ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 11 ಮಾರ್ಚ್ 2022
ಹೊಸಮನೆ ಬಡಾವಣೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಬಡಾವಣೆಯ ಎಲ್ಲಾ ರಸ್ತೆಗಳ ಡಾಂಬರೀಕರಣಕ್ಕೆ ಗುರುವಾರ ಮಹಾನಗರ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ಚಾಲನೆ ನೀಡಿದರು.
ಹೊಸಮನೆಯ ಶ್ರೀ ವಜ್ರೇಶ್ವರಿ ಗಣಪತಿ ದೇವಸ್ಥಾನದ ಪಕ್ಕದ ರಸ್ತೆಯಿಂದ ಡಾಂಬರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದ ರೇಖಾ ರಂಗನಾಥ್ ಅವರು, ಈಗಾಗಲೇ ಹೊಸಮನೆ ಬಡಾವಣೆಯೂ ಸಂಪೂರ್ಣ ಸ್ಮಾರ್ಟ್ ಸಿಟಿ ಕಾಮಗಾರಿಗಳು ಮುಗಿಯುವ ಹಂತದಲ್ಲಿ ಬಂದಿದೆ. ಬಾಕ್ಸ್ ಡ್ರೈನೇಜ್, ವಿದ್ಯುತ್ ಭೂಗತ ಕೇಬಲ್’ಗಳು, 24×7 ನೀರಿನ ಸಂಪರ್ಕ, ಪಾರ್ಕಿಂಗ್ ಲಾಕಿಂಗ್ ಟೈಲ್ಸ್ ಗಳು ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಲಾಗುತ್ತದೆ. ವಾರ್ಡಿನ ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿಯನ್ನು ತಪ್ಪಿಸಬೇಕೆಂದು ತಾಕೀತು ಮಾಡಿದರು.
ಈ ಸಂದರ್ಭ ಮುಖಂಡರಾದ ಕೆ. ರಂಗನಾಥ್, ವಾರ್ಡಿನ ಪ್ರಮುಖರಾದ ಶಿವಮ್ಮ, ಗಿರಿಜಮ್ಮ, ಯೋಗೀಶ್ ಭಟ್, ಚಂದ್ರು ಗಡ್ಡೆ, ಪ್ರಜ್ವಲ್, ಚೇತನಾ ಹಾಗೂ ವಾರ್ಡಿನ ನಾಗರಿಕರು ಉಪಸ್ಥಿತರಿದ್ದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200
LATEST NEWS
- ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್, ಯಾಕೆ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್ 2026 – ಅಡಿಕೆ ಧಾರಣೆ

- ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

- ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

About The Editor
ನಿತಿನ್ ಆರ್.ಕೈದೊಟ್ಲು
















