SHIVAMOGGA LIVE NEWS | KSRTC | 16 ಏಪ್ರಿಲ್ 2022
ಬೆಂಗಳೂರು – ಶಿವಮೊಗ್ಗ ಐರಾವತ ವೋಲ್ವೋ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರಿಗೆ ಸೇರಿದ ಐದು ಲಕ್ಷ ರೂ. ಹಣ ಕಳ್ಳತನವಾಗಿದೆ. ಬಸ್ಸಿನಲ್ಲಿ ನಿದ್ರೆ ಮಾಡುತ್ತಿದ್ದಾಗ ಘಟನೆ ಸಂಭವಿಸಿರುವ ಶಂಕೆ ಇದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶರತ್ ಕುಮಾರ್ ಎಂಬುವವರಿಗೆ ಸೇರಿದ ಐದು ಲಕ್ಷ ರೂ. ಹಣ ಕಳ್ಳತನವಾಗಿದೆ. ಶಿವಮೊಗ್ಗದ ಮೂಲದ ಶರತ್ ಅವರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆ ರಿಪೇರಿ ಸಲುವಾಗಿ ಸ್ನೇಹಿತರೊಬ್ಬರಿಂದ ಐದು ಲಕ್ಷ ರೂ. ಹಣವನ್ನು ಸಾಲವಾಗಿ ಪಡೆದುಕೊಂಡಿದ್ದರು.
ಹಣವನ್ನು ಬ್ಯಾಗಿನಲ್ಲಿ ಇರಿಸಿ KSRTC ವೋಲ್ವೊ ಬಸ್ಸಿನಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ತಮ್ಮ ಸೀಟಿನ ಮೇಲ್ಭಾಗ ಲಗೇಜ್ ಇಡುವ ಜಾಗದಲ್ಲಿ ಬ್ಯಾಗ್ ಇಟ್ಟಿದ್ದರು. ರಾತ್ರಿ 11.15ಕ್ಕೆ ಬೆಂಗಳೂರಿನಿಂದ ಬಸ್ ಹೊರಟಿದೆ. ಅರಸೀಕೆರೆಗೆ ಬರುವವರೆಗೆ ಶರತ್ ಕುಮಾರ್ ಅವರು ಎಚ್ಚರವಿದ್ದರು. ಆ ಬಳಿಕ ನಿದ್ರೆಗೆ ಜಾರಿದ್ದಾರೆ. ಬೆಳಗಿನ ಜಾವ ಭದ್ರಾವತಿಗೆ ಬಂದಾಗ ಎಚ್ಚರವಾಗಿದ್ದು ಬ್ಯಾಗ್ ಇದ್ದಿದ್ದನ್ನು ಗಮನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬೆಳಗಿನ ಜಾವ 5.45ಕ್ಕೆ ಬಸ್ಸು ಶಿವಮೊಗ್ಗಕ್ಕೆ ಬಂದಿದೆ. ಶರತ್ ಅವರು ಬ್ಯಾಗ್ ತೆಗೆದುಕೊಂಡು ಮನೆಗೆ ಬಂದು ಪರಿಶೀಲಿಸಿದಾಗ ಹಣ ಇರಲಿಲ್ಲ. ಎಲ್ಲೆಡೆ ವಿಚಾರಿಸಿದ ಶರತ್ ಅವರು ಅಂತಿಮವಾಗಿ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200