿಢೀರ್ ರಸ್ತೆಗೆ ಬಂದ ಟ್ರಾಕ್ಟರ್, ಬೈಕ್ ಸವಾರ ಸಾವು

ಶಿವಮೊಗ್ಗದ ಲೈವ್.ಕಾಂ | SHIMOGA CRIME NEWS | 1 ಫೆಬ್ರವರಿ 2022

ಟ್ರಾಕ್ಟರ್ ಟ್ರೈಲರ್’ಗೆ ಡಿಕ್ಕಿಯಾಗಿ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ. ಟ್ರಾಕ್ಟರ್ ಚಾಲಕನ ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿದ್ದು, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.

nanjappa hospital cancer treatment

ಶಿವಮೊಗ್ಗ ತಾಲೂಕು ಹೊಳೆಬೆನವಳ್ಳಿಯ ಪೆಟ್ರೋಲ್ ಬಂಕ್ ಮುಂಭಾಗ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ರೇಣು (42) ಎಂಬುವವರು ಮೃತಪಟ್ಟಿದ್ದಾರೆ.

ಹೇಗಾಯ್ತು ಅಪಘಾತ?

ಶಿವಮೊಗ್ಗದ ಚಿಕ್ಕಲ್’ನ ರೇಣು ಅವರು ಗುರುಪುರದ ಶಿವಕುಮಾರ್ ಅವರೊಂದಿಗೆ ಜನವರಿ 28ರಂದು ಮೈದೊಳಲು ಗ್ರಾಮದಲ್ಲಿ ಪೇಂಟಿಂಗ್ ಕೆಲಸಕ್ಕೆ ತೆರಳಿದ್ದರು. ಕೆಲಸ ಮುಗಿಸಿ ಸಂಜೆ ಬೈಕ್’ನಲ್ಲೇ ಮನೆಗೆ ಹಿಂತಿರುಗುತ್ತಿದ್ದರು.

Kalleshwara-Enterprises.webp

ಶಿವಕುಮಾರ್ ಅವರು ಬೈಕ್ ಚಾಲನೆ ಮಾಡುತ್ತಿದ್ದರು. ಹೊಳೆಬೆನವಳ್ಳಿ ಪೆಟ್ರೋಲ್ ಬಂಕ್ ಬಳಿ ಬರುತ್ತಿದ್ದಾಗ, ಪೆಟ್ರೋಲ್ ಬಂಕ್’ನಿಂದ ದಿಢೀರನೆ ಟ್ರಾಕ್ಟರ್ ಒಂದು ರಸ್ತೆಗೆ ಬಂದಿದೆ. ಈ ಸಂದರ್ಭ ಬೈಕು ಟ್ರಾಕ್ಟರ್’ನ ಟ್ರೇಲರ್’ಗೆ ಡಿಕ್ಕಿಯಾಗಿದೆ.

nanjappa hospital covid care center

ಗಾಯಾಗಳುಗಳನ್ನು ಕೂಡಲೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ರೇಣು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ನಿರ್ಲಕ್ಷ್ಯದ ಚಾಲನೆಗೆ ಕಾರಣವಾದ ಟ್ರಾಕ್ಟರ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕು  ಎಂದು ರೇಣು ಅವರ ಕುಟುಂಬದವರು ದೂರು ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆಯಲ್ಲಿ ಅಪಘಾತ ತಡೆಗೆ ಚಾರ್ಟ್ ಸಿದ್ಧ, ಪೊಲೀಸ್ ಇಲಾಖೆಯಿಂದ ರೆಡಿಯಾಗ್ತಿದೆ ಪ್ಲಾನ್

about smg live readers

Shimoga Police

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment