ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 26 ಮಾರ್ಚ್ 2022
ನಾಯಿ ಮರಿಯನ್ನು ನುಂಗಿದ್ದ ನಾಗರ ಹಾವನ್ನು ಉರಗ ರಕ್ಷಕ ಸ್ನೇಕ್ ಕಿರಣ್ ಅವರು ರಕ್ಷಣೆ ಮಾಡಿದ್ದಾರೆ. ಹಾವು ಹಿಡಿದ ಕೆಲವು ಹೊತ್ತಿನಲ್ಲಿ ನಾಯಿ ಮರಿಯನ್ನು ಹಾವು ಹೊಟ್ಟೆಯಿಂದ ಹೊರಗೆ ಹಾಕಿದೆ.
ವಿದ್ಯಾನಗರ ಚಂದ್ರಪ್ಪ ಎಂಬುವವರ ಮನೆ ಬಳಿ ಹಾವು ಕಾಣಿಸಿಕೊಂಡಿತ್ತು. ಸ್ನೇಕ್ ಕಿರಣ್ ಅವರು ಸ್ಥಳಕ್ಕೆ ಬಂದಾಗ ಅದು ನಾಗರ ಹಾವು ಎಂದು ಗೊತ್ತಾಗಿದೆ. ಕಿರಣ್ ಅವರು ಹಾವನ್ನು ರಕ್ಷಣೆ ಮಾಡಿದ್ದು, ಅದರ ಹೊಟ್ಟೆಯ ಭಾಗ ದಪ್ಪ ಆಗಿತ್ತು.
ಹೊಟ್ಟೆಯಲ್ಲಿತ್ತು ನಾಯಿ ಮರಿ
ಇಲಿ ಅಥವಾ ಕಪ್ಪೆಯನ್ನು ನಾಗರ ಹಾವು ನುಂಗಿರಬೇಕು ಎಂದು ಎಲ್ಲರು ಭಾವಿಸಿದ್ದರು. ಆದರೆ ಸ್ನೇಕ್ ಕಿರಣ್ ಅವರು ಹಾವನ್ನು ಹಿಡಿದ ಸ್ವಲ್ಪ ಹೊತ್ತಿಗೆ, ಹೊಟ್ಟೆಯಲ್ಲಿದ್ದದ್ದನ್ನು ಹೊರಗೆ ಹಾಕಿದೆ. ಆಗಲೆ ಅದು ನಾಯಿ ಮರಿಯನ್ನು ನುಂಗಿರುವುದು ಗೊತ್ತಾಗಿದೆ.
ನಾಗರ ಹಾವನ್ನು ರಕ್ಷಣೆ ಮಾಡಿರುವ ಸ್ನೇಕ್ ಕಿರಣ್ ಅವರು ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422