ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 19 ಮಾರ್ಚ್ 2022
ಬಜರಂಗದಳ ಕಾರ್ಯಕರ್ತ ಹರ್ಷ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಇವತ್ತು ಹೋಮ ನಡೆಸಲಾಯಿತು. ಅರ್ಚಕ ವೃಂದದ ವತಿಯಿಂದ ತಿಲ ಪ್ರಾಯಶ್ಚಿತ ಹೋಮ ನಡೆಸಲಾಯಿತು.
ರವೀಂದ್ರ ನಗರ ಗಣಪತಿ ದೇವಸ್ಥಾನದಲ್ಲಿ ಇವತ್ತು ಅರ್ಚಕ ವೃಂದದ ವತಿಯಿಂದ ತಿಲ ಪ್ರಾಯಶ್ಚಿತ ಹೋಮ ಆಯೋಜಿಸಲಾಗಿತ್ತು. ಹರ್ಷ ಅವರ ಕುಟುಂಬದವರು ಹೋಮದಲ್ಲಿ ಪಾಲ್ಗೊಂಡಿದ್ದರು.
ಧರ್ಮವನ್ನು ಬಿತ್ತಿ ಹೋದ ಹರ್ಷ
ಇದೆ ಸಂದರ್ಭ ಮಾತನಾಡಿದ ಹಿರೆಹಡಗಲಿ ಹಾಲಸ್ವಾಮಿ ಮಾಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ ಅವರು, ಖಾವಿ ಹಾಕಿಕೊಂಡು ಮಾಡಬೇಕಾದ ಕಾರ್ಯವನ್ನು ಹರ್ಷ ಮಾಡಿ ತೋರಿಸಿದ್ದಾನೆ. ಹರ್ಷನಿಗೆ ಸಾವಿಲ್ಲ. ಆತ ನಮ್ಮೊಳಗೆ ಧರ್ಮವನ್ನು ಬಿತ್ತಿ ಹೋಗಿದ್ದಾನೆ. ಆತನನ್ನು ನಾವು ಮಣ್ಣಿನೊಳಗೆ ಮುಚ್ಚಿಲ್ಲ, ಬಿತ್ತಿದ್ದೇವೆ ಎಂದು ತಿಳಿಸಿದರು.
ಪುತ್ರ ಶೋಕಂ ನಿರಂತರಂ ಎಂದು ಹೇಳುತ್ತಾರೆ. ಹರ್ಷ ಸಾವು ಹಿಂದೂ ಸಮುದಾಯಕ್ಕೆ ನಿರಂತರ ಶೋಕ ಉಂಟು ಮಾಡಲಿದೆ. ಜಾತಿಯನ್ನು ಮೀರಿ ಧರ್ಮಕ್ಕಾಗಿ ಎಲ್ಲರೂ ಕೆಲಸ ಮಾಡಬೇಕು ಎಂದು ಹರ್ಷ ಹೇಳುತ್ತಿದ್ದ. ಅದರಂತೆ ಎಲ್ಲರೂ ಮುನ್ನಡೆಯಬೇಕು ಎಂದು ತಿಳಿಸಿದರು.
ಅರ್ಚಕ ವೃಂದದ ಪ್ರಮುಖರಾದ ಅ.ಪ.ರಾಮಭಟ್ಟ, ಹರ್ಷನ ಕುಟುಂಬ, ಪ್ರಮುಖರಾದ ವಿನಯ್, ಅಭಿಷೇಕ್ ಸೇರಿದಂತೆ ಹಲವರು ಈ ಸಂದರ್ಭ ಇದ್ದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200
LATEST NEWS
- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

- ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

About The Editor
ನಿತಿನ್ ಆರ್.ಕೈದೊಟ್ಲು
















