ಶಿವಮೊಗ್ಗದ ಲೈವ್.ಕಾಂ | SHIMOGA NEWS | 2 ಫೆಬ್ರವರಿ 2022
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಮಾಂಗಲ್ಯ ಸರ ಮತ್ತು ಚಿನ್ನದ ಚೈನ್ ತೆಗೆದು ದೇವರ ಮನೆಯಲ್ಲಿಟ್ಟು, ಸ್ನಾನ ಮುಗಿಸಿ ಬರುವಷ್ಟರಲ್ಲಿ ಕಳ್ಳತನವಾಗಿದೆ. ಮನೆ ಕೆಲಸಕ್ಕೆ ಬರುವ ಮಹಿಳೆಯ ಮಗನ ಮೇಲೆಯೆ ಅನುಮಾನ ಮೂಡಿದ್ದು, ಪ್ರಕರಣ ದಾಖಲಾಗಿದೆ.
ಗೋಪಾಳದಲ್ಲಿ ಘಟನೆ ಸಂಭವಿಸಿದೆ. ರಾಧಾ ಎಂಬುವವರು ಮಾಂಗಲ್ಯ ಸರ ಮತ್ತು ಚಿನ್ನ ಚೈನ್ ಕಳೆದುಕೊಂಡಿದ್ದಾರೆ.
ಹೇಗಾಯ್ತು ಚೈನ್ ಕಳ್ಳತನ?
ಸ್ನಾನಕ್ಕೆ ತೆರಳುವ ಮೊದಲು ರಾಧಾ ಅವರು ತಮ್ಮ ಮನೆಯ ದೇವರ ಮನೆಯಲ್ಲಿ ಮಾಂಗಲ್ಯ ಸರ, ಚಿನ್ನದ ಚೈನ್ ಇಟ್ಟು ಹೋಗಿದ್ದರು. ಅವರ ಪತಿ ಮನೆಯ ಟೆರೇಸ್ ಮೇಲೆ ಗಿಡಗಳಿಗೆ ನೀರು ಹಾಕಲು ತೆರಳಿದ್ದರು. ಈ ವೇಳೆ ಮನೆ ಕೆಲಸದ ಮಹಿಳೆಯ ಪುತ್ರ ಮನೆಗೆ ಬಂದಿದ್ದು, ದಿಢೀರ್ ವಾಪಸ್ ಬೈಕ್ ಹತ್ತಿ ಹೋಗಿದ್ದ.
ರಾಧಾ ಅವರು ಸ್ನಾನ ಮುಗಿಸಿ ಬಂದು ನೋಡಿದಾಗ ದೇವರ ಮನೆಯಲ್ಲಿದ್ದ ಮಾಂಗಲ್ಯ ಸರ, ಚಿನ್ನದ ಚೈನ್ ನಾಪತ್ತೆಯಾಗಿತ್ತು. ಮನೆ ಕೆಲಸದ ಮಹಿಳೆಯ ಮಗ ಬಂದು ಹೋಗಿದ್ದರಿಂದ, ಆತನ ಮೇಲೆ ಅನುಮಾನ ಮೂಡಿದೆ.
2 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shimoga District Profile | About Shivamogga Live
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






