SHIVAMOGGA LIVE NEWS | 1 ಮಾರ್ಚ್ 2022
ರಾತ್ರೋರಾತ್ರಿ ಸುಮಾರು 250 ಕೆ.ಜಿ.ಯಷ್ಟು ಸಿಪ್ಪೆಗೋಟು ಅಡಕೆ ಕಳ್ಳತನವಾಗಿದೆ. ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳೆ ಹೊನ್ನಾಪುರದ ರಮೇಶ್ ಎಂಬುವವರಿಗೆ ಸೇರಿದ 250 ಕೆ.ಜಿ. ಸಿಪ್ಪೆಗೋಟು ಅಡಕೆ ಕಳವಾಗಿದೆ.
ರಮೇಶ್ ಅವರು ಮನೆ ಬಳಿಕ ಅಡಕೆಯನ್ನು ಒಣಗಿಸಲು ಹಾಕಿದ್ದರು. ರಾತ್ರಿ 11 ಗಂಟೆಗೆ ಅಡಕೆಯನ್ನು ಪರಿಶೀಲಿಸಿ ಬಂದಿದ್ದರು. ಬೆಳಗ್ಗೆ 6 ಗಂಟೆಗೆ ಎದ್ದು ನೋಡಿದಾಗ, ಸುಮಾರು 250 ಕೆ.ಜಿ.ಯಷ್ಟು ಅಡಕೆ ಕಳ್ಳತನವಾಗಿತ್ತು. ಇದರ ಮೌಲ್ಯ ಸುಮಾರು 20 ಸಾವಿರ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ.
ತುಂಗಾ ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ| ಕಣದಲ್ಲಿ ಒಣಗಿಸಲು ಹಾಕಿದ್ದ ಸಿಪ್ಪೆಗೋಟು ಅಡಕೆ ರಾತ್ರೋರಾತ್ರಿ ನಾಪತ್ತೆ
- ಶಿವಮೊಗ್ಗದ ಫ್ರೀಡಂ ಪಾರ್ಕ್ನಲ್ಲಿ 3 ದಿನ ಫಲಪುಷ್ಪ ಪ್ರದರ್ಶನ, ಈ ವರ್ಷದ ವಿಶೇಷತೆ ಏನು?
- 2022ರಲ್ಲಿ ಅಪ್ಲೋಡ್ ಆಗಿದ್ದ ವಿಡಿಯೋ, ಶಿವಮೊಗ್ಗದ ಯುವಕನಿಗೆ ಈಗ ಶುರು ಸಂಕಷ್ಟ
- ಅಡಿಕೆ ಧಾರಣೆ | 22 ಜನವರಿ 2025 | ಇವತ್ತು ಯಾವ್ಯಾವ ಅಡಿಕೆ ಎಷ್ಟಿದೆ ರೇಟ್?
- ಸೈನ್ಸ್ ಮೈದಾನ, ಸಂಜೆ ಪಾರ್ಕಿಂಗ್ ಸ್ಥಳಕ್ಕೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ
- ಇನ್ಮುಂದೆ ಕಾಗೋಡು ತಿಮ್ಮಪ್ಪ, ಡಾಕ್ಟರ್ ಕಾಗೋಡು ತಿಮ್ಮಪ್ಪ
- ಕುವೆಂಪು ವಿವಿ, 84 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಹೇಗಿತ್ತು 34ನೇ ಘಟಿಕೋತ್ಸವ?