ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 23 ಫೆಬ್ರವರಿ 2022
ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಗೂ ಮುನ್ನ ನಡೆದ ಕೆಲವು ಬೆಳವಣಿಗೆ ಕುರಿತು ಆತನ ಸ್ನೇಹಿತ ನವೀನ್ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ನವೀನ್ ಮಹತ್ವದ ವಿಚಾರಗಳನ್ನು ತಿಳಿಸಿದ್ದಾರೆ.
ನವೀನ ಹೇಳಿದ ಸಂಗತಿಗಳೇನು?
“ಭಾನುವಾರ ಸಂಜೆ ಹರ್ಷನಿಗೆ ವಿಡಿಯೋ ಕಾಲ್ ಬಂದಿತ್ತು. ಇಬ್ಬರು ಯುವತಿಯವರು ವಿಡಿಯೋ ಕಾಲ್ ಮಾಡಿದ್ದರು. ಆ ಯುವತಿಯರು ‘ನಾವು ನಿಮ್ಮ ಸ್ನೇಹಿತೆಯರು’ ಎಂದು ಹೇಳಿದ್ದಾರೆ. ‘ನನಗೆ ನಿಮ್ಮ ಪರಿಚಯವಿಲ್ಲ’ ಎಂದು ಹರ್ಷ ಕರೆ ಕಟ್ ಮಾಡಿದ್ದ. ಅವರು ಪುನಃ ಕರೆ ಮಾಡಿದಾಗಲೂ ಹರ್ಷ ಕರೆ ಕಟ್ ಮಾಡಿದ್ದ.”
‘ನಾವು ನಡೆದುಕೊಂಡು ಅಮ್ಮ ಕ್ಯಾಂಟೀನ್ ಬಳಿಗೆ ಬಂದೆವು. ಆಗ ಹರ್ಷ, “ಯಾಕೋ ವಾತಾವರಣ ಸರಿ ಅನಿಸುತ್ತಿಲ್ಲ. ಗಾಡಿ ತೆಗೆದುಕೊಂಡು ಬನ್ನಿ” ಎಂದು ತಿಳಿಸಿದ’.
‘ನಾನು, ಮಂಜು, ಆನಂದ ಅವರು ಹರ್ಷ ಜೊತೆಗಿದ್ದವು. ಅಮ್ಮ ಕ್ಯಾಂಟೀನ್ ಬಳಿಯಿಂದ ನಾವು ಗಾಡಿ ತರೋಕೆ ಎಂದು ಬಂದೆವು. ಅಷ್ಟರಲ್ಲಿ ಫೋನ್ ಬಂತು, ‘ಬ್ಯಾಟ್ ಹಿಡಿದುಕೊಂಡು ಹರ್ಷನನ್ನು ಓಡಿಸಿಕೊಂಡು ಹೋಗುತ್ತಿದ್ದಾರೆ’ ಎಂದು ತಿಳಿಸಿದರು. ಕೂಡಲೆ ನಾವು ಸ್ಥಳಕ್ಕೆ ಹೋದೆವು’
‘ನಾವು ಹೋದಾಗ ಆಸಿಫ್ ಬ್ಯಾಟ್ ಹಿಡಿದುಕೊಂಡು ಓಡಿ ಹೋಗುತ್ತಿದ್ದ’
ಇದನ್ನೂ ಓದಿ | ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಕೇಸ್, ಮತ್ತಿಬ್ಬರು ಅರೆಸ್ಟ್
LATEST NEWS
- ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

- ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

- ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

- ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್, ಯಾಕೆ?

About The Editor
ನಿತಿನ್ ಆರ್.ಕೈದೊಟ್ಲು
















